ಪ್ರಭಾಸ್​ ‘ಆದಿಪುರುಷ್​’ ಸಿನಿಮಾದಲ್ಲಿ ಪ್ರಧಾನಿ ಮೋದಿಯೂ ಇರಲಿದ್ದಾರೆ!; ಪಾತ್ರ ಏನಿರಬಹುದು?

0

ಈಗಾಗಲೇ ರಾಧೆ ಶ್ಯಾಮ್​ ಸೇರಿ ದೀಪಿಕಾ ಪಡುಕೋಣೆ ಜತೆಗೆ ಸಿನಿಮಾ ಮಾಡುವ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿರುವ ಪ್ರಭಾಸ್​, ಸದ್ದಿಲ್ಲದೆ ಆದಿಪುರುಷ್ ಸಿನಿಮಾ ಘೋಷಣೆ ಮಾಡಿದ್ದರು. ಇದೀಗ ಇದೇ ಸಿನಿಮಾಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿಯೊಂದು ಸದ್ಯ ಸಂಚಲನ ಮೂಡಿಸುತ್ತಿದೆ. ಅದೇನೆಂದರೆ ಈ ಚಿತ್ರದಲ್ಲಿ ಪ್ರಧಾನಿ ಮೋದಿ ಸಹ ಕಾಣಿಸಿಲಿದ್ದಾರೆ ಎಂಬುದು!

ಹಾಗಾದರೆ ಆದಿಪುರುಷ್​ ಸಿನಿಮಾದಲ್ಲಿ ಮೋದಿ ಯಾವುದಾದರೂ ಪಾತ್ರ ನಿಭಾಯಿಸಲಿದ್ದಾರಾ? ಹಾಗೆಂದುಕೊಂಡರೆ ನಿಮ್ಮ ಊಹೆ ತಪ್ಪು. ಬದಲಿಗೆ ಸಿನಿಮಾದಲ್ಲಿ ಬೇರೆ ರೀತಿಯಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಇತ್ತೀಚೆಗಷ್ಟೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಭೂಮಿ ಪೂಜೆ ಮಾಡಿದ್ದರು. ಆ ಭೂಮಿ ಪೂಜೆಯ ದೃಶ್ಯಾವಳಿಗಳನ್ನು ಈ ಸಿನಿಮಾದಲ್ಲಿ ಬಳಸಿಕೊಳ್ಳಲು ಚಿತ್ರತಂಡ ಪ್ಲಾನ್​ ಮಾಡಿಕೊಂಡಿದೆ. ಅಷ್ಟಕ್ಕೂ ಮೋದಿಗೂ ಆದಿಪುರಷ ಚಿತ್ರಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಮೂಡಬಹುದು ಅದಕ್ಕೂ ಇಲ್ಲಿ ಉತ್ತರ ಇದೆ.

ಆದಿಪುರುಷ್​ ಸಿನಿಮಾ ಶ್ರೀರಾಮನಿಗೆ ಸಂಬಂಧಿಸಿದ್ದು. ಈ ಚಿತ್ರದಲ್ಲಿ ಪ್ರಭಾಸ್​ ಶ್ರೀರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ಆ ಒಂದು ಕಾರಣಕ್ಕೆ ಸಿನಿಮಾದ ಕೊನೆಯ ಭಾಗದಲ್ಲಿ ಅಯೋಧ್ಯೆ ಭೂಮಿ ಪೂಜೆಯ ದೃಶ್ಯಾವಳಿಗಳನ್ನು ಬಳಸಿಕೊಳ್ಳಲಿದ್ದಾರಂತೆ ನಿರ್ದೇಶಕರು.

ಬಾಲಿವುಡ್ ಚಿತ್ರ ನಿರ್ಮಾಪಕ ಭೂಷಣ್ ಕುಮಾರ್ ಅವರ ಟಿ ಸಿರೀಸ್​ ಬ್ಯಾನರ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದು, ತಾನಾಜಿ; ದಿ ಅನ್​ಸಂಗ್​ ವಾರಿಯರ್​ ಚಿತ್ರ ನಿರ್ದೇಶನ ಮಾಡಿದ್ದ ಓಂ ರಾವತ್, ಈ ಸಿನಿಮಾಕ್ಕೆ ಆಯಕ್ಷನ್ ಕಟ್​ ಹೇಳಲಿದ್ದಾರೆ.

ಹಿಂದಿ ಮತ್ತು ತೆಲುಗಿನಲ್ಲಿ 3ಡಿಯಲ್ಲಿ ಮೂಡಿಬರಲಿರುವ ಈ ಚಿತ್ರ ಕನ್ನಡ, ತಮಿಳು, ಮಲಯಾಳಂ ಸೇರಿ ಹಲವು ವಿದೇಶಿ ಭಾಷೆಗೂ ಈ ಚಿತ್ರ ಡಬ್​ ಆಗಲಿದೆ. 2021ಕ್ಕೆ ಸೆಟ್ಟೇರಲಿರುವ ಈ ಚಿತ್ರ 2022ಕ್ಕೆ ಬಿಡುಗಡೆ ಮಾಡಿಕೊಳ್ಳಲು ಪ್ಲಾನ್​ ಮಾಡಿಕೊಂಡಿದೆ.

LEAVE A REPLY

Please enter your comment!
Please enter your name here