ಬಟ್ಟೆ ಮೇಲಿನ ಕಲೆಯನ್ನು ಹೋಗಲಾಡಿಸಲು ಇಲ್ಲಿದೆ ಸುಲಭ ಉಪಾಯ

0

ನಿಮ್ಮ ಮೆಚ್ಚಿನ ಬಿಳಿ ಅಂಗಿಯ ಮೇಲೆ ಪರ್ಮನೆಂಟ್ ಮಾರ್ಕರ್‌ನಿಂದ ಕಲೆಯಾದರೆ ಎಷ್ಟು ಬೇಸರವಾಗುತ್ತದೆ ಅಲ್ಲವೇ? ಆ ಕಲೆ ಹೋಗದೇ ಇದ್ದಾಗ ಇನ್ನೂ ನೋವಾಗುತ್ತದೆ.

ಈ ರೀತಿಯ ಕಲೆಗಳನ್ನು ಹೋಗಲಾಡಿಸಲು ಮಹಿಳೆಯೊಬ್ಬರು ಹ್ಯಾಕ್‌ ಒಂದನ್ನು ಆವಿಷ್ಕರಿಸಿದ್ದಾರೆ. ‘Mums Who Clean’ ಎಂಬ ಫೇಸ್ಬುಕ್‌ ಪೇಜ್‌ ಒಂದರಲ್ಲಿ ಪರ್ಮನೆಂಟ್ ಮಾರ್ಕರ್‌ ಕಲೆಯನ್ನು ಹೋಗಲಾಡಿಸುವ ಐಡಿಯಾವೊಂದನ್ನು ಕೇಳಿದ್ದಾರೆ.

ನೀಲಗಿರಿ ತೈಲದಲ್ಲಿ ಈ ಕಲೆಯನ್ನು ಅರ್ಧ ಗಂಟೆ ನೆನೆಯಲು ಬಿಟ್ಟು ನಂತರ ಒಗೆಯಿರಿ ಎಂದು ಯಾರೋ ಒಬ್ಬರು ಸಲಹೆ ಕೊಟ್ಟಿದ್ದಾರೆ. ಇದನ್ನೇ ಮಾಡಿದ ಮಹಿಳೆ, ಆ ಕಲೆಯ 90%ನಷ್ಟು ತೊಳೆದು ಹೋಗಿದ್ದನ್ನು ಕಂಡು ಬೆರಗಾಗಿದ್ದಾರೆ. ಇದಾದ ಬಳಿಕ ಬ್ಲೀಚ್‌ ಅನ್ನು ಆ ಮಾಸಿದ ಕಲೆಯ ಮೇಲೆ ಹಾಕಿ, ವಾಶಿಂಗ್ ಮಷೀನ್‌ನಲ್ಲಿ ಒಂದು ಒಗೆತ ಕೊಟ್ಟ ಬಳಿಕ ಆ ಕಲೆ ಮಂಗಮಾಯವಾಗಿಬಿಟ್ಟಿದೆ.

LEAVE A REPLY

Please enter your comment!
Please enter your name here