ಬಕ್ರಿದ್ ಹಬ್ಬದ ಅಂಗವಾಗಿ ತಾಲೂಕಿನಲ್ಲಿ ನಡೆಯಬಹುದಾದ ಅಕ್ರಮ ಗೋಹತ್ಯೆ ಮತ್ತು ಅಕ್ರಮ ಗೋ ಸಾಗಾಟವನ್ನು ತಡೆಯುವಂತೆ ರಾಮ್ ಸೇನಾ ತಾಲೂಕು ಘಟಕ ಆಗ್ರಹ…!

0

ಮುಂಬರುವ ಬಕ್ರಿದ್ ಹಬ್ಬದ ಅಂಗವಾಗಿ ತಾಲೂಕಿನಲ್ಲಿ ನಡೆಯಬಹುದಾದ ಅಕ್ರಮ ಗೋಹತ್ಯೆ ಮತ್ತು ಅಕ್ರಮ ಗೋ ಸಾಗಾಟವನ್ನು ತಡೆಯುವಂತೆ ರಾಮ್ ಸೇನಾ ತಾಲೂಕು ಘಟಕ ಆಗ್ರಹಿಸಿದೆ.

ಈ ಕುರಿತು ತಾಲೂಕು ದಂಡಾಧಿಕಾರಿಗಳಾದ ತಹಸೀಲ್ದಾರರು ಮತ್ತು ಆರಕ್ಷಕ ನಿರೀಕ್ಷಕರಿಗೆ ಮನವಿ ಸಲ್ಲಿಸಿದ ರಾಮ್ ಸೇನಾ ಕಾರ್ಯಕರ್ತರು ಇಂದು ದೇಶದಲ್ಲಿ ಗೋಹತ್ಯೆ ಹಾಗೂ ಅಕ್ರಮ ಗೋಸಾಗಾಟ ಮಿತಿಮೀರಿದ್ದು ಈ ದಂಧೆ ಮುಂದೆ ಬರುತ್ತಿರುವ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ಇದನ್ನು ತಡೆಯಲು ಸುರಪುರ ನಗರದ ಎಲ್ಲಾ ನಾಲ್ಕು ದಿಕ್ಕುಗಳಲ್ಲಿ ಪೊಲೀಸ್ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಎಲ್ಲ ವಾಹನಗಳ ತಪಾಸಣೆ ಮಾಡಿ ಗೋಸಾಗಾಟವನ್ನು ತಡೆಯುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

ತಾಲೂಕು ದಂಡಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಸೋಫಿಯಾ ಸುಲ್ತಾನ್ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಮ್ ಸೇನಾ ತಾಲೂಕು ಗೌರವ ಅಧ್ಯಕ್ಷ ಕುಮಾರ ನಾಯಕ, ತಾಲೂಕು ಅಧ್ಯಕ್ಷ ಶರಣು ನಾಯಕ ಡೊಣ್ಣಿಗೇರಾ ಪ್ರಧಾನ ಕಾರ್ಯದರ್ಶಿ ಶರಣು ನಾಯಕ ದೀವಳಗುಡ್ಡ ಕಾರ್ಯದರ್ಶಿ ಹೈಯ್ಯಾಳಪ್ಪ ಹಾದಿಮನಿ ಶ್ರವಣ ನಾಯಕ ಡೊಣ್ಣಿಗೇರಾ ಇದ್ದರು.

LEAVE A REPLY

Please enter your comment!
Please enter your name here