ಪ್ರವಾಹ ಸಂಕಷ್ಟದಲ್ಲಿ ರಕ್ಷಣೆಗೆ ಅರಳಿ ಮರವೇರಿದ ಹತ್ತಾರು ಹಾವುಗಳು!

0

ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವಾರು ನದಿಗಳು ತುಂಬಿ ಹರಿಯುತ್ತಿದ್ದು, ಹಲವೆಡೆ ಪ್ರವಾಹ ಉಂಟಾಗಿದೆ. ಹಲವು ಮನೆಗಳು ಜಲಾವೃತವಾಗಿದ್ದು, ಜನರು ಮನೆಮಠ ಕಳೆದುಕೊಂಡ ಬಗ್ಗೆ ವರದಿಯಾಗಿದೆ. ಅದೇ ರೀತಿ ಪ್ರವಾಹದ ಕಾರಣ ಜಲಚರಗಳು ಕೂಡಾ ಸಂಕಷ್ಟಕ್ಕೆ ಸಿಲುಕಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ತುಂಗಾ ನದಿ ಪ್ರವಾಹ ಉಂಟಾಗಿದ್ದು, ಹಾವುಗಳು ಪ್ರವಾಹದ ರಭಸಕ್ಕೆ ಕೊಚ್ಚಿಹೋಗುವ ಭೀತಿ ಉಂಟಾಗಿದೆ. ಪ್ರವಾಹಕ್ಕೆ ಸಿಲುಕಿದ 10 ಕ್ಕೂ ಹೆಚ್ಚು ಹಾವುಗಳು ನೀರಿನಿಂದ ರಕ್ಷಣೆ ಪಡೆಯಲು ನದಿ ಅಂಚಿನ ಮರವೇರಿದೆ.

ಶಿವಮೊಗ್ಗದ ತುಂಗಾ ಸೇತುವೆ ಬಳಿ ಇರುವ ಸಣ್ಣ ಅರಳೀಮರದಲ್ಲಿ 10ಕ್ಕೂ ಹೆಚ್ಚು ಹಾವುಗಳು ಏರಿ ಕುಳಿತಿದ್ದು, ಪ್ರವಾಹದಿಂದ ರಕ್ಷಣೆ ಪಡೆದಿದೆ.

LEAVE A REPLY

Please enter your comment!
Please enter your name here