ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಹರಡುತ್ತಿರುವ ಮಹಾಮಾರಿ ಕರೋನಾ ವೈರಸ್ ನಿಯಂತ್ರಿಸಲು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನ ಕೈಗೊಳ್ಳುವಂತೆ

0

“ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಹರಡುತ್ತಿರುವ ಮಹಾಮಾರಿ ಕರೋನಾ ವೈರಸ್ ನಿಯಂತ್ರಿಸಲು ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನ ಕೈಗೊಳ್ಳುವಂತೆ ಹಾಗೂ ಸಫಾಯಿ ಕರ್ಮಚಾರಿಗಳ ಹಿತ ಕಾಪಾಡುವಂತೆ, & ಮಾಸ್ಕ್ ಧರಿಸದೇ ಇರುವವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಇತರೆ ಹಲವು ಅಂಶಗಳನ್ನೊಳಗೊಂಡ ಬೇಡಿಕೆಗಳನಿಟ್ಟು ಪ್ರತಿಭಟಿಸಿ” ಕಂಪ್ಲಿ ಪುರಸಭೆಯ ವ್ಯವಸ್ಥಾಪಕರಾದ ಶ್ರೀ ಅನಂತ ರಾವ್ ರವರ ಮುಖಾಂತರ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಪುರಸಭೆಯ ಮುಖ್ಯಾಧಿಕಾರಿಗಳಿಗೆ ರವಾನಿಸುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ವತಿಯಿಂದ ನನ್ನ ನೇತೃತ್ವದಲ್ಲಿ ಪ್ರತಿಭಟನಾ ಮನವಿ ಪತ್ರ ಸಲ್ಲಿಸಲಾಯಿತು!

– ಮೋಹನ್ ಕುಮಾರ್ ದಾನಪ್ಪ!
______________

ಗೆ,
ಮಾನ್ಯ ಜಿಲ್ಲಾಧಿಕಾರಿಗಳು
ಜಿಲ್ಲಾಧಿಕಾರಿಗಳ ಕಾರ್ಯಾಲಯ
ಬಳ್ಳಾರಿ ರವರಿಗೆ

ಮಾನ್ಯ ಮುಖ್ಯಾಧಿಕಾರಿಗಳು
ಪುರಸಭೆ ಕಾರ್ಯಾಲಯ
ಕಂಪ್ಲಿ ರವರಿಗೆ

ದ್ವಾರ:-
ಮಾನ್ಯ ವ್ಯವಸ್ಥಾಪಕರು
ಕಂಪ್ಲಿ ಪುರಸಭೆ
ಕಂಪ್ಲಿ

ಮಾನ್ಯರೇ

ವಿಷಯ:- ಕಂಪ್ಲಿ ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರನಾ ವೈರಸ್ ನಿಯಂತ್ರಿಸಲು ನಗರ ವ್ಯಾಪ್ತಿಯಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ಪ್ರತಿಭಟನಾ ಮನವಿ

**

ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯು ಈ ಮನವಿ ಮೂಲಕ ಆಗ್ರಹಿಸುವದೇನೆಂದರೆ ಬಳ್ಳಾರಿ ಜಿಲ್ಲೆಯಲ್ಲಿ 2810 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು ಇದುವರೆಗೂ ಜಿಲ್ಲೆಯಲ್ಲಿ 62 ಜನ ಮೃತಪಟ್ಟಿದ್ದು ಪ್ರತಿದಿನ 150 ರಿಂದ 200 ಜನರಿಗೆ ಸೋಂಕು ಧೃಡಪಡುತ್ತಿರುವದರೊಂದಿಗೆ ಕಂಪ್ಲಿ ನಗರ ವ್ಯಾಪ್ತಿಯಲ್ಲಿ ಈಗಾಗಲೇ 20ಕ್ಕೂ ಅಧಿಕ ಜನರಿಗೆ ಸೋಂಕು ದೃಢಪಟ್ಟಿದ್ದು ತುಂಬಾ ಆತಂಕದ ವಿಷಯವಾಗಿರುತ್ತದೆ, ನಗರದ ಜನ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡು ಬದುಕುತ್ತಿರುತ್ತಾರೆ ಹೀಗಿದ್ದರೂ ತಮ್ಮ ಸಂಸ್ಥೆಯು ಸುರಕ್ಷತ ವಿಧಾನವನ್ನು ಅನುಸರಿಸದೆ ಇರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಇರುವುದು ಸಾರ್ವಜನಿಕರು,ಅಂಗಡಿ ಮುಂಗಟ್ಟುಗಳಲ್ಲಿ ಬೀದಿ ಬದಿಯ ವ್ಯಾಪಾರಸ್ಥರು ತರಕಾರಿ ಅಂಗಡಿಗಳಲ್ಲಿ, ಇನ್ನಿತರಡೇಯಲ್ಲಿ ಸುರಕ್ಷತೆಯ ವಿಧಾನಗಳನ್ನು ಬಳಸದೆ ಬೇಜವಾಬ್ದಾರಿತನ ತೋರುತ್ತಿರುವುದರಿಂದ ಕಂಪ್ಲಿ ನಗರದ ಜನತೆಗೆ ಅಲ್ಲದೆ ಕಂಪ್ಲಿ ತಾಲೂಕು ವ್ಯಾಪ್ತಿಗೊಳಪಡುವ ಗ್ರಾಮಸ್ಥರು ನಗರಕ್ಕೆ ಇತರ ಕೆಲಸಕ್ಕೆ ಆಗಮಿಸುವ ಗ್ರಾಮೀಣ ಭಾಗದ ಜನರಿಗೂ ಸೋಂಕಿನ ಪ್ರಮಾಣ ಇನ್ನಷ್ಟು ಹೆಚ್ಚುವ ಆತಂಕ ಸೃಷ್ಟಿಯಾಗುತ್ತದೆ ಆದ್ದರಿಂದ ಈ ಕೆಳಕಂಡ ಬೇಡಿಕೆಗಳನ್ನು

-ಬೇಡಿಕೆಗಳು-

1. ಪ್ರಸ್ತುತ ತಮ್ಮ ಪುರಸಭೆಯ ಅಧಿಕಾರಿಗಳು ಮಾಸ್ಕ್ ಹಾಕದೇ ಇರುವವರನ್ನು ಗುರುತಿಸಿ ದಂಡ ವಿಧಿಸುತ್ತದೆ ಆದರೆ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳದೆ ನಿರ್ಲಕ್ಷತನದಿಂದ ಕೇವಲ ತಮಗೆ ಅಂಕಿ ಸಂಖ್ಯೆ ಕೊಡುವ ಉದ್ದೇಶದಿಂದ ನಾವು ಕರ್ತವ್ಯ ನಿರ್ವಹಿಸಿದ್ದೇವೆ ಎಂದು ತೋರ್ಪಡಿಸಲು ಬೆರಳೆಣಿಕೆಯ ಸಂಖ್ಯೆಯ ಜನರಿಗೆ ಮಾತ್ರ ದಂಡ ವಿಧಿಸಿದ್ದು ಇದು ಹೆಚ್ಚಿನ ಪರಿಣಾಮಕಾರಿಯಾಗಿರುವುದಿಲ್ಲ ಆದ್ದರಿಂದ ಪ್ರಸ್ತುತ ದಂಡ ವಿಧಿಸುವ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಆದೇಶ ನೀಡಬೇಕು ಹಾಗೂ ಇನ್ನಷ್ಟು ಅಧಿಕಾರಿಗಳನ್ನು ನೇಮಿಸಿ ಸುರಕ್ಷಿತ ವಿಧಾನಗಳನ್ನು ಅನುಸರಿಸದೆ ಇರುವವರ ವಿರುದ್ಧ ಮುಲಾಜಿಲ್ಲದೆ ಯಾವುದೇ ಪ್ರಭಾವಕ್ಕೊಳಗಾಗದೇ ಕಾನೂನು ಕ್ರಮ ಜರುಗಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಹಾಗೂ ಪ್ರಸ್ತುತ ಮೊದಲ ಬಾರಿ ಮಾಸ್ಕ್ ಧರಿಸದೆ ಇರುವವರಿಗೆ 100 ರೂಪಾಯಿ ಎರಡನೇ ಬಾರಿ 200 ರೂಪಾಯಿ ದಂಡ ಶುಲ್ಕವೂ ಯಾವುದೇ ಪರಿಣಾಮಕಾರಿಯಾಗಿರುವುದಿಲ್ಲ ಆದ್ದರಿಂದ ಮೊದಲ ಬಾರಿ ಮಾಸ್ಕ್ ಹಾಕದವರಿಗೆ 1000 ರೂಪಾಯಿ ಎರಡನೇ ಬಾರಿ ಮಾಸ್ಕ್ ಹಾಕದವರಿಗೆ 2 ಸಾವಿರ ರೂಪಾಯಿ ಜೊತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ-2005 ಮತ್ತು ಭಾರತ ದಂಡ ಸಂಹಿತೆಯ ಸೆಕ್ಷನ್-269 ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಉಚಿತವಾಗಿ ಮಾಸ್ಕ್ ವಿತರಿಸಬೇಕು
ಎ) ಕೇವಲ ಮಾಸ್ಕ್ ಹಾಕದೆ ಇರುವವರಿಗೆ ಅಲ್ಲದೆ ಸಾರ್ವಜನಿಕ ರಸ್ತೆಯಲ್ಲಿ ಉಗಳುವವರಿಗೂ ದಂಡ ವಿಧಿಸಬೇಕು

2. ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊರನಾ ವಾರಿಯರ್ಸ್ ಸಫಾಯಿ ಕರ್ಮಚಾರಿಗಳು ಸೋಂಕು ಧೃಡಪಟ್ಟ ವ್ಯಕ್ತಿಯ ಮನೆ ಹಾಗೂ ಸೀಲ್ ಡೌನ್ ಆಗುವ ಪ್ರದೇಶಕ್ಕೆ ರಾಸಾಯನಿಕ ದ್ರವ್ಯ ಹಾಗೂ ಬ್ಲೀಚಿಂಗ್ ಸಿಂಪಡಿಸಿದ ನಂತರ ನಗರದಲ್ಲಿನ ಸ್ವಚ್ಛತೆಯಲ್ಲಿ ತೊಡಗುತ್ತಿದ್ದು ಸೋಂಕು ನಿಯಂತ್ರಣದ ಸುರಕ್ಷತಾ ವಿಧಾನಗಳನ್ನು ಕೆಲವರು ಬಳಸದೆ ನಿರ್ಲಕ್ಷತನ ತೋರುತ್ತಿದ್ದು ಅವರಿಗೆ & ಅವರ ಕುಟುಂಬಕ್ಕೆ ಹಾಗೂ ತಮ್ಮ ಕಚೇರಿಗೆ ಹಾಗೂ ನಗರ ವ್ಯಾಪ್ತಿ ಸೋಂಕು ವ್ಯಾಪಿಸುವ ಆತಂಕವಿರುತ್ತದೆ ಆದ್ದರಿಂದ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಮಾಸ್ಕ್ ಸ್ಯಾನಿಟೈಸರ್ ಬಳಸುವಂತೆ ಸೂಚಿಸಬೇಕು ಹಾಗೂ ಅವರ ಮತ್ತು ಅವರ ಕುಟುಂಬದ ಆರೋಗ್ಯದ ಸುರಕ್ಷತೆ ಕಡೆ ಹೆಚ್ಚಿನ ಗಮನ ಹರಿಸಬೇಕು ಹಾಗೂ ಅವರ ಹಿತ ಕಾಪಾಡಬೇಕು

3. ನಗರದಲ್ಲಿನ ಹೇರ್ ಕಟಿಂಗ್ ಸಲೂನ್ ಗಳಿಗೆ ಹೋಂ ಕ್ವಾರಂಟೈನ್ ಗೆ ಒಳಪಟ್ಟ ವ್ಯಕ್ತಿಗಳು ತಮ್ಮ ಕೈಗೆ ಹಾಕಿರುವ ಮುದ್ರೆಯನ್ನು ಕಾಣದಂತೆ ಬಟ್ಟೆಯಲ್ಲಿ ಸುತ್ತಿಕೊಂಡು ಚೌರ ಮಾಡಿಸಲು ಹೋಗುತ್ತಿದ್ದು ಸಲೂನಿನ ಮಾಲೀಕರು ಹಾಗೂ ಚೌರಿಕರು ಪರಿಶೀಲಿಸದೆ ವ್ಯಾಪಾರ ದೃಷ್ಟಿಯಿಂದ ವೃತ್ತಿ ಕೈಗೊಳ್ಳುತ್ತಿದ್ದಲ್ಲದೆ ಚೌರಿಕರು ಕನಿಷ್ಠ ಪಕ್ಷ ಮಾಸ್ಕ್ ಧರಿಸದೆ ಇರುವುದು ಅಂತರವಿಲ್ಲದ ಕಾರ್ಯವಾಗಿದ್ದು ಕೆಮ್ಮುವುದರಿಂದ ಸೀನುವುದರಿಂದ ತ್ವರಿತವಾಗಿ ಸೋಂಕು ಹರಡುವ ಆತಂಕ ನಗರದ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು ತಮ್ಮ ವ್ಯಾಪ್ತಿಯ ಸಲೂನ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು

4. ಬೀದಿ ಬದಿಯ ವ್ಯಾಪಾರಿಗಳಾದ ಹಣ್ಣು-ತರಕಾರಿ ಫಾಸ್ಟ್ ಫುಡ್ ಟೀ ಚಹಾ ಬಂಡಿಗಳಲ್ಲಿ ಹಾಗೂ ಇತರೆ ಎಲ್ಲಾ ಬೀದಿ ಬದಿ ವ್ಯಾಪಾರಿಗಳು ಸುರಕ್ಷತಾ ವಿಧಾನಗಳನ್ನು ಅನುಸರಿಸದೆ ನಿರ್ಲಕ್ಷಿಸುತ್ತಿರುವುದು ಸೋಂಕು ಇನ್ನಷ್ಟು ಬೇಗನೆ ಹರಡಲು ಮುಖ್ಯ ಕಾರಣವಾಗಿರುತ್ತದೆ ಆದ್ದರಿಂದ ಇಂತಹ ವ್ಯಾಪಾರಿಗಳ ವಿರುದ್ಧ ಗರಿಷ್ಠ ಮಟ್ಟದ ದಂಡ ವಿಧಿಸಬೇಕು ಹಾಗೂ ಕಡ್ಡಾಯವಾಗಿ ಮಾಸ್ಕ್ .ಹ್ಯಾಂಡ್ ಗ್ಲೌಸ್ ಧರಿಸಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಎಚ್ಚರಿಸಿ ಮುಚ್ಚಳಿಕೆ ಬರೆಸಿಕೊಳ್ಳಬೇಕು ಹಾಗೂ ನಿಯಮ ಮೀರಿದರೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ -2005ರ ಅಡಿಯಲ್ಲಿ ಹಾಗೂ ಭಾರತ ದಂಡ ಸಂಹಿತೆಯ ಸೆಕ್ಷನ್-269ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳಬೇಕು
ಎ) ಉತ್ತರ ಭಾರತದ ವ್ಯಕ್ತಿಗಳು ನಗರದ ಬೀದಿಗಳಲ್ಲಿ ಪಾನಿಪುರಿ ಹಾಗೂ ಗೋಬಿ ಮಂಚೂರಿ ನೂಡಲ್ಸ್ ವ್ಯಾಪಾರವನ್ನು ನಡೆಸುತ್ತಿದ್ದು ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಗುಂಪುಗುಂಪಾಗಿ ಅಸ್ವಚ್ಛತೆಯಿಂದ ವ್ಯಾಪಾರ ನಡೆಸುತ್ತಿದ್ದು ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು

5. ದಿನಸಿ ಅಂಗಡಿ,ಬೇಕರಿ,ತಂಪು ಪಾನೀಯ, ಹೋಟೆಲ್ಗಳಲ್ಲಿ ಉಪಹಾರ ಗೃಹಗಳಲ್ಲಿ ಬಟ್ಟೆ ಅಂಗಡಿ ಜುವೆಲ್ಲರಿ ಅಂಗಡಿ, ಔಷಧಿ ಅಂಗಡಿಗಳಲ್ಲಿ,ಜೆರಾಕ್ಸ್ ಶಾಪುಗಳಲ್ಲಿ ಹಾಗೂ ಇನ್ನಿತರ ಎಲ್ಲಾ ಅಂಗಡಿ ಮುಂಗಟ್ಟುಗಳಲ್ಲಿ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಅಂಗಡಿಗಳ ಮಾಲೀಕರು ಹಾಗೂ ವಿತರಣೆದಾರರು,ನಿರ್ವಹಣೆದಾರರು ಕನಿಷ್ಠ ಪಕ್ಷ ಮಾಸ್ಕ್ ಧರಿಸದೆ ನಾಮಕಾವಸ್ಥೆಗೆ ” ಮಾಸ್ಕ್ ಧರಿಸಿದರೆ ಮಾತ್ರ ಪ್ರವೇಶ” ಎಂದು ಹಾಕಿಕೊಂಡಿದ್ದು ಸಾರ್ವಜನಿಕರು ಮಾಸ್ಕ್ ಧರಿಸದಿದ್ದರೂ ವ್ಯಾಪಾರ ದೃಷ್ಟಿಯಿಂದ ಪ್ರಶ್ನಿಸದೆ ಹಾಗೂ ಯಾವುದೇ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಸೋಂಕು ವ್ಯಾಪಿಸುತ್ತಿರುವುದಕ್ಕೆ ಮೂಲ ಕಾರಣವಾಗಿರುತ್ತದೆ, ಆದ್ದರಿಂದ ಪ್ರತಿ ಅಂಗಡಿ-ಮುಂಗಟ್ಟುಗಳ ಮಾಲೀಕರಿಂದ ಹಾಗೂ ನಿರ್ವಹಣೆಗಾರರಿಂದ ಕಡ್ಡಾಯವಾಗಿ ಸುರಕ್ಷತಾ ವಿಧಾನಗಳನ್ನು ಅನುಸರಿಸುವುದಾಗಿ ಮುಚ್ಚಳಿಕೆ ಬಳಸಿಕೊಳ್ಳಬೇಕು ಹಾಗೂ ನಿಯಮ ಮೀರಿದ ಅಂಗಡಿ ಮಾಲೀಕರ ವಿರುದ್ಧ ಸುಮಾರು ಹತ್ತು ಸಾವಿರ ರೂಪಾಯಿವರೆಗೆ ದಂಡ ವಿಧಿಸಬೇಕು ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಹಾಗೂ ಭಾರತೀಯ ದಂಡ ಸಂಹಿತೆಯ-269ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಂಪೂರ್ಣ ನಿಯಂತ್ರಣ ಬರುವವರೆಗೂ ಉದ್ಯಮ ಪರವಾನಿಗೆ ರದ್ದು ಪಡಿಸಿ ಅಂಗಡಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು

6. ನಗರದಲ್ಲಿ ಸಾರ್ವಜನಿಕರು ಸಂಚಾರಕ್ಕೆ ಬಳಸುವ ಖಾಸಗಿ ಆಟೋ-ಟ್ಯಾಕ್ಸಿ ಕಾರುಗಳಲ್ಲಿ ಸುರಕ್ಷತಾ ವಿಧಾನಗಳನ್ನು ಬಳಸದೆ ನಿರ್ಲ್ಯಕ್ಷ್ಯವಹಿಸುತ್ತಿದ್ದು ಕೇವಲ ಪೊಲೀಸರು ದಂಡ ವಿಧಿಸುವ ಪ್ರಾಧಿಕಾರದ ಅಧಿಕಾರಿಗಳು ಕಂಡಾಗ ಮಾತ್ರ ಮಾಸ್ಕ್ ಧರಿಸುವ ಚಾಳಿಯಲ್ಲಿ ತೊಡಗಿಕೊಂಡಿರುತ್ತಾರೆ, ಸದ್ರಿ ಗಾಡಿಗಳಲ್ಲಿ ಯಾವುದೇ ಸ್ಯಾನಿಟೈಸ್ ಮಾಡದೆ ಇರುವುದು ಪ್ರಯಾಣಿಕರಿಗೆ ಕಂಟಕವಾಗಿರುತ್ತದೆ ಆಗಿರುತ್ತದೆ, ಆದ್ದರಿಂದ ಪ್ರತಿ ಆಟೋ-ಟ್ಯಾಕ್ಸಿ ಕಾರುಗಳಲ್ಲಿ ಚಾಲಕರಿಗೂ ಮತ್ತು ಪ್ರಯಾಣಿಕರಿಗೂ ಸ್ಪರ್ಶ ವಾಗದಂತೆ ಮಧ್ಯಭಾಗದಲ್ಲಿ ಪಾರದರ್ಶಕದಿಂದ ಕೂಡಿರುವ ಪ್ಲಾಸ್ಟಿಕ್ ಕವರ್ ಅಥವಾ ಗ್ಲಾಸನ್ನು ಅಳವಡಿಸಿಕೊಳ್ಳುವಂತೆ ಹಾಗೂ ಪ್ರತಿ ಪ್ರಯಾಣಿಕನ ಪ್ರಯಾಣ ಮುಗಿದ ನಂತರ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡುವಂತೆ ಮಾಸ್ಕ್ ಧರಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಹಾಗೂ ನಿಯಮ ಮೀರುವ ವಾಹನ ಚಾಲಕರ ಮತ್ತು ಮಾಲೀಕರ ವಾಹನ ಪರವಾನಿಗೆ ರದ್ದುಪಡಿಸಬೇಕು ಹಾಗೂ ವಾಹನವನ್ನು ಸೀಸ್ ಮಾಡಬೇಕು

ಈ ಕೂಡಲೇ ಮೇಲ್ಕಂಡ ನಮ್ಮ ಬೇಡಿಕೆಗಳನ್ನು ಪುರಸ್ಕರಿಸಿ ಅಗತ್ಯ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳಲು ನಮ್ಮ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯು ಈ ಪ್ರತಿಭಟನೆಯ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ,

ವಿಳಂಬವಾದಲ್ಲಿ ಮನವಿ ಪತ್ರ ಸಲ್ಲಿಸಿದ ವಾರದೊಳಗೆ ತಮ್ಮ ಕಚೇರಿ ಮುತ್ತಿಗೆ ಹಾಕುವ ಮುಖಾಂತರ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸುವುದರೊಂದಿಗೆ ಮನವಿ ಸಲ್ಲಿಸಲಾಗಿದೆ!

ಅಪಾರ ಗೌರವ ವಂದನೆಗಳೊಂದಿಗೆ

ಇಂತಿ ತಮ್ಮ ವಿಶ್ವಾಸಿಗಳು

ಡಾ.ಎ. ಸಿ. ದಾನಪ್ಪ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು
ಭಾರತೀಯ ದಲಿತ ಪ್ಯಾಂಥರ್(ರಿ)
ರಾಜ್ಯ ಘಟಕ- ಬೆಂಗಳೂರು

ಮೋಹನ್ ಕುಮಾರ್ ದಾನಪ್ಪ
ವಕೀಲರು ಹಾಗೂ
ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷರು
ಭಾರತೀಯ ದಲಿತ ಪ್ಯಾಂಥರ್ (ರಿ)
ಬಳ್ಳಾರಿ ಜಿಲ್ಲಾ ಘಟಕ
ಕಂಪ್ಲಿ- ಬಳ್ಳಾರಿ ಜಿಲ್ಲೆ

ಜೆ. ಕಾಟಂ ರಾಜು
ಜಿಲ್ಲಾ ಅಧ್ಯಕ್ಷರು
ಭಾರತೀಯ ದಲಿತ ಪ್ಯಾಂಥರ್ (ರಿ)
ಬಳ್ಳಾರಿ ಜಿಲ್ಲಾ ಘಟಕ- ಬಳ್ಳಾರಿ

ಮುಖಂಡರುಗಳು:-
ಟಿ ಹೆಚ್ ಎಂ ರಾಜೇಂದ್ರ ಕುಮಾರ್
ವರ್ದಿ ಶಬ್ಬೀರ್
ವಿ ಜಡೇಯ್ಯ ಸ್ವಾಮಿ
ವಿ ಗೋವಿಂದ ರಾಜು

ಯುವ ಮುಖಂಡರು:-
ಮನೋಜ್ ಕುಮಾರ್ ಡಿ.
ಸೈಯದ್ ವಾರಿಸ್
ರಮೇಶ್ ಕುಂಟೋಜಿ
ಎಸ್ ಕೆ ಮಲ್ಲಿಕಾರ್ಜುನ್
ಮಂಜುನಾಥ್
ಮಣಿಕಂಠ ಪಿ
ಪಿ ಈರಣ್ಣ
ಎಸ್ ಲೋಕೇಶ್

LEAVE A REPLY

Please enter your comment!
Please enter your name here