ಪ್ರತೀ ಮುಂಜಾನೆ ಮನೆ ಮಂದಿಯಲ್ಲಾ ನಮ್ಮ ನಮ್ಮ ಕಾರ್ಯದಲ್ಲಿ ವ್ಯಸ್ತವಾಗಿರುವಾಗ ತೇಲಿ ಬರುತ್ತಿದ್ದ ಹಾಡುಗಳು ಮತ್ತು ಅವನ್ನ ಹಾಡಿದವರ ಹೆಸರುಗಳು…
ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಗು ಪಿ. ಸುಶೀಲಾ ಹಾಡಿರುವ…
ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಗು ಎಸ್. ಜಾನಕಿ ಅವರ ಕಂಠಸಿರಿಯಲ್ಲಿ…
ಎಸ್. ಪಿ. ಬಾಲಸುಬ್ರಹ್ಮಣ್ಯಂ ಹಾಗು ಚಿತ್ರಾ ಅವರು ಹಾಡಿರುವ ಯುಗಳ ಗೀತೆಯನ್ನು ಕೇಳಿದಿರಿ…
ಮಕ್ಕಳ ಕೈಗೆ ಎಟುಕದಿರಲಿ ಅಂತಾ ಒಂಚೂರು ಹೆಚ್ಚೇ ಅನ್ನಿಸುವಷ್ಟು ಎತ್ತರದಲ್ಲಿ wooden stand ಒಂದನ್ನ ಗೋಡೆಗೆ ಬಡಿಸಿ ಅದರ ಮೇಲೆ ಪ್ರತಿಷ್ಟಾಪಿಸಿದ ಕೆಂಪು ಬಣ್ಣದ ರೇಡಿಯೊ ಮತ್ತು ಅದರ ಪಕ್ಕದಲ್ಲಿ ನೀಟಾಗಿ ಒಂದರಮೇಲೊಂದರಂತೆ ಜೋಡಿಸಿಟ್ಟ ಕ್ಯಾಸೆಟ್ಟುಗಳು…
ಆ ರೇಡಿಯೋದಲ್ಲಿ ಪದೇ ಪದೇ ಕೇಳಿಬರುತ್ತಿದ್ದ ಕೆಲವೇ ಕೆಲವು ಹೆಸರುಗಳ ಪೈಕಿ..
#ಎಸ್ಪಿಬಾಲಸುಬ್ರಹ್ಮಣ್ಯಂ
ಅನ್ನೊ ಹೆಸರು ಕೂಡಾ ಒಂದು…
ಪ್ರತೀ ಸರಿ ಆ ಹೆಸರು ಕಿವಿಗೆ ಬಿದ್ದಾಗಲೂ…
ಯಾರಿವರು?
ನೋಡೋಕೆ ಹೇಗಿರ್ತಾರೆ?
ಎಲ್ಲಿರ್ತಾರೆ?
ರೇಡಿಯೋದ ಒಳಗೇ ಇರ್ತಾರಾ?
ಅವರ ಹೆಸರು ಕೂಗಿದ ತಕ್ಷಣ ಗಂಟಲು ಸರಿಮಾಡಿಕೊಂಡು ಹಾಡೋಕೆ ಶುರು ಮಾಡ್ತಾರಾ?
ಅನ್ನೊ ಪ್ರಶ್ನೆಗಳು ನನ್ನಲ್ಲಿ ಮೂಡುತ್ತಿದ್ದವು…
ಇವೆಲ್ಲಾ ನನ್ನ ಬಾಲ್ಯದ ಚಿತ್ರಣಗಳು…
ಕೆಂಪು ರೇಡಿಯೋ ಜಮಾನಾದಿಂದ YouTube ಅಲ್ಲಿ
SPB Hits ಅಂತಾ search ಮಾಡಿ ಹಾಡುಗಳನ್ನು ಕೇಳುವ ಈ ಕಾಲದವರೆಗೂ ಅನೇಕ ಮಾದ್ಯಮಗಳು ಬಂದವು ಹೋದವು ಆದರೆ ಅವರ ದ್ವನಿಯ ಮೇಲಿನ ಮೋಹ ಮಾತ್ರ ತೀರಲಿಲ್ಲಾ.. ತೀರುವುದೂ ಇಲ್ಲಾ..
ಬದುಕಿನ ಅದೆಷ್ಟೋ ನೆನಪುಗಳು ಅವರ ಹಾಡುಗಳ ಜೊತೆ ತಳುಕು ಹಾಕಿಕೊಂಡಿವೆ.. ಅವರ ದ್ವನಿಯಲ್ಲಿ ಮಿಲಿತವಾಗಿವೆ….
ಹುಟ್ಟಿದ ಊರನ್ನಾ ಮಾತೃ ಬಾಷೆಯನ್ನ ಮರೆತ ಅನೇಕ ನಟ ನಟಿಯರನ್ನಾ ಕನ್ನಡದ ಹೆಮ್ಮೆ.. ಕನ್ನಡ ಕುವರಿ..ಬೆಡಗಿ ಅಂತ ಹಾಡಿಹೊಗಳುತ್ತೇವೆ ….
ಅವರಲ್ಲಾ ಕನ್ನಡದ ಹೆಮ್ಮೆ ಇವರು
ಹುಟ್ಟಿದ್ದು ಇಲ್ಲಲ್ಲದಿದ್ದರೂ.. ಮಾತೃಭಾಷೆ ಬೇರೆ ಆಗಿದ್ದರೂ.. ಇಲ್ಲಿ ಸಿಕ್ಕಷ್ಟೆ ಮಾನ ಸನ್ಮಾನಗಳು ಎಲ್ಲ ಕಡೆಗೂ ಸಿಕ್ಕರೂ.. ಹೋದಲ್ಲಿ ಬಂದಲ್ಲಿ ಕನ್ನಡವನ್ನಾ ..ಕನ್ನಡಿಗರನ್ನಾ ಸದಾ ನೆನೆಯುತ್ತಿದ್ದ..
ಎಸ್. ಪಿ. ಬಾಲಸುಬ್ರಹ್ಮಣ್ಯಂ ಸರ್ ನಿಜವಾಗಿಯೂ ಕನ್ನಡದ ಹೆಮ್ಮೆ…
ಅನೇಕ ಜನರೇಶನ್ನುಗಳನ್ನಾ ಆವರಿಸಿಕೊಂಡು…
ಬಂದು ಹೋದ ಎಲ್ಲ ಟ್ರೆಂಡುಗಳನ್ನೂ ಬ್ಲೆಂಡುಮಾಗಿ ಅರಗಿಸಿಕೊಂಡು…
ಹಿಮಾಲಯದಷ್ಟು ಸಾಧಿಸಿದ ಮೇಲೂ ಹಿಮದ ಬಿಂದುವಿನಂತೆ ತಣ್ಣಗೆ ಬದುಕಿದ ನೀವು …
ಎಂದಿಗೂ ಮುಗಿಯದ ಹಾಡೊಂದರಂತೆ ನಮ್ಮೊಳಗೆ ಸದಾ ಗುನುಗುತ್ತ ಉಳಿಯುತ್ತೀರಿ ಸರ್…
ಇದೇ ನಾಡು ಇದೇ ಭಾಷೆ ಎಂದೆಂದೂ ನಿಮ್ಮದಾಗಿರುತ್ತೆ..
😔😞😥ಹೋಗಿ ಬನ್ನಿ ಸರ್…