ಪ್ರಧಾನಿ ಮೋದಿಗೆ ಅವ್ರಮ್ಮ ಪ್ರತಿ ಬಾರಿ ಫೋನ್ ಮಾಡಿದಾಗ್ಲೂ ಕೇಳೊದೇನು ಗೊತ್ತಾ..?

0

ಪ್ರಧಾನಿ ನರೇಂದ್ರ ಮೋದಿಯವರು ಇಂದು ಫಿಟ್​ ಇಂಡಿಯಾ ಅಭಿಯಾನದ ಮೊದಲ ವಾರ್ಷೀಕೋತ್ಸವದ ಅಂಗವಾಗಿ ಇಂದು ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. ‘ಫಿಟ್ ನೆಸ್’ ಗೆ ಐಕಾನ್ ಗಳೆಂದು ಪರಿಗಣಿಸಲಾಗುವ ಮಿಲಿಂದ್ ಸೋಮನ್, ವಿರಾಟ್ ಕೊಹ್ಲಿ ಸೇರಿದಂತೆ ಕೆಲ ಪ್ರಮುಖ ವ್ಯಕ್ತಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ, ಖ್ಯಾತ ಪೌಷ್ಟಿಕಾಂಶಗಳ ತಜ್ಞ ರಜುತಾ ದಿವಾಕರ್ ಅವರೊಂದಿಗೆ ಮಾತನಾಡುತ್ತಾ, ‘ ವಾರದಲ್ಲಿ ಎರಡು ದಿನ ನನ್ನತಾಯಿ ನನಗೆ ದೂರವಾಣಿ ಕರೆ ಮಾಡುತ್ತಾರೆ. ನನ್ನ ಯೋಗ ಕ್ಷೇಮ ಕೇಳುತ್ತಾರೆ. ಫೋನ್ ಕರೆಮಾಡಿದಾಗಲೆಲ್ಲಾ, ಪ್ರತಿ ದಿನ ಹರಿಶಿನ ಬಳಸುತ್ತಿದ್ದೀಯಾ..? ಎಂದು ಕೇಳುತ್ತಾರೆ ಎಂದಿದ್ದಾರೆ. ಈ ಮೂಲಕ ತಮ್ಮ ಆಹಾರದ ಡಯಟ್ ಕುರಿತ ರಹಸ್ಯವನ್ನ ಬಹಿರಂಗಪಡಿಸಿದ್ದಾರೆ.

LEAVE A REPLY

Please enter your comment!
Please enter your name here