ಬಾಲಿವುಡ್​ ಕಾಮಕಾಂಡದಲ್ಲಿ ಘಟಾನುಘಟಿಗಳು!; ಕೆಜಿಎಫ್​ ನಟಿ ಮೌನಿ ರಾಯ್​, ಊರ್ವಶಿ ರೌಟೇಲಾ ಭಾಗಿ ಆರೋಪ

0

ಸಿನಿಮಾ ಕ್ಷೇತ್ರ ಮತ್ತು ಮಾಡೆಲಿಂಗ್​ ಕ್ಷೇತ್ರದಲ್ಲಿ ಮೈಮಾಟಕ್ಕೆ ಹೆಚ್ಚಿನ ಬೆಲೆ. ಅಂದ ಚೆಂದಕ್ಕೇ ಅಲ್ಲಿ ತೂಕ ಜಾಸ್ತಿ. ಪ್ರತಿಭೆಗೆ ಏನಿದ್ದರೂ ಎರಡನೇ ಸ್ಥಾನ. ಆಗಾಗ ಅಂಥ ಪ್ರಕರಣಗಳು ಸುದ್ದಿ ಮಾಡುತ್ತಲೇ ಇರುತ್ತವೆ. ಆರೋಪ ಪ್ರತ್ಯಾರೋಪಗಳ ಸುರಿಮಳೆ ಸುರಿಯುತ್ತಲೇ ಇರುತ್ತದೆ. ಇದೀಗ ಅದೇ ಕಾಮಕಾಂಡ ದೊಡ್ಡವರ ಬುಡಕ್ಕೆ ಬಂದಿದೆ. ಅಂದರೆ, ದಶಕಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಹಿರಿಯ ನಿರ್ದೇಶಕ ಮತ್ತು ಕೆಲ ಸ್ಟಾರ್ ನಟಿಯರು ಬಾಲಿವುಡ್​ ಕಾಮಕಾಂಡದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಹೌದು, ಹಿರಿಯ ನಿರ್ದೇಶಕ ಮಹೇಶ್ ಭಟ್​, ನಟಿ ಮೌನಿ ರಾಯ್ ಮತ್ತು ಊರ್ವಶಿ ರೌಟೇಲ್​ಗೆ ರಾಷ್ಟ್ರೀಯ ಮಹಿಳಾ ಆಯೋಗ ನೋಟಿಸೊಂದನ್ನು ಕಳುಹಿಸಿದ್ದು, ಮಾಡೆಲಿಂಗ್​ ಮತ್ತು ಸಿನಿಮಾ ನೆಪದಲ್ಲಿ ಹುಡುಗಿಯರನ್ನು ಬಲೆಗೆ ಬೀಳಿಸಿಕೊಳ್ಳುವುದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾ ಎಂದು ನೋಟಿಸ್​ನಲ್ಲಿ ನಮೂದು ಮಾಡಲಾಗಿದೆ. ಇವರಷ್ಟೇ ಅಲ್ಲದೆ ರಣ್​ವಿಜಯ್​ ಸಿಂಗ್​, ಪ್ರಿನ್ಸ್ ನರುಲಾ ಅವರ ಹೆಸರೂ ಸಹ ಪಟ್ಟಿಯಲ್ಲಿದೆ.

ಇತ್ತೀಚೆಗಷ್ಟೇ ಸಾಮಾಜಿಕ ಹೋರಾಟಗಾರ್ತಿ ಯೋಗಿತಾ ಭಯಾನಾ, ಕಿರು ವಿಡಿಯೋವೊಂದನ್ನು ಮಾಡಿ, ಮಾಡೆಲಿಂಗ್​ ಹೆಸರಿನಲ್ಲಿ ಮಹಿಳೆಯರನ್ನು ಕಾಮದ ಕೆಲಸಕ್ಕೆ ಬಳಸಿಕೊಳ್ಳುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಈ ದಂಧೆಯಲ್ಲಿ ಬಾಲಿವುಡ್​ನ ಘಟಾನುಘಟಿಗಳು ಪಾಲುದಾರರಿದ್ದಾರೆ ಎಂದಿದ್ದಾರೆ.

ಐಎಂಜಿ ಸಂಸ್ಥೆಯ ಸನ್ನಿ ವರ್ಮಾ ಮಾಡೆಲಿಂಗ್​ ನೆಪದಲ್ಲಿ ಮುಗ್ದ ಯುವತಿಯರನ್ನು ಬೇರೆ ರೀತಿಯಲ್ಲಿಯೇ ಬಳಸಿಕೊಳ್ಳುತ್ತಿದ್ದಾನೆಂದು ಆರೋಪಿಸಿದ್ದು, ಆತನ ಕಂಪನಿಗೆ ಮತ್ತು ಆತನ ಜಾಹೀರಾತಿಗಳಿಗೆ ಮಹೇಶ್ ಭಟ್​, ಮೌನಿ ರಾಯ್​, ಊರ್ವಶಿ ರೌಟೇಲ್​ ಸೇರಿ ಅನೇಕ ಬಾಲಿವುಡ್​ ಮಂದಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಕೈವಾಡವೂ ಇದೆ ಎಂದು ಯೋಗಿತಾ, ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಈ ದೂರನ್ನು ಸ್ವೀಕರಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ಈ ದಂಧೆಯಲ್ಲಿ ಬಾಲಿವುಡ್​ ಮಂದಿಯ ಕೈವಾಡವಿದೆಯೇ ಎಂಬುದನ್ನು ಪ್ರಶ್ನಿಸುವ ಉದ್ದೇಶದಿಂದ ಅವರ ವಿರುದ್ಧ ನೋಟಿಸ್​ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದ್ದಾರೆ. ಒಂದು ವೇಳೆ ವಿಚಾರಣೆಗೆ ಆಗಮಿಸದೆ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಅವರು ಟ್ವಿಟ್​ ಮಾಡಿದ್ದಾರೆ. (ಏಜೆನ್ಸೀಸ್​)

LEAVE A REPLY

Please enter your comment!
Please enter your name here