ಪ್ರತಿ ವರ್ಷ ವಿಶೇಷ ವಿಜೃಂಭಣೆಯಿಂದ ಜರುಗುತ್ತಿದ್ದ ನಾಗ ಚತುರ್ಥಿ ಹಬ್ಬ ಕೊರೊನಾ ಮಧ್ಯದಲ್ಲಿ ಕಳೆಗುಂದಿದ.ಆದರೆ ತಮ್ಮ ನಂಬಿಕೆ ಆಚರಣೆ ಬೀಡದೇ ನಾಗಪಂಚಮಿ ಆಚರಿಸುವುದು ಕಂಡುಬಂತು

0

ಅಥಣಿ : ಪ್ರತಿವರ್ಷ ವಿಶೇಷ ವಿಜೃಂಭಣೆಯಿಂದ ಜರುಗುತ್ತಿದ್ದ ನಾಗಚತುರ್ಥಿ ಹಬ್ಬ ಕೊರೊನಾ ಮಧ್ಯದಲ್ಲಿ ಕಳೆಗುಂದಿದೆ.ಆದರೂ ತಮ್ಮ ನಂಬಿಕೆ ಆಚರಣೆ ಬೀಡದೇ ನಾಗಪಂಚಮಿ ಆಚರಿಸುವುದು ಕಂಡುಬಂತು. ಜನತೆ ಕೊರೊನಾ ಕಾರಣದಿಂದ ಯಾವುದೇ ವಿಜೃಂಭಣೆಯ ಕಾರ್ಯಕ್ರಮ  ಮಾಡಲು ಹಿಂದೇಟು ಹಾಕುತ್ತಿದ್ದಾರೆ.

.ಏಕೆಂದರೆ ಅಥಣಿ ಕೊರೊನಾ ಹಾಟಸ್ಪಾಟ್ ಎಂದೆನಿಸಿದ್ದು ಭಯದಿಂದ ತಕ್ಕಮಟ್ಟಿಗೆ ಹಿನ್ನಡೆ ಉಂಟಾಗಿದೆ.

ಆದರೆ ಜನತೆ ತಮ್ಮ ನಂಬಿಕೆ ಹಾಗೂ ಭಯ ಭಕ್ತಿಯ ಹಿನ್ನೆಲೆಯಲ್ಲಿ ಹೇಗೆ ಆದರೂ ಆಚರಿಸಿಕೊಂಡು ಬಂದ ಪರಂಪರೆ ಬಿಡಲಾಗುವುದಿಲ್ಲ ಎಂದು ಆಚರಣೆ ಮಾಡುತ್ತಿದ್ದಾರೆ.ತಮ್ಮ ಮನೆಗಳಲ್ಲಿ ಹಾಗೂ ದೇವಾಲಯಗಳಲ್ಲಿ ನಾಗದೇವತೆಗೆ ಹಾಲೆರೆದರಾದರೂ ಪ್ರತಿವರ್ಷ ದ ಹುರುಪು ಹುಮ್ಮಸ್ಸು ಕಾಣದೆ ಹಬ್ಬ ಕಳೆಗುಂದಿತ್ತು.

ನಾಗಪಂಚಮಿ ಹಬ್ಬದ ನಿಮಿತ್ತ ನಾರಿಯರು ನಾಗಮೂರ್ತಿಗೆ ಹಾಲೆರೆಯುವ ಮೂಲಕ ನಾಗರ ಪಂಚಮಿ ಹಬ್ಬವನ್ನು ಭಕ್ತಿಯಿಂದ ಇಂದು  ಆಚರಿಸಿದರು.

ಹಲ್ಯಾಳ ಸರ್ಕಲ್,ಸಿದ್ದೇಶ್ವರ ದೇವಸ್ಥಾನ ದ ಬಳಿ ಹೀಗೆ  ನಾಗಪಂಚಮಿ ಹಬ್ಬದ ನಿಮಿತ್ತ ನಾರಿಯರು ಸಾಮಾಜಿಕ ಅಂತರದೊಂದಿಗೆ ನಾಗಮೂರ್ತಿಗೆ ಹಾಲೆರೆಯುವ ಮೂಲಕ ನಾಗರ ಪಂಚಮಿ ಹಬ್ಬವನ್ನು ಭಯ ಭಕ್ತಿಯಿಂದ ಇಂದು ಆಚರಿಸಿದರು.

ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಮಠ-ಮಂದಿರಗಳ ನಾಗದೇವರ ಮೂರ್ತಿಗಳಿಗೆ ಮಹಿಳೆ-ಮಕ್ಕಳು ಹಾಲೆರೆದರು. ಎಲ್ಲರೂ ಕುಟುಂಬ ಸಮೇತರಾಗಿ ಆಗಮಿಸಿ ಭಕ್ತಿ ಸಮರ್ಪಿಸುತ್ತಿರುವುದು ಕಂಡು ಬಂದಿತು. ಬೆಳಗ್ಗೆಯಿಂದಲೇ ಮಕ್ಕಳು-ಮಹಿಳೆಯರು ಹೊಸ ಬಟ್ಟೆಯುಟ್ಟು, ಹಾಲು, ನೈವೇದ್ಯದೊಂದಿಗೆ ದೂರದಲ್ಲಿರುವ ನಾಗಮೂರ್ತಿ ಇಲ್ಲವೆ ಹುತ್ತಗಳಿಗೆ ತೆರಳಿ ಹಾಲು ಎರೆಯುತ್ತಿರುವುದು ಸಾಮಾನ್ಯವಾಗಿತ್ತು.

ಶ್ರಾವಣ ತಿಂಗಳ ಮೊದಲ ಶುಕ್ರವಾರ ನಾಗಮೂರ್ತಿಗಳಿಗೆ ಮಹಿಳೆಯರು ಬೆಲ್ಲದ ಹಾಲು ಎರೆದು ಹಬ್ಬ ಆಚರಿಸಿದರೆ, ಶನಿವಾರ ಪಂಚಮಿ ದಿನ ಬಿಳಿ ಹಾಲು ಎರೆದು ಭಕ್ತಿ ಸಮರ್ಪಣೆ ಮಾಡಿದರು.

ಕೆಲವರು ತಮ್ಮ ಮನೆಯ ದೇವರ ಜಗುಲಿಯಲ್ಲಿರುವ ನಾಗಮೂರ್ತಿಗಳಿಗೆ ಹಾಲು ಎರೆದು ಉಪವಾಸ ಆಚರಿಸಿದರು. ಇನ್ನೂ ಕೆಲವರು ಊರೊಳಗಿರುವ ಹುತ್ತುಗಳಿಗೆ ಮತ್ತು ಕಲ್ಲಿನ ಮೂರ್ತಿಗಳಿಗೆ ಹಾಲು ಎರೆದರು.

ಗ್ರಾಮೀಣ ಪ್ರದೇಶದಲ್ಲಿ ಹಬ್ಬದ ವಾತಾವರಣ ಕಳೆ  ಕಳೆದು ಕೊಂಡಿತ್ತು. ಬಡವ ಶ್ರೀಮಂತ ಎನ್ನದೆ ಎಲ್ಲರೂ ಪಂಚಮಿ ಹಬ್ಬ ಆಚರಿಸಿದರು.

ಪೂಜೆ ಪುನಸ್ಕಾರ ಮುಗಿದ ಬಳಿಕ ಮನೆಯಲ್ಲಿ ಸಿಹಿಯೂಟ ಸವಿದು, ಸಂಜೆ ಮನೆ ಹಾಗೂ ಓಣಿಯಲ್ಲಿ ಜೋಕಾಲಿ ಆಡಿ ನಲಿದರು. ನಾಗರಪಂಚಮಿ ಹಬ್ಬದ ನಿಮಿತ್ತ ಮನೆಗಳಲ್ಲಿ ನಾನಾ ಸಿಹಿ ತಿಂಡಿ ಪದಾರ್ಥಗಳನ್ನು ಮಾಡಲಾಗಿತ್ತು.

ಶೇಂಗಾ, ರವಾ, ಎಳ್ಳು, ಹೆಸರು ಇತರೇ ಉಂಡಿಗಳನ್ನು ಮಾಡಲಾಗುತ್ತದೆ. ತಂಬಿಟ್ಟು , ಅಳ್ಳು ಮುಂಚಿತವಾಗಿ ತಯಾರಿಸಿಟ್ಟುಕೊಂಡಿರುತ್ತಾರೆ. ಹಬ್ಬದ ಸಂದರ್ಭದಲ್ಲಿ ಸಿಹಿ ಪದಾರ್ಥಗಳನ್ನು ವಿನಿಮಯ ಮಾಡಿಕೊಳ್ಳುವ ಪದ್ಧತಿ ಕೆಲವು ಕಡೆಗಳಲ್ಲಿ ಇದೆ.ಆದರೆ ಕೊರೊನಾ ದಿಂದ ವಿನಿಮಯ ಅಷ್ಟಾಗಿ ಕಂಡು ಬರಲಿಲ್ಲ. ಇನ್ನೂ ಹಳ್ಳಿಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಗಿಡ ಮರಕ್ಕೆ ಜೋಕಾಲಿ ಕಟ್ಟಿ ಆಟವಾಡುವದು ಕಂಡು ಬರಲಿಲ್ಲ.ಹಳ್ಳಿಯಲ್ಲಿ

ಗೆಳೆಯರಲ್ಲಿ ನಾನಾ ಕಡೆ ಸ್ಪರ್ಧೆಗಳನ್ನು ಆಯೋಜಿಸುವ ಮೂಲಕ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡು ಸಂತೋಷಪಟ್ಟರು.

ಬಂಡಿ ಎಳೆಯುವುದು, ಲಿಂಬೆ ಹಣ್ಣು ಎಸೆವುದು, ಕಲ್ಲು ಎತ್ತುವುದು, ಉಸುಕಿನ ಚೀಲ, ಬಾರ ಎತ್ತುವುದು ಸೇರಿದಂತೆ ಇನ್ನಿತರ ಸ್ಪರ್ಧೆಗಳು  ಇಂದು ಕೆಲವು ಕಡೆ  ನಡೆದವು

ವರದಿ:ಡಾ.ಆರ್ ಎಸ್ ದೊಡ್ಡನಿಂಗಪ್ಪಗೋಳ ಅಥಣಿ.

LEAVE A REPLY

Please enter your comment!
Please enter your name here