ಬಾಲಕಿಯ ಮೇಲೆ ಕಾಮಾಂಧನ ಕಣ್ಣು – 5 ವರ್ಷದ ಮಗುವಿನ ಸ್ಥಿತಿ ಚಿಂತಾಜನಕ!

0

ಕಾಮುಕನೊಬ್ಬ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಸದ್ಯ ಬಾಲಕಿಯ ಪರಿಸ್ಥಿತಿ ಚಿಂತಾಜನಕವಾಗಿದೆ.

ರಾಜಸ್ಥಾನದ ಬರನ್ ಜಿಲ್ಲೆಯ ಶಹಬಾದ್ ಪ್ರದೇಶದಲ್ಲಿ ಸಂಜೆ ಈ ಘಟನೆ ನಡೆದಿದೆ. ಅಲ್ಲದೇ, ಪ್ರಕರಣವು ನಿನ್ನೆ ಬೆಳಕಿಗೆ ಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ರಾತ್ರಿ ಬಾಲಕಿಗೆ ರಕ್ತಸ್ರಾವವಾಗುತ್ತಿದ್ದರಿಂದ ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೊಟದಲ್ಲಿರುವ ಮತ್ತೊಂದು ಆಸ್ಪತ್ರೆಗೆ ರವಾನಿಸಲಾಯಿತು ಎಂದು ಶಹಬಾದ್ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಈಗಾಗಲೇ ಬಾಲಕಿಗೆ ಒಂದು ಸರ್ಜರಿ ನಡೆದಿದ್ದು, ಇನ್ನೆರಡು ಸರ್ಜರಿ ನಡೆಯಲಿದೆ. ಬಾಲಕಿ ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಮನೆಯ ಹೊರಗಡೆ ಮೂತ್ರವಿಸರ್ಜನೆಗಾಗಿ ತೆರಳಿದ್ದಳು. ಈ ಸಂದರ್ಭದಲ್ಲಿ ಕುಡಿದ ಅಮಲಿನಲ್ಲಿದ್ದ ಕಾಮುಕ ಹಲ್ಲೆ ಮಾಡಿದ್ದಾನೆ. ನಂತರ ಆಕೆಯನ್ನು ಕಟ್ಟಡವೊಂದರ ಒಳಗಡೆ ಎಳೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಎಸ್ ಹೆಚ್ ಒ ಹರಿಪ್ರಸಾದ್ ರಾಣಾ ತಿಳಿಸಿದ್ದಾರೆ.

ಇತ್ತ ತನ್ನ ಅತ್ಯಾಚಾರ ಆಗಿದೆ ಎಂಬುದನ್ನು ಅರಿಯದ ಮುಗ್ಧ ಕಂದಮ್ಮ ಮನೆಗೆ ಅಳುತ್ತಲೇ ಬಂದಿದ್ದಾಳೆ. ಅದಾಗಲೇ ಆಕೆಗೆ ರಕ್ತಸ್ತಾವ ಕೂಡ ಆಗುತ್ತಿತ್ತು. ತನ್ನ ತಾಯಿಯ ಬಳಿ ನಡೆದ ಘಟನೆ ಹೇಳಿದ್ದಾಳೆ. ಕೂಡಲೇ ಬಾಲಕಿಯ ಪೋಷಕರು ಸ್ಥಳೀಯ ಪೊಲಿಸ್ ಠಾಣೆಗೆ ತೆರಳಿ ದೂರು ದಾಲಿಸಿದ್ದಾರೆ. ಆರೋಪಿ ವಿರುದ್ಧ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here