ಪ್ರವಾಸದ ವೇಳೆ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ: ಸಹ ಪ್ರಾಧ್ಯಾಪಕ ಬಂಧನ

0

ವಿಕಲಾಂಗ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕೇರಳದ ಕೋಯಿಕ್ಕೋಡ್ ಕಾಲೇಜಿನ ಪ್ರಾಧ್ಯಾಪಕರೊಬ್ಬರನ್ನು ಬಂಧಿಸಲಾಗಿದೆ.

ಖಮರುದ್ದೀನ್​ ಬಂಧಿತ ಆರೋಪಿ. ಈತ ಫರೂಕ್​ ಕಾಲೇಜಿನ ಮಲಯಾಳಂ ವಿಭಾಗದ ಸಹಾಯಕ ಪ್ರಾಧ್ಯಪಕ. ಈತನನ್ನು ಬುಧವಾರ ಬಂಧಿಸಲಾಗಿದ್ದು, ಫರೂಕ್​ ಠಾಣಾ ಪೊಲೀಸರು ಮಾಹಿತಿ ಖಚಿತಪಡಿಸಿದ್ದಾರೆ.

2019ರ ಡಿಸೆಂಬರ್ ತಿಂಗಳಲ್ಲಿ ಕಾಲೇಜಿನಿಂದ ಪ್ರವಾಸಕ್ಕೆ ಹೋಗಿದ್ದ ಸಮಯದಲ್ಲಿ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ನಡೆದಿತ್ತು. ಪ್ರಯಾಣದ ನಡುವೆಯೇ ಪ್ರಾಧ್ಯಪಕ ದೌರ್ಜನ್ಯ ಎಸಗಿದ್ದ. ತನ್ನ ಮೇಲೆ ಆದ ಕ್ರೌರ್ಯವನ್ನು ವಿದ್ಯಾರ್ಥಿನಿ ಸಹಪಾಠಿಗಳ ಜತೆ ಹೇಳಿಕೊಂಡ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು.

ಪ್ರಕರಣ ಸಂಬಂಧ ಕಳೆದ ಜನವರಿಯಲ್ಲಿ ಕಾಲೇಜಿನಲ್ಲಿ ದೂರು ನೀಡಲಾಗಿತ್ತು. ವಿದ್ಯಾರ್ಥಿ ಸಂಘಟನೆಗಳು ಸಹ ಆರೋಪಿ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದವು. ಪ್ರಕರಣದ ತನಿಖೆ ನಡೆಸಲು ಕಾಲೇಜು ಆಡಳಿತ ಮಂಡಳಿ ಆಂತರಿಕ ತನಿಖಾ ಸಮಿತಿ ರಚನೆ ಮಾಡಿ, ಆರೋಪಿ ಅಮಾನತ್ತು ಮಾಡಿತ್ತು. ಪೊಲೀಸ್​ ತನಿಖೆಗೆ ಸಹಕರಿಸುವುದಾಗಿಯೂ ಆಡಳಿತ ಮಂಡಳಿ ತಿಳಿಸಿತ್ತು.

ಪ್ರಕರಣದ ತನಿಖೆ ನಡೆಸಿದ ಕೇರಳ ಪೊಲೀಸರು ಆರೋಪಿ ಖಮರುದ್ದೀನ್​ನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here