ಪ್ರವಾಸಿಗರಿಗೆ ಮುಕ್ತವಾದ ಪ್ರೇಮಸೌಧ: ಬರೋಬ್ಬರಿ 6 ತಿಂಗಳ ನಂತ್ರ ರೀಓಪನ್..!

0

ಕೊರೊನಾ ಕಾರಣದಿಂದ ಕಳೆದ ಆರು ತಿಂಗಳಿನಿಂದ ಮುಚ್ಚಲಾಗಿದ್ದ ವಿಶ್ವ ವಿಖ್ಯಾತ ತಾಜ್‌ ಮಹಲ್ ಪ್ರವಾಸಿಗರಿಗೆ ಮುಕ್ತವಾಗಿದೆ. ಲಾಕ್‌ಡೌನ್‌ ತೆರವುಗೊಳಿಸಿದ್ರು ಸರ್ಕಾರ ಪ್ರವಾಸಿಗರ ತಾಜ್‌ ಭೇಟಿಯನ್ನ ನಿಷೇಧಿಸಲಾಗಿತ್ತು. ಇನ್ನೂ ಅತ್ತ ಆಗ್ರಾ ಕೋಟೆಯನ್ನೂ ಮುಚ್ಚಲಾಗಿತ್ತು. ಇದನ್ನು ಲಾಕ್‌ಡೌನ್‌ಗಿಂತ ಮುನ್ನ ಅಂದರೆ ಮಾರ್ಚ್ 17ರಂದೇ ಮುಚ್ಚಲಾಗಿತ್ತು. ಇದಾದ ಬಳಿಕ ಬರೋಬ್ಬರಿ 188 ದಿನಗಳು ಕಳೆದಿದ್ದು, ಸಧ್ಯ ತಾಜ್ ಹಾಗೂ ಆಗ್ರಾ ಕೋಟೆಯನ್ನು ಮತ್ತೆ ತೆರೆಯಲಾಗಿದೆ.

ಪ್ರೇಮಸೌಧಕ್ಕೆ ಭೇಟಿ ನೀಡಲು ಬಯಸುವ ಪ್ರವಾಸಿಗರು ಕಡಖಂಡಿತವಾಗಿ ಸರ್ಕಾರ ರೂಪಿಸಲಾದ ಕೋವಿಡ್ 19 ಮಾರ್ಗಸೂಚಿಗಳನ್ನಪಾಲಿಸಲೇಬೇಕು. ಸದ್ಯ ತಾಜ್‌ ಗೇಟ್ ಬಳಿ ಪ್ರವಾಸಿಗರ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತದೆ. ಇದಾದ ಬಳಿಕವೇ ಒಳ ಪ್ರವೇಶಿಸಲು ಬಿಡಲಾಗುತ್ತದೆ. ಹೊಸ ಮಾರ್ಗಸೂಚಿ ಅನ್ವಯ ತಾಜ್‌ ಮಹಲ್‌ಗೆ ಒಂದು ದಿನ ಗರಿಷ್ಟ ಐದ ಸಾವಿರ ಮಂದಿ ಭೇಟಿ ನೀಡಬಹುದು. ಅತ್ತ ಆಗ್ರಾ ಕೋಟೆಗೆ ಗರಿಷ್ಟ 2,500 ಪ್ರವಾಸಿಗರಿಗಷ್ಟೇ ಭೇಟಿ ನೀಡಲು ಅವಕಾಶ ನೀಡಲಾಗುತ್ತದೆ. ಇನ್ನು ಎರಡೂ ಸ್ಮಾರಕಗಳ ಬಳಿ ಇರುವ ಟಿಕೆಟ್‌ ಕೌಂಟರ್‌ ತೆರೆದಿರುವುದಿಲ್ಲ. ಹಾಗಾಗಿ ಪ್ರವಾಸಿಗರು ಎಎಸ್‌ಐ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಟಿಕೆಟ್ ಬುಕ್ ಮಾಡಬೇಕು. ಇನ್ನು ಶಾಹ್‌ಜಹಾನ್‌ ಹಾಗೂ ಮುಮ್ತಾಜ್ ಮಹಲ್‌ರವರ ಗೋರಿ ಇರುವ ಮುಖ್ಯ ಕೋಣೆಗೆ ಒಂದು ಬಾರಿ ಕೇವಲ ಐದು ಮಂದಿಗಷ್ಟೇ ಪ್ರವೇಶ ನೀಡಲಾಗಿದೆ.

LEAVE A REPLY

Please enter your comment!
Please enter your name here