ಫಿಲ್ಟರ್​ ಮಾಸ್ಕ್ ಬಳಸುವ ಮುನ್ನ ಯೋಚಿಸಿ; ಅಂಥ ಮಾಸ್ಕ್ ಅಪಾಯಕಾರಿ ಎನ್ನುತ್ತಾರೆ ತಜ್ಞರು

0

ಕೊರೋನಾ ಸೋಂಕು ತಡೆಗೆ ಮಾಸ್ಕ್​ ಧರಿಸುವುದು ಈಗ ಕಡ್ಡಾಯವಾಗಿದೆ. ಸೋಂಕಿನ ನಿವಾರಣೆಗಾಗಿ ಬಳಸುವ ಮಾಸ್ಕ್​ಗಳು ಸರಿಯಾಗಿರಬೇಕಾಗಿರುವುದು ಅವಶ್ಯಕ. ಕಾಟಾಚಾರಕ್ಕೆ ಯಾವುದೋ ಒಂದು ಮಾಸ್ಕ್​ ಧರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಹಿನ್ನಲೆ ಯಾವ ರೀತಿಯ ಮಾಸ್ಕ್​ ಧರಿಸಬೇಕು ಎಂಬ ಬಗ್ಗೆ ಅರಿವಿರುವುದು ಮುಖ್ಯ. ಬಹುತೇಕರು ಮಾಸ್ಕ್​ ಧರಿಸಿದರೆ, ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ. ಕನ್ನಡಕದಲ್ಲಿ ಆವಿ ಕೂರುತ್ತದೆ ಎಂಬ ಕಾರಣಕ್ಕೆ ಫಿಲ್ಟರ್​ ಮಾಸ್ಕ್​ ಮೊರೆ ಹೋಗುತ್ತಾರೆ. ಆದರೆ, ಈ ಫಿಲ್ಟರ್​ (ವಾಲ್ವ್​) ಮಾಸ್ಕ್​ ಧರಿಸುವುದು ಅಪಾಯ ಎನ್ನುತ್ತಾರೆ ವೈದ್ಯರು.

ಮಾಸ್ಕ್​ ಧರಿಸಿದರೆ, ಅದು ಯಾವುದೇ ರೋಗಾಣುಗಳನ್ನು ನಿಮ್ಮ ಮೂಗು, ಬಾಯಿಯೊಳಗೆ ಸೇರದಂತೆ ಬಿಗಿಯಾದ ರಕ್ಷಣೆ ನೀಡಬೇಕು. ಆದರೆ, ಬಹುತೇಕ ಜನರು ಮಾಸ್ಕ್​ ಫಿಲ್ಟರ್​ ಮಾಸ್ಕ್​ ಧರಿಸುತ್ತಾರೆ. ಆದರೆ, ಈ ಫಿಲ್ಟರ್​ ಮಾಸ್ಕ್​ ಸೋಂಕು ನಿಯಂತ್ರಣಕ್ಕೆ ಯಾವುದೇ ಸಹಾಯ ಮಾಡುವುದಿಲ್ಲ. ಇದು ಕೇವಲ ವಾಯು ಮಾಲಿನ್ಯದಿಂದ ಮಾತ್ರ ನಿಮ್ಮನ್ನು ರಕ್ಷಿಸಬಲ್ಲದು. ಕೊರೋನಾ ಸೋಕಿಗೂ ಮುನ್ನ ಮಹಾನಗರಿಗಳಲ್ಲಿ ಮಾಲಿನ್ಯದಿಂದ ರಕ್ಷಣೆ ಪಡೆಯಲು ಹಲವರು ಈ ರೀತಿಯ ಫಿಲ್ಟರ್​ ಮಾಸ್ಕ್​ ಧರಣೆ ಮಾಡುತ್ತಿದ್ದರು. ಅದನ್ನೇ ಈಗಲೂ ಧರಿಸಿದರೆ ಯಾವುದೇ ಪ್ರಯೋಜನವಿಲ್ಲ ಸೋಂಕಿತ ವ್ಯಕ್ತಿಯೊಬ್ಬ ಫಿಲ್ಟರ್​ ಮಾಸ್ಕ್​ ಧರಿಸಿದಾಗ ಆತ ಕೆಮ್ಮಿದಾಗ, ಸೀನಿದಾಗ ಫಿಲ್ಟರ್​ ಮೂಲಕ ಸೋಂಕು ಪಕ್ಕದಲ್ಲಿರುವ ವ್ಯಕ್ತಿಗೆ ಶೀಘ್ರವಾಗಿ ಹರಡುತ್ತದೆ. ವಾಲ್ವ್​​ ಮಾಸ್ಕ್​ ಕೇವಲ ನೀವು ತೆಗೆದುಕೊಳ್ಳುವ ಗಾಳಿಯನ್ನು ಫಿಲ್ಟರ್​ ಮಾಡುತ್ತದೆ. ನೀವು ಬಿಡುವ ಉಸಿರು ಫಿಲ್ಟರ್​ ಆಗುವುದಿಲ್ಲ. ಇದರಿಂದ ಸೋಂಕಿತ ವ್ಯಕ್ತಿ ಈ ಮಾಸ್ಕ್​ ಧರಿಸಿದರೆ ಅಪಾಯ ಹೆಚ್ಚು.

ಸಾಂದರ್ಭಿಕ ಚಿತ್ರ

ಒಂದು ವೇಳೆ ನಿಮಗೆ ಇಂತಹ ವಾಲ್ವ್​ ಮಾಸ್ಕ್​ಗಳು ಉಸಿರಾಡಲು ಅನುಕೂಲ ಎನ್ನುವಂತಿದ್ದರೆ, ಇದರಲ್ಲಿ ವೈರಲ್​ ಫಿಲ್ಟರ್​ ಮಾಸ್ಕ್​ ಧರಿಸುವುದು ಉತ್ತಮ ಇದರಿಂದ ನಿಮಗೂ ಹಾಗೂ ನಿಮ್ಮ ಅಕ್ಕಪಕ್ಕದವರಿಗೂ ಒಳಿತು. ಫಿಲ್ಟರ್​ ಮಾಸ್ಕ್​ನಲ್ಲಿರುವ ಸಣ್ಣ ರಂಧ್ರದಿಂದಾಗಿ ಸೋಂಕಿತ ವ್ಯಕ್ತಿಯಲ್ಲಿನ ರೋಗಾಣು ಹೊರಬರುವ ಸಾಧ್ಯತೆ ಅತಿ ಹೆಚ್ಚು.

ಸೋಂಕು ತಡೆಗೆ ಎನ್​ 95 ಮಾಸ್ಕ್​ಗಳು ಸೂಕ್ತ ಎಂಬ ಕಲ್ಪನೆ ಕೆಲವರಲ್ಲಿದೆ. ಆದರೆ, ಈ ಎನ್​95 ಮಾಸ್ಕ್​ಗಳಲ್ಲಿ ಕೂಡ ಈ ರೀತಿಯ ಮಾಸ್ಕ್​ಗಳು ಲಭ್ಯ. ಇವು ಸೋಂಕು ತಡೆಯುವುದಿಲ್ಲ. ವೈದ್ಯಕೀಯ ಶಸ್ತ್ರಚಿಕಿತ್ಸೆ ವೇಳೆ ಉಸಿರಾಟಕ್ಕೆ ಅನುಕೂಲವಾಗಲಿ ಹಾಗೂ ಕಾರ್ಖಾನೆಗಳಲ್ಲಿ ಧೂಳಿನ ರಕ್ಷಣೆಗಾಗಿ ಎನ್​ 95 ಮಾಸ್ಕ್​ ಬಳಕೆಯಾಗುತ್ತಿತ್ತು. ಆದರೆ, ಈಗಿನ ಸ್ಥಿತಿಯಲ್ಲಿ ಈ ಮಾಸ್ಕ್ ಧರಣೆ ಸೂಕ್ತವಲ್ಲ ಎಂದು ವೈದ್ಯರು ತಿಳಿಸುತ್ತಾರೆ. ಇದು ಧೂಳು ರಕ್ಷಣೆಗೆ ಮಾತ್ರ ನಿಮಗೆ ಸಹಾಯವಾಗಲಿದೆ ಅಷ್ಟೇ ಹೊರತು ಸೋಂಕು ತಡೆಯುವಲ್ಲಿ ಅಲ್ಲ ಎನ್ನುತ್ತಾರೆ.ಧರಿಸುವ ಮಾಸ್ಕ್​ ಹೇಗಿರಬೇಕು:

 

    • ನಿಮ್ಮ ಬಾಯಿ, ಮುಖನ್ನು ಯಾವುದೇ ಸೋಂಕು ಒಳ ಹೋಗದಂತೆ ಮುಚ್ಚಿರಬೇಕು.

 

    • ಹಾಗೇಂದ ಮಾತ್ರಕ್ಕೆ ಉಸಿರಾಟಕ್ಕೆ ಕಷ್ಟ ಎನ್ನಿಸುವಷ್ಟು ಮಟ್ಟಿಗೆ ಬಿಗಿ ಇರಬಾರದು.

 

    • ಉಸಿರಾಡಲು ಸಾಧ್ಯವಾಗುವಂತಹ ಕಾಟನ್​, ಬಟ್ಟೆಗಳನ್ನು ಬಳಸುವುದು ಉತ್ತಮ.

 

ಮಾಸ್ಕ್ ಬದಲಾಗಿ ಬಹುತೇಕ ಮಂದಿ ಖರ್ಚೀಫ್​ಗಳನ್ನು ಸುರಕ್ಷತೆಗೆ ಬಳಸುತ್ತಾರೆ. ಇದು ಉತ್ತಮವೇ ಆದರೂ ನೀವು ಕಟ್ಟುವ ವಿಧಾನ ಕೂಡ ಮುಖ್ಯವಾಗುತ್ತದೆ. ಕರವಸ್ತ ಕೆಳ ತುದಿಯಿಂದ ಸೋಂಕು ಹರಡದಂತೆ ಮಡಚುವುದು ಉತ್ತಮ.

LEAVE A REPLY

Please enter your comment!
Please enter your name here