ಒಂದು ಕಾಲದಲ್ಲಿ ಹಣ್ಣುಗಳ ಜಿಲ್ಲೆಯೆಂದೆ ಪ್ರಸಿದ್ದಿ ಪಡೆದ ವಿಜಯಪೂರ ಹಲವಾರು ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿ ಜನರ ಜೀವನ ಅಸ್ಥವ್ಯಸ್ಥವಾಗಿತ್ತು.ಈ ಬಾರಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ರೈತರು ಮೊದಲಿನ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮನಸ್ಸು ಮಾಡುತ್ತಿದ್ದಾರೆ.ಈ ಹೆಚ್ಚಿನ ಪ್ರಮಾಣದ ಮಳೆಯಿಂದ ರೈತರ ಮುಖದಲ್ಲಿನ ಮಂದಹಾಸ ನಗು ಕಣ್ಮರೆಯಾಗುತ್ತಿದೆ.ಪ್ರತಿನಿತ್ಯ ಮಳೆಯಾಗುತ್ತಿರುವದರಿಂದ ತೊಗರಿ ˌಹತ್ತಿ ನೀರಿನ ಪ್ರಮಾಣ ಹೆಚ್ಚಾಗಿ ಹಳದಿ ಬಣ್ಣಕ್ಕೆ ತಿರುಗಿದರೆ ˌಸಜ್ಜಿ ಮತ್ತು ಮೆಕ್ಕೆಜೋಳ ಕೊಯ್ಲಿಗೆ ಬಂದರು ಬಾಯಿಗೆ ಬರದಂತ್ತಾಗಿದೆ.ಮಳೆ— ಗಾಳಿಯಿಂದ ನೆಲಕ್ಕೆ ಬಿದ್ದು ನಾಟಿಗೆ ಒಡೆಯುತ್ತಿವೆ.
ಮತ್ತೆ ಕೆಲವೊಂದು ಕಡೆಗೆ ಮನೆಗಳು ಸಹ ಉರುಳಿರುವದರಿಂದ ಬಡ ರೈತರು ಬೀದಿಗೆ ಬರುವಂತ್ತಾಗಿದೆ ರೈತರು ಬಾಳು ಮಳೆಯೋಡಣೆ ಆಡುವ ಜೂಜಾಟದಂತ್ತಾಗಿದೆ.ಇಷ್ಟೆಲ್ಲಾ ಕಣ್ಣು ಮುಂದೆ ಕಂಡರೂ ಜಾಣ ಕುರುಡರಂತೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ವರ್ತಿಸುವದು ಸಮಂಜಸವಲ್ಲ.ಜಿಲ್ಲೆಯ ಎಲ್ಲರೂ ಸೇರಿ ರೈತರ ಕಷ್ಟವನ್ನು ಆಲಿಸದಿರುವದು ದುರದುಷ್ಟಕರವಾದ ಸಂಗತಿಯಾಗಿದೆ .ಸರಕಾರ ಈ ಮೊದಲೆ ರೈತರ ಜಮಿನಿನ ಸಮೀಕ್ಷೆಯನ್ನು ಆಪ್ ಮೂಲಕ ಮಾಡಲಾಗಿದ್ದು ಸರಕಾರಕ್ಕೆ ರೈತರು ಸಹಕಾರ ನೀಡಿದಂತ್ತಾಗಿದೆ.ಮತ್ತು ಸೂಕ್ತ ಪರಿಹಾರ ನೀಡಲು ಸರಕಾರಕ್ಕೆ ಮೋಸ ಮಾಡುವ ಜಾಲವನ್ನು ಕಟ್ಟಿಹಾಕಿದಂತ್ತಾಗಿದೆ.ರೈತರ ಬೆಳೆ ಹಾನಿಯ ಪ್ರಮಾಣದಲ್ಲಿ ಸೂಕ್ತವಾದ ರೀತಿಯಲ್ಲಿ ಪರಿಹಾರ ನೀಡಲು ಮುಂದಾಗಬೇಕೆಂದು ಜಿಲ್ಲಾಡಳಿತ ವರ್ಗಕ್ಕೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತೆನೆ.
ವಿಠಲ.ಆರ್.ಯಂಕಂಚಿ ಬಮ್ಮನಜೋಗಿ
ರೈತ ಮೊರ್ಚಾ ದೇವರ ಹಿಪ್ಪರಗಿ..