ಫೋನ್ ಕದ್ದಾಲಿಕೆ  ದೇವೇಗೌಡರನ್ನು  ಓಲೈಸಲು ಹಗುರವಾಗಿ ಮಾತನಾಡಬೇಡಿ :   ಡಿಕೆಶಿಗೆ ತಿರುಗೇಟು  ನೀಡಿದ ಎಂಬಿ ಪಾಟೀಲ್

0

ಫೋನ್ ಕದ್ದಾಲಿಕೆ ಆರೋಪ ವಿಚಾರ ಮೂರು ತಿಂಗಳಲ್ಲಿ ಉನ್ನತ ಮಟ್ಟದ ತನಿಖೆ ಮೂಲಕ  ಸತ್ಯಾಸತ್ಯತೆ ಹೊರಬರಬೇಕು ಎಂದು ಮಾಜಿ ಗೃಹ ಸಚಿವ ಎಂ ಬಿ ಪಾಟೀಲ ಡಿಕೆಶಿಗೆ ಫೋನ್ ಕದ್ದಾಲಿಕೆ ವಿಚಾರ ಕುರಿತು ತಿರುಗೇಟು   ನೀಡಿದ್ದಾರೆ. ಅವರು ಅಥಣಿ  ತಾಲೂಕಿನ  ಪ್ರವಾಹ ಪೀಡಿತ ಪ್ರದೇಶಗಳಿಗೆ   ಭೇಟಿ ನೀಡಿದ ನಂತರ ಅಥಣಿಯ ಪ್ರವಾಸಿ ಮಂದಿರ ದಲ್ಲಿ ಸುದ್ದಿಗೋಷ್ಠಿಯ
ಉದ್ದೆಶಿಸಿ ಮಾತನಾಡುತ್ತಿದ್ದರು.

ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿರುವ ಕೆಲವು ಪ್ರಭಾವಿ ರಾಜಕಾರಣಿಗಳ ಪೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎನ್ನುವ ವಿಚಾರ ಸಮ್ಮಿಶ್ರ ಸರಕಾರದಲ್ಲಿ ಗೃಹ ಸಚಿವ ಎಮ್ ಬಿ ಪಾಟೀಲ ಅವರ ಅಧಿಕಾರಾವಧಿಯಲ್ಲಿ ಪೋನ್ ಕದ್ದಾಲಿಕೆಯಾಗಿದೆ ಎಂದು   ಡಿ ಕೆ ಶಿವಕುಮಾರ ಅವರ ಹೇಳಿಕೆಗೆ ಎಂ ಬಿ ಪಾಟೀಲ ಅವರು ತಿರುಗೇಟು ನೀಡಿದರು.

ನಾನು ಗೃಹ ಸಚಿವನಾಗಿದ್ದಾಗ ಯಾವುದೆ ಫೋನ್ ಕದ್ದಾಲಿಕೆ ಪ್ರಕರಣ ನಡೆದಿಲ್ಲಾ. ನನ್ನ ಅವಧಿಯಲ್ಲಿ ಫೊನ್  ಕದ್ದಾಲಿಕೆ ನಡೆದಿದೆ ಎಂದು ಯಾಕೆ ಹೇಳಿದ್ರು ಡಿಕೆಶಿ? ನಾನು ಮತ್ತು ಡಿ ಕೆ ಶಿವಕುಮಾರ ಇಬ್ಬರು ಒಂದೆ ಪಕ್ಷದಲ್ಲಿ ಇದ್ದೇವೆ. ಡಿ ಕೆ ಶಿವಕುಮಾರ ಅವರಿಗೆ ತಪ್ಪು ತಿಳುವಳಿಕೆ ಆಗಿದೆ.   ರಾಜಕಾರಣ ಮಾಡುವ ಪ್ರಶ್ನೆಯೇ ಬರುವದಿಲ್ಲಾ. ಜಾತಿ ಆಧಾರದ ಮೇಲೆ ದೇವೆಗೌಡರ ಕುಟುಂಬವನ್ನು ಒಲೈಸಲು ಈ ರೀತಿ ಹೇಳಿರಬಹುದು. ಶಿವಕುಮಾರ ಓರ್ವ ಪ್ರಭಾವಿ ನಾಯಕ, ನಾನು ಸಹ ಜವಾಬ್ದಾರಿಯುತ ನಾಯಕನಾಗಿದ್ದೆನೆ. ನನ್ನ ಬಗ್ಗೆ ಹಗುರವಾಗಿ ಮಾತನಾಡದಂತೆ ಸಲಹೆ ನೀಡಲು ಬಯಸುತ್ತೆನೆ ಎಂದು ಡಿಕೆಶಿ ಅವರಿಗೆ ಮಾಜಿ ಗೃಹ ಸಚಿವ ಎಮ್ ಬಿ ಪಾಟೀಲ್ ಟಾಂಗ್ ನೀಡಿದರು. ಫೋನ್ ಕದ್ದಾಲಿಕೆ ನಡೆದಿದ್ದರೆ ಅದು ಉನ್ನತ ಮಟ್ಟದ ತನಿಖೆಯಾಗಲಿ, 3 ತಿಂಗಳಲ್ಲಿ ತನಿಖಾ ವರದಿಯನ್ನು ಸರಕಾರಕ್ಕೆ ನೀಡಲಿ, ಅಲ್ಲಿ ಅಧಿಕಾರಿಗಳು ತಪ್ಪು ಮಾಡಿದ್ದರೆ, ಅಥವಾ ನಾನು ಅದರಲ್ಲಿ ಭಾಗಿಯಾಗಿದ್ದರೆ ತಿಳಿಯುತ್ತದೆ. ಒಂದು ವೇಳೆ ಡಿ ಕೆ ಶಿವಕುಮಾರ ಅವರು ಒಕ್ಕಲಿಗರನ್ನು ಒಲೈಸಿಕೊಳ್ಳಲು ಅಥವಾ ಹೆಚ್ ಡಿ ಕುಮಾರಸ್ವಾಮಿಯವರನ್ನು ಒಲೈಸಿಕೊಳ್ಳಲು, ಅಥವಾ ದೇವೆಗೌಡರನ್ನು ಒಲಿಸಿಕೊಳ್ಳುವ ಆಸೆ ಅವರಿಗೆ ಇರಬಹುದು. ಈ ಫೋನ್ ಕದ್ದಾಲಿಕೆಯ ವಿಚಾರದಲ್ಲಿ ನನಗೆ ನಂಬಿಕೆ ಇದೆ ಕುಮಾರಸ್ವಾಮಿಯವರು ಇಂತಹ ಕೆಲಸ ಮಾಡಿಲ್ಲಾ ಅನ್ನುವ ವಿಶ್ವಾಸ ನನಗಿದೆ. ಡಿ ಕೆ ಶಿವಕುಮಾರ ಅವರೆ ನನ್ನ ವಿರುದ್ದ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ಶಾಸಕ ಗಣೇಶ್ ಹುಕ್ಕೇರಿ ಮಾಜಿ ಶಾಸಕ ಶಹಜಹಾನ್ ಡೊಂಗರಗಾವ,
ಗಜಾನನ್ ಮಂಗಸೂಳಿ, ಅನಿಲ್ ಸುಣಧೋಳಿ , ಧರೆಪ್ಪ ಠಕ್ಕಣ್ಣವರ, ಡಾ, ರವಿ ಸಂಕ, ಚಿದಾನಂದ ಮೂಕಣಿ, ಶಿವು ಗುಡ್ಡಾಪುರ ಮುಂತಾದವರು ಉಪಸ್ಥಿತರಿದ್ದರು

ವರದಿ: ರಾಮಣ್ಣ ದೊಡ್ಡನಿಂಗಪ್ಪಗೋಳ ಅಥಣಿ

LEAVE A REPLY

Please enter your comment!
Please enter your name here