ವರ್ಕೌಟ್ ಮಾಡ್ದೇ ಇದ್ರೆ, ಆ ದಿನವೇ ವೇಸ್ಟ್ ಅನ್ನೋದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಪಾಲಿಸಿ. ಲಾಕ್ಡೌನ್ ಟೈಮಲ್ಲೂ ಮನೆಯಲ್ಲೇ ಅಪ್ಪು ಕಸರತ್ತು ಎಗ್ಗಿಲ್ಲದೇ ನಡೀತಿದೆ. ನೆಚ್ಚಿನ ನಟನ ವರ್ಕೌಟ್ ನೋಡಿ ಫ್ಯಾನ್ಸ್ ಕೂಡ ಇನ್ಸ್ಪೈರ್ ಆಗಿದ್ದಾರೆ. ಫಾರ್ ಎ ಛೇಂಜ್ ಅನ್ನುವಂತೆ ವೀಕೆಂಡ್ನಲ್ಲಿ ಯುವರತ್ನ ಮೈದಾನಕ್ಕಿಳಿದಿದ್ರು.
ಪುನೀತ್ ರಾಜ್ಕುಮಾರ್ ರಿಸ್ಕಿ ಸ್ಟಂಟ್ಸ್ ಮಾಡೋದು ನೋಡಿದ್ರೆ, ಮೈಯಲ್ಲಿ ಮೂಳೆ ಇದ್ಯಾ ಇಲ್ವಾ ಅನ್ನೋ ತರ ಡ್ಯಾನ್ಸ್ ಮಾಡೋದು ನೋಡಿದ್ರೆ, ಇವ್ರಿಗೆ ವಯಸ್ಸು ನಲವತ್ನಾಲ್ಕಾ ಅಥ್ವಾ ಇಪ್ಪತ್ನಾಲ್ಕಾ ಅನ್ನೋ ಅನುಮಾನ ಮೂಡೋದು ಸಹಜ. ಆದರೆ, ಇಷ್ಟು ಫಿಟ್ ಅಂಡ್ ಫ್ಲೆಕ್ಸಿಬಲ್ ಆಗಿ ಇರೋದಕ್ಕೆ ಅಪ್ಪು ಮಾಡೋ ಕಸರತ್ತು ಅಷ್ಟಿಷ್ಟಲ್ಲ. ಲಾಕ್ಡೌನ್ ಟೈಮಲ್ಲೂ ಆ ಕಸರತ್ತು ನಿಂತಿಲ್ಲ. ಅಪ್ಪು ವರ್ಕೌಟ್ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.
ಇದೊಂದು ಫೋಟೋ ಕಳೆದೆರಡು ದಿನಗಳಿಂದ ಸಖತ್ ವೈರಲ್ಲಾಗಿದೆ. ಪವರ್ ಸ್ಟಾರ್ ಫ್ಯಾನ್ಸ್ ಇನ್ಸ್ಟಾ, ಫೇಸ್ಬುಕ್ ಸ್ಟೋರಿ, ವಾಟ್ಸಾಫ್ ಸ್ಟೇಟಸ್ನಲ್ಲಿ ರಾರಾಜಿಸ್ತಿದೆ. ಇದು ವೀಕೆಂಡ್ನಲ್ಲಿ ಪುನೀತ್ ರಾಜ್ಕುಮಾರ್ ಸ್ನೇಹಿತರ ಜೊತೆ ಆಟವಾಡಲು ಹೋದಾಗ ಚಂದನ್ ಸೆರೆ ಹಿಡಿದ ಫೋಟೋಸ್.
ಫಿಟ್ನೆಸ್ ಫ್ರೀಕ್ ಆಗಿರುವ ಅಪ್ಪು, ಪ್ರತಿದಿನ ತಪ್ಪದೇ ವರ್ಕೌಟ್ ಮಾಡುತ್ತಾರೆ. ಲಾಕ್ಡೌನ್ ಸಮಯದಲ್ಲೂ ಅವರ ಕಸರತ್ತು ನಿಂತಿರಲಿಲ್ಲ. ಸಿನಿಮಾ ಶೂಟಿಂಗ್, ಮೀಟಿಂಗ್, ಪಾರ್ಟಿ, ಟ್ರಿಪ್ಪು ಎಲ್ಲದಕ್ಕೂ ಬ್ರೇಕ್ ಬಿದ್ದಿರುವ ಹಿನ್ನಲೆಯಲ್ಲಿ ಅಪ್ಪು ಸ್ನೇಹಿತರ ಜೊತೆ ಮೈದಾನಕ್ಕಿಳಿದಿದ್ದಾರೆ. ವೀಕೆಂಡ್ನಲ್ಲಿ ಫ್ರೆಂಡ್ಸ್ ಜೊತೆ ಕ್ರಿಕೆಟ್, ಫುಟ್ಬಾಲ್ ಆಡಿ ಖುಷಿ ಪಟ್ಟಿದ್ದಾರೆ.
ಪುನೀತ್ ರಾಜ್ಕುಮಾರ್ಗೆ ಯುವರಾಜ್ಕುಮಾರ್, ವಿನಯ್ ರಾಜ್ಕುಮಾರ್ ಮತ್ತು ಚಂದನ್ ಸೇರಿದಂತೆ ಸ್ನೇಹಿತರ ಸಾಥ್ ಸಿಕ್ಕಿದೆ. ದೇಹ ಫಿಟ್ ಆಗಿದ್ರೆ, ಆರೋಗ್ಯ ಚೆನ್ನಾಗಿರುತ್ತೆ. ನಮ್ಮಲ್ಲಿ ಆತ್ಮವಿಶ್ವಾಸ ಮೂಡುತ್ತೆ. ಮನೆಯಲ್ಲಿ, ಜಿಮ್ನಲ್ಲಿ ಮಾತ್ರ ವರ್ಕೌಟ್ ಮಾಡೋದಲ್ಲ. ಮೈದಾನಕ್ಕಿಳಿದು ಆಡೋದು ಕೂಡ ಮುಖ್ಯ. ಅದೇ ರೀತಿ ಪುನೀತ್ ಸ್ನೇಹಿತರ ಜೊತೆ ವೀಕೆಂಡ್ ಕಳೆದಿದ್ದಾರೆ.
ಪುನೀತ್ ರಾಜ್ಕುಮಾರ್ ಅಭಿನಯದ ಯುವರತ್ನ ಚಿತ್ರದ ಎರಡು ಸಾಂಗ್ ಶೂಟಿಂಗ್ ಬಾಕಿಯಿದ್ದು, ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ. ಇನ್ನು ಲಾಕ್ಡೌನ್ ಟೈಮ್ನಲ್ಲಿ ಅಪ್ಪು ಬಿಯರ್ಡ್ ಲುಕ್ ಕೂಡ ಫ್ಯಾನ್ಸ್ಗೆ ಇಷ್ಟವಾಗಿದ್ದು, ಅದನ್ನ ಹಾಗೇ ಮೇಂಟೇನ್ಸ್ ಮಾಡುತ್ತಿದ್ದಾರೆ ಅಪ್ಪು. ಯುವರತ್ನ ಸಿನಿಮಾದಲ್ಲೇ ಇದೇ ಲುಕ್ನಲ್ಲಿ ಒಂದು ಸಾಂಗ್ ಶೂಟ್ ಮಾಡೋ ಪ್ಲಾನ್ ಕೂಡ ಇದೆಯಂತೆ.