ಪ್ರಾಮಾಣಿಕ, ನಿಸ್ವಾರ್ಥ ಮನೋಭಾವದಿಂದ ಜನಪರವಾದ ಕೆಲಸ ಕಾರ್ಯ ಮಾಡಿದವರರನ್ನು ಸಮಾಜ, ವ್ಯಕ್ತಿ ಗುರುತಿಸಿ ಗೌರವಿಸುತ್ತದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಇಂದು ಹೇಳಿದರು.
ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಪ್ರಯುಕ್ತ ಚಮಕೇರಿಯ ಅಪ್ಪ ಪೌಂಡೇಶನ್ ವತಿಯಿಂದ ಕಲ್ಲೋಳಿಯ ತಮ್ಮ ಕಚೇರಿಯಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ನನಗೆ ಪ್ರೀತಿಯಿಂದ ಬರಮಾಡಿಕೊಂಡ ಕಲ್ಲೋಳಿಯ ಜನರನ್ನು ನಾನು ಯಾವತ್ತು ಮರೆಯಲಾರೆ. ಪ್ರಾಮಾಣಿಕವಾಗಿ ಜನರೊಡನೆ ಬೆರೆತು ಪ್ರತಿಕೆಲಸವನ್ನು ನಿಷ್ಠೆಯಿಂದ ಮಾಡಿಕೊಂಡು ಹೊಗೋಣವೆಂದ ಅವರು ಚಮಕೇರಿಯ ಅಪ್ಪ ಪೌಂಡೇಶನ್ ಹಮ್ಮಿಕೊಂಡು ಬರುತ್ತಿರುವ ಸಾಮಾಜಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳು ಜನರ ಮನಸ್ಸನ್ನು ಗೆದ್ದಿವೆ ಎಂದರು.
ಪೌಂಡೇಶನ್ ಅದ್ಯಕ್ಷ ಮಹಾದೇವ ಬಿರಾದಾರ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಉಪಾದ್ಯಕ್ಷ ಶ್ರೀಮತಿ ಮಂಜುಳಾ ಹಿರೇಮಠ, ಪ್ರಖ್ಯಾತ ಚಿತ್ರಕಲಾವಿದ ಮುತ್ತುರಾಜ, ಭಾಗ್ಯವತಿ ಬಿರಾದಾರ ಸೇರಿದಂತೆ ಇತರರು ಇದ್ದರು.