‘ಪ್ರೇಮಂ’ ನಿರ್ದೇಶಕರೊಂದಿಗೆ ಫಾ ಫಾಸಿಲ್ ಹೊಸ ಚಿತ್ರ ‘ಪಾಟ್ಟು’

0

2015ರ ಸೂಪರ್ ಹಿಟ್ ಚಿತ್ರ ‘ಪ್ರೇಮಂ’ ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ಅವರು ತಮ್ಮ ಮುಂದಿನ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ.

ಸಂಗೀತದ ಕಥೆಯ ಹಿನ್ನಲೆಯನ್ನು ಹೊಂದಿರುವ ಈ ಚಿತ್ರಕ್ಕೆ ‘ಪಾಟ್ಟು’ (ಹಾಡು) ಎಂದು ಹೆಸರಿಡಲಾಗಿದೆ ಮತ್ತು ಈ ಚಿತ್ರದಲ್ಲಿ ಮಳಯಾಲಂನ ವರ್ಸಟೈಲ್ ಆಯಕ್ಟರ್ ಫಹಾದ್ ಫಾಸಿಲ್ (ಫಾ ಫಾಸಿಲ್) ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರೇಮಂನಂತಹ ಸೂಪರ್ ಹಿಟ್ ಚಿತ್ರವನ್ನು ಕೊಟ್ಟ ಬಳಿಕವೂ ಆಲ್ಫೋನ್ಸ್ ಅವರು ಸುಮಾರು 5 ವರ್ಷಗಳ ಕಾಲ ಯಾವುದೇ ಚಿತ್ರವನ್ನು ನಿರ್ದೇಶನ ಮಾಡಿರಲಿಲ್ಲ.

ಈ ಗ್ಯಾಪಿನಲ್ಲಿ ಆಲ್ಫೋನ್ಸ್ ಅವರು ‘ಪಾಟ್ಟು’ ಕಥೆಯನ್ನು ಫೈನಲ್ ಮಾಡಿದ್ದು, ಈ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ಸಹ ಆಲ್ಫೋನ್ಸ್ ಅವರೇ ಮಾಡಲಿದ್ದಾರೆ. ಹಾಗಾಗಿ ಸಂಗೀತದ ಎಬಿಸಿಡಿ ಕಲಿಯಲು ಇಷ್ಟು ಸಮಯ ವ್ಯಯಿಸಿದ್ದಾಗಿ ಆಲ್ಫೋನ್ಸ್ ಅವರು ತಮ್ಮ ಫೇಸ್ಬಕ್ ಪುಟದಲ್ಲಿ ಹೇಳಿಕೊಂಡಿದ್ದಾರೆ.

ಈ ಚಿತ್ರವನ್ನು ಯುಜಿಎಂ ಎಂಟೆರಟೈನ್ ಮೆಂಟ್ಸ್ ನವರು ನಿರ್ಮಾಣ ಮಾಡಲಿದ್ದಾರೆ.

ಪ್ರೇಮಂ ಬಳಿಕ ನಟ ಸಿಂಬು ಅಭಿನಯದಲ್ಲಿ ತಮಿಳು ಆಯಕ್ಷನ್ ಸಿನೆಮಾ ಒಂದನ್ನು ಆಲ್ಫೋನ್ಸ್ ಅವರು ಅನೌನ್ಸ್ ಮಾಡಿದ್ದರು. ಆದರೆ ಬಳಿಕ ಆ ಪ್ರಾಜೆಕ್ಟ್ ಟೇಕಾಫ್ ಆಗಿರಲಿಲ್ಲ. ಬಳಿಕ 2017ರಲ್ಲಿ ತನ್ನ ಮುಂದಿನ ಚಿತ್ರ ಸಂಗೀತದ ಹಿನ್ನಲೆಯ ಕಥೆಯನ್ನು ಹೊಂದಿರಲಿದೆ ಎಂಬ ಸುಳಿವನ್ನು ಆಲ್ಫೋನ್ಸ್ ಅವರು ನೀಡಿದ್ದರು.

ಇನ್ನೆರಡು ತಿಂಗಳುಗಳಲ್ಲಿ ‘ಪಾಟ್ಟು’ ಚಿತ್ರ ಪ್ರಾರಂಭವಾಗುವ ನಿರೀಕ್ಷೆಯನ್ನು ನಿರ್ದೇಶಕರು ಇದೇ ಸಂದರ್ಭದಲ್ಲಿ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಮೋಲಿವುಡ್ ನ ವರ್ಸಟೈಲ್ ಆಯಕ್ಟರ್ ಫಾ ಫಾಸಿಲ್ ಮತ್ತು ಸೂಪರ್ ಹಿಟ್ ಚಿತ್ರದ ನಿರ್ದೇಶಕ ಆಲ್ಫೋನ್ಸ್ ಹೊಸ ಚಿತ್ರದಲ್ಲಿ ಜೊತೆಯಾಗಿರುವುದು ಚಿತ್ರರಸಿಕರ ನಿರೀಕ್ಷೆಯನ್ನು ಗರಿಗೆದರಿಸಿದೆ.

LEAVE A REPLY

Please enter your comment!
Please enter your name here