‘ಪ್ರಧಾನಿ ಮೋದಿ ಫೋಟೋ ಬಳಸಬೇಡಿ- ಎಲ್​ಜೆಪಿಗೆ ಬಿಜೆಪಿ ವಾರ್ನಿಂಗ್

0

ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವಂತೆಯೇ ಎನ್​ಡಿಎ ಮೈತ್ರಿ ಕೂಟದ ರಾಜಕೀಯ ಚಟುವಟಿಕೆಗಳಲ್ಲೂ ಬಿರುಸುಕಾಣಿಸಿದೆ. ಬಿಹಾರದ ಮಟ್ಟಿಗೆ ಮೈತ್ರಿಯಿಂದ ದೂರ ಉಳಿದಿರುವ ರಾಮವಿಲಾಸ್ ಪಾಸ್ವಾನ್ ಅವರ ಲೋಕಜನಶಕ್ತಿ ಪಾರ್ಟಿ (ಎಲ್​ಜೆಪಿ)ಗೆ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಪ್ರಚಾರಕ್ಕೆ ಬಳಸುವಂತಿಲ್ಲ ಎಂದು ಬಿಜೆಪಿ ವಾರ್ನಿಂಗ್ ನೀಡಿದೆ.

ಬಿಹಾರದಲ್ಲಿ ಜೆಡಿಯು ಜತೆಗಿನ ಮೈತ್ರಿ ಬಲವಾಗಿದ್ದು, ಬಿಜೆಪಿ ಅದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಎಲ್​ಜೆಪಿ ನಮಗೆ ಕೇಂದ್ರದಲ್ಲಿ ಮಿತ್ರಪಕ್ಷ. ಅದು ಹಾಗೆಯೇ ಮುಂದುವರಿಯಲಿದೆ. ಆದರೆ, ಈ ಸಲದ ಚುನಾವಣೆಯಲ್ಲಿ ಎಲ್​ಜೆಪಿಯವರು ಪ್ರಧಾನಿ ಮೋದಿಯವ ಫೋಟೋವನ್ನು ಪ್ರಚಾರಕ್ಕೆ ಬಳಸುವಂತಿಲ್ಲ ಎಂದು ನಿತೀಶ್ ಕುಮಾರ್​ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಮುಖ್ಯಸ್ಥ ಸಂಜಯ್ ಜೈಸ್ವಾಲ್ ಪರೋಕ್ಷವಾಗಿ ಎಚ್ಚರಿಸಿದ್ದಾರೆ.

ಪ್ರಧಾನಿ ಮೋದಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಫೋಟೋವನ್ನು ಕೆಲವರು ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಇದು ಮುಂದುವರಿದರೆ ಚುನಾವಣಾ ಆಯೋಗಕ್ಕೆ ದೂರು ಕೊಡಬೇಕಾಗುತ್ತದೆ. ಪಕ್ಷೇತರರು ಮತ್ತು ಇತರರ ಈ ನಡೆ ಚುನಾವಣಾ ನಿಯಮ ಉಲ್ಲಂಘನೆ ಎಂದು ಪರಿಗಣಿಸಲ್ಪಡುತ್ತದೆ ಎಂದು ಅವರು ಹೇಳಿದರು. (ಏಜೆನ್ಸೀಸ್)

LEAVE A REPLY

Please enter your comment!
Please enter your name here