ಪ್ರಧಾನಿ ಮೋದಿ ಹುಟ್ಟು ಹಬ್ಬ ಆಯಿತು ರಾಷ್ಟ್ರೀಯ ನಿರುದ್ಯೋಗಿ ದಿನ
ಸೆಪ್ಟೆಂಬರ್ 17 ರಂದು ಕರ್ನಾಟಕ ಮೂಲದ ತಮಿಳುನಾಡಿನ ಸಾಮಾಜಿಕ ಹೋರಾಟಗಾರ, ವಿಚಾರವಾದಿ ಪೆರಿಯಾರ್ ರಾಮಸ್ವಾಮಿ ಯವರ ಹುಟ್ಟು ಹಬ್ಬ ಇಡೀ ದೇಶದ ಗಮನ ಸೆಳೆದಿತ್ತು.
ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ದಿನವಾದ ನೆನ್ನೆ ಬಿಜೆಪಿ ಪಕ್ಷದ ಪಾಲಿಗಂತು ಹಬ್ಬವಾಗಿತ್ತು. ಪ್ರಧಾನಿಯ 70ನೇ ವರ್ಷದ ಹುಟ್ಟು ಹಬ್ಬದ ಸಲುವಾಗಿ ಬಿಜೆಪಿ ಪಕ್ಷವೂ 70 ವಿಭಿನ್ನ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿ ಮಾಡುತ್ತಲಿತ್ತು, ಆದರೆ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಭಾರತದ ಪ್ರಜೆಗಳೆಲ್ಲರೂ ರಾಷ್ಟ್ರೀಯ ನಿರುದ್ಯೋಗಿ ದಿನವನ್ನಾಗಿ ಆಚರಿಸಿ, ಟ್ವಿಟರ್ ನಲ್ಲಿ #ರಾಷ್ಟ್ರೀಯ ನಿರುದ್ಯೋಗಿ ದಿನ ಎಂದು ಟ್ರೆಂಡ್ ಮಾಡಿ ಪ್ರಧಾನಿಗೆ ಟ್ವೀಟ್ ಬಾಣದ ಮೂಲಕ ಶುಭಾಶಯಗಳನ್ನು ಕೋರಿ ಕುಟುಕಿದ್ದಾರೆ.
ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ ಮತ್ತು ಇತರೆ ದಕ್ಷಿಣ ಮತ್ತು ಉತ್ತರ ಭಾರತದ ಹಲವು ರಾಜ್ಯಗಳ ಪ್ರಜೆಗಳು ಈ ಟ್ರೆಂಡ್ ಹುಟ್ಟು ಹಾಕಿ ಪ್ರಧಾನಿ ನರೇಂದ್ರ ಮೋದಿಗೆ ತಮ್ಮ ಹುಟ್ಟು ಹಬ್ಬಕ್ಕೆ ಮುಜುಗರ ಪಡುವಂತೆ ಮಾಡಿದ್ದಾರೆ. ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದಾಗಲೂ ಮತ್ತು ನಾನಾ ಕಾರಣ ಹೂಡಿ ಸರ್ಕಾರಿ ಸ್ವಾಮ್ಯದ ಮತ್ತು ಖಾಸಗಿ ವಲಯದ ಉದ್ಯೋಗ ಕಡಿತಗೊಂಡ ನಿರುದ್ಯೋಗಿ ಯುವಕರು ರಾಷ್ಟ್ರೀಯ ನಿರುದ್ಯೋಗಿ ದಿನವನ್ನಾಗಿ ಆಚರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಸೆಪ್ಟೆಂಬರ್ 17 ರಂದು ಟ್ವಿಟರ್ ನಲ್ಲಿ ಈ ಟ್ರೆಂಡ್ ಮೊದಲ ಸ್ಥಾನದಲ್ಲಿ ತಲುಪಿ ಪ್ರಧಾನಿ ನರೇಂದ್ರ ಮೋದಿಗೆ ಟ್ವೀಟ್ ಬಾಣದ ಮೂಲಕ ನೆಟ್ಟಿಗರು ಗರಂ ಆಗಿದ್ದರು. ಟ್ವಿಟರ್ ನಲ್ಲಿ ಟ್ರೆಂಡ್ ಆಗಿದ್ದ ಹ್ಯಾಷ್ ಟ್ಯಾಗ್ ಗಳು ಹತ್ತು ಲಕ್ಷಕ್ಕಿಂತ ಹೆಚ್ಚು ಟ್ವೀಟ್, ರೀಟ್ವೀಟ್ ಆಗಿದ್ದವು. ದಿನ ಪೂರ್ತಿ ಹಲವಾರು ಗಂಟೆಗಳ ಕಾಲ #ರಾಷ್ಟ್ರೀಯ ನಿರುದ್ಯೋಗಿ ದಿನ ಹಾಷ್ಟ್ಯಾಗ್ ಹೆಚ್ಚು ಪ್ರಚಲಿತವಾಗಿದ್ದವು.
ನೆನ್ನೆ ಟ್ವಿಟರ್ ನಲ್ಲಿ ಟ್ರೆಂಡ್ ಆದ ಹ್ಯಾಷ್ ಟ್ಯಾಗ್ ಗಳು ಹೀಗಿವೆ #ರಾಷ್ಟ್ರೀಯ ನಿರುದ್ಯೋಗಿ ದಿನ
#National unemployment day