ಬಸವ ಪಂಚಮಿ ಆಚರಣೆ. | ಬಂಧುತ್ವ ವೇದಿಕೆ ಕರ್ನಾಟಕ ಗೋಕಾಕ್ ಶಾಖೆ ಹಾಗೂ ಸತೀಶ್ ಶುಗರ್ಸ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ

0

ಬಸವ ಪಂಚಮಿ ಆಚರಣೆ. | ಬಂಧುತ್ವ ವೇದಿಕೆ ಕರ್ನಾಟಕ ಗೋಕಾಕ್ ಶಾಖೆ ಹಾಗೂ ಸತೀಶ್ ಶುಗರ್ಸ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ

ಬಸವ ಪಂಚಮಿ ಆಚರಣೆ.

ಪ್ರತಿವರ್ಷದಂತೆ ಈ ವರ್ಷವೂ ಸಹ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಗೋಕಾಕ್ ಶಾಖೆ ಹಾಗೂ ಸತೀಶ್ ಶುಗರ್ಸ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ದಿನಾಂಕ 25.07. 2020 ರಂದು ನಾಗರ ಪಂಚಮಿ ಹಬ್ಬದ ನಿಮಿತ್ಯ ಪೌಷ್ಟಿಕ ಆಹಾರ ಹಾಲನ್ನು ಹಾವಿನ ಹುತ್ತಗಳಿಗೆ ಎರೆಯುವ ಬದಲು ಗೋಕಾಕ ನಗರದ ಶಿವಾ ಫೌಂಡೇಶನಲ್ಲಿರುವ ಅನಾಥ ಮಕ್ಕಳಿಗೆ ಹಾಲನ್ನು ಕೊಟ್ಟು ಮಾನವೀಯತೆಯ ಮೆರೆದಿರುವ ಮಾನವ ಬಂಧುತ್ವ ವೇದಿಕೆ ಗೋಕಾಕ್ ಕಾರ್ಯಕರ್ತರು. ಜಗಜ್ಯೋತಿ ಬಸವಣ್ಣನವರು ಐಕ್ಯರಾದ ದಿನವನ್ನು ನಾಗರಪಂಚಮಿ ಆಚರಿಸುವ ಬದಲು ಬಸವ ಪಂಚಮಿ ಯನ್ನಾಗಿ ಆಚರಿಸಬೇಕು ಎಂದು ಕರೆಕೊಟ್ಟರು. ಮಕ್ಕಳಿಗೆ ಮಹಾಮಾರಿ ಕೊರೋನಾದ ವಿರುದ್ಧ ಹೋರಾಡಲು ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸುವ ಸಂದೇಶದ ಜೊತೆಗೆ ಎಲ್ಲಾ ಮಕ್ಕಳಿಗೆ ಮಾಸ್ಕ ಗಳನ್ನು ಹಾಗೂ ಹಾಲು, ಬಿಸ್ಕಿಟ್, ಬ್ರೆಡ್ ವಿತರಿಸಲಾಯಿತು. ಈ ಸಮಯದಲ್ಲಿ ಮಾನವ ಬಂದುತ್ವ ಏರಿಕೆಯ ಕಾರ್ಯಕರ್ತರಾದ
,ರಮೇಶ ಕೋಲಕಾರ, ಎ.ಬಿ.ಖಾಜಿ, ಶೆಟ್ಟೆಪ್ಪ ಶಿಂಗಳಾಪೂರ, ಸುನೀಲ ಮೇತ್ರಿ, ಮಂಜುನಾಥ್ ಕಳ್ಳಿಮನಿ, ಮಂಜು ಸನದಿ ಹಾಗೂ ಶಿವಾ ಫೌಂಡೇಶನ್ ವ್ಯವಸ್ಥಾಪಕರಾದ ರಮೇಶ ಪೂಜೇರಿ ಹಾಗೂ ಶಾನೂರ ಉಪಸ್ಥಿತಿತರಿದ್ದರು..

LEAVE A REPLY

Please enter your comment!
Please enter your name here