ಬಾಹುಬಲಿ ಚಿತ್ರದ ಪಾತ್ರವೊಂದರಲ್ಲಿ ನಟಿಸಲು ರಾಜಮೌಳಿ ನೀಡಿದ ಆಫರ್​ ನಿರಾಕರಿಸಿದ್ರಂತೆ ಸೂರ್ಯ!

0

ಮಗಧೀರ ಮತ್ತು ಬಾಹುಬಲಿಯಂತಹ ಅದ್ಧೂರಿ ಚಿತ್ರಗಳನ್ನು ನಿರ್ದೇಶಿಸಿ ಕತೆ ಮತ್ತು ಸಿನಿಮಾಟೋಗ್ರಫಿಯಲ್ಲಿ ತಮ್ಮದೇ ವಿಭಿನ್ನತೆ ಮೆರೆಯುವ ಮೂಲಕ ಟಾಲಿವುಡ್​ನ ಹೆಮ್ಮೆಯ ನಿರ್ದೇಶಕರಾಗಿರುವ ರಾಜಮೌಳಿ ಚಿತ್ರದಲ್ಲಿ ನಟಿಸಲು ಘಟಾನುಘಟಿ ನಟ-ನಟಿಯರೇ ಕ್ಯೂನಲ್ಲಿ ನಿಂತಿದ್ದಾರೆ. ಹೀಗಿರುವಾಗ ಕಾಲಿವುಡ್​ ಸೂಪರ್​ಸ್ಟಾರ್​ ಸೂರ್ಯ, ರಾಜಮೌಳಿ ನೀಡಿದ ಆಫರ್​ ಅನ್ನೇ ತಿರಸ್ಕರಿಸಿದ್ದರಂತೆ.

ಹೀಗಂತ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಸಿಂಗಂ ಖ್ಯಾತಿಯ ಸೂರ್ಯ ಹೇಳಿಕೊಂಡಿದ್ದಾರೆ. ಒಂದು ವೇಳೆ ಮತ್ತೊಂದು ಅವಕಾಶ ಒದಗಿ ಬಂದರೆ ಯಾವುದೇ ಕಾರಣಕ್ಕೂ ಮಿಸ್​ ಮಾಡಿಕೊಳ್ಳುವುದಿಲ್ಲ ಎಂದು ಸೂರ್ಯ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.

 ಐತಿಹಾಸಿಕ ಬ್ಲಾಕ್​ಬಸ್ಟರ್​ ಬಾಹುಬಲಿ ಸಿನಿಮಾದ ಪಾತ್ರವೊಂದರಲ್ಲಿ ನಟಿಸುವಂತೆ ಎಸ್​.ಎಸ್​. ರಾಜಮೌಳಿ ಅವರು ಸೂರ್ಯಗೆ ಆಫರ್​ ನೀಡಿದ್ದರಂತೆ. ಆದರೆ, ಅದನ್ನು ಅವರು ನಿರಾಕರಿಸಿದರಂತೆ. ಆದರೆ, ಆ ಪಾತ್ರ ಯಾವುದು ಎಂಬುವುದನ್ನು ಸೂರ್ಯ ಬಹಿರಂಗಪಡಿಸಲು ಇಚ್ಛಿಸಲಿಲ್ಲ. ಆದರೆ, ಮತ್ತೊಮ್ಮೆ ಅವಕಾಶ ಸಿಕ್ಕರೆ ಬಿಡುವುದಿಲ್ಲ ಎನ್ನುತ್ತಾರೆ.

ಅಂದಹಾಗೆ ಎರಡು ಭಾಗದಲ್ಲಿ ತೆರೆಕಂಡ ಬಾಹುಬಲಿ ಚಿತ್ರ ಎಲ್ಲ ಭಾಷೆಗಳಲ್ಲೂ ಭರ್ಜರಿ ಯಶಸ್ಸು ಸಾಧಿಸಿದೆ. ಇನ್ನು ಸೂರ್ಯ ಅವರ ಸಿನಿಮಾ ವಿಚಾರಕ್ಕೆ ಬಂದರೆ, ಸೊರರೈ ಪೊಟ್ಟು ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

LEAVE A REPLY

Please enter your comment!
Please enter your name here