ಪ್ರಧಾನಿ ಮೋದಿ 70ನೇ ಜನ್ಮದಿನದಂದು ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ

0

ಇದೇ ಬರುವ ಸೆ. 17 ರಂದು ಪ್ರಧಾನಿ ನರೇಂದ್ರ ಮೋದಿಜಿಯವರು ತಮ್ಮ ಬದುಕಿನ 70 ನೇ ವಸಂತಕ್ಕೆ ಕಾಲಿರಿಸಲಿದ್ದು, ಅದನ್ನು ಅರ್ಥಪೂರ್ಣವಾಗಿ ಆಚರಿಸಲು ಮಂಗಳೂರಿನ ಸಮಾಜಮುಖಿ ಸೇವಾಸಂಸ್ಥೆ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನಿರ್ಧರಿಸಿದೆ.

ಈಗಾಗಲೇ ಲಾಕ್ ಡೌನ್ ಅವಧಿಯಲ್ಲಿ ಅನೇಕ ಮಾನವೀಯ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬಂದಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯಕರ್ತರು ಕೊರೊನಾ ಸಾಂಕ್ರಾಮಿಕ ಕಾಯಿಲೆಯ ವಿರುದ್ಧ ಹೋರಾಟ ಮಾಡುತ್ತಿರುವ ಈ ದಿನಗಳಲ್ಲಿ ಆಸ್ಪತ್ರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಕ್ತದ ಅವಶ್ಯಕತೆ ಕೂಡ ಕಂಡು ಬರುತ್ತಿರುವುದನ್ನು ಮನಗಂಡು ಟ್ರಸ್ಟ್ ನ ಪ್ರಮುಖರು ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿರುವ ಟಿ.ವಿ.ರಮಣ್ ಪೈ ಸಭಾಂಗಣದ ಆವರಣದಲ್ಲಿ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದಾರೆ.

ಪ್ರಧಾನಿ ಜನ್ಮದಿನದಂದೇ ಈ ಶಿಬಿರ ನಡೆಯಲಿದ್ದು ಬೆಳಿಗ್ಗೆ 10 ಗಂಟೆಗೆ ಗಣ್ಯರು ಉದ್ಘಾಟಿಸಲಿದ್ದಾರೆ. ಮೋದಿಯವರ 70 ನೇ ಜನ್ಮದಿನವಾಗಿರುವುದರಿಂದ ಆಂದು ರಕ್ತದಾನ ಮಾಡಲು ಬರುವ ಮೊದಲ 70 ರಕ್ತದಾನಿಗಳಿಗೆ ಮೋದಿಜಿಯವರ ಆಕರ್ಷಕ ಚಿತ್ರವಿರುವ ಉತ್ತಮ ಗುಣಮಟ್ಟದ ಟೀ ಶರ್ಟ್, ಮಾಸ್ಕ್, ರಿಸ್ಟ್ ಬ್ಯಾಂಡ್, ಮಗ್ಗ್ ಮತ್ತು ಕೇಂದ್ರ ಸರಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತ ಒಂದು ತಿಂಗಳಿಗಾಗುವಷ್ಟು ಆಯುಷ್ ಕ್ವಾಥ್ ಚೂರ್ಣವನ್ನು ನೀಡುವುದಾಗಿ ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ಈ ರಕ್ತದಾನ ಶಿಬಿರದಲ್ಲಿ ಹಲವಾರು ಹಿತಚಿಂತಕರು ಭಾಗವಹಿಸಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ನ ಉತ್ತಮ ಕಾರ್ಯದೊಂದಿಗೆ ಕೈ ಜೋಡಿಸಲಿದ್ದಾರೆ.

LEAVE A REPLY

Please enter your comment!
Please enter your name here