ಬಾಹ್ಯಕಾಶದಲ್ಲಿ ಭಾರತದಿಂದ ಮತ್ತೊಂದು ಮೈಲಿಗಲ್ಲು: DRDOನಿಂದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್ ವಾಹನ ಯಶಸ್ವಿ ಪರೀಕ್ಷೆ

0

ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿದ ‘ಆತ್ಮನಿರ್ಭರ ಭಾರತ್’ ಮಿಶನ್‌ನ ಐತಿಹಾಸಿಕ ಹೆಜ್ಜೆಯಲ್ಲಿ, ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ದಿನ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸ್ಕ್ರಾಮ್‌ಜೆಟ್ ಪ್ರೊಪಲ್ಷನ್ ವ್ಯವಸ್ಥೆಯನ್ನು ಬಳಸಿಕೊಂಡು ಹೈಪರ್ಸಾನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ) ಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

ಅಂದ ಹಾಗೇ ಈ ಕಾರ್ಯಾಚರಣೆಯನ್ನು ‘ಸ್ಥಳೀಯ ರಕ್ಷಣಾ ತಂತ್ರಜ್ಞಾನಗಳಲ್ಲಿ ದೈತ್ಯ ಮತ್ತು ಮಹತ್ವದ ಮೈಲಿಗಲ್ಲು’ ಎಂದು ಕರೆಯಲಾಗುತ್ತಿದೆ.ಈ ಕಾರ್ಯಾಚರಣೆಯೊಂದಿಗೆ, ಡಿಆರ್‌ಡಿಒ ಹೆಚ್ಚು ಸಂಕೀರ್ಣ ತಂತ್ರಜ್ಞಾನದ ಸಾಮರ್ಥ್ಯಗಳನ್ನು ಪ್ರದರ್ಶಿಸಿದ್ದು, ಇದು ಉದ್ಯಮದ ಸಹಭಾಗಿತ್ವದಲ್ಲಿ ನೆಕ್ಸ್ಟ್‌ಜೆನ್ ಹೈಪರ್ಸಾನಿಕ್ ವಾಹನಗಳಿಗೆ ಬಿಲ್ಡಿಂಗ್ ಬ್ಲಾಕ್‌ ಆಗಿ ಕಾರ್ಯನಿರ್ವಹಿಸುತ್ತದೆ.ಎಚ್‌ಎಸ್‌ಟಿಡಿವಿ ಸ್ಕ್ರಾಮ್‌ಜೆಟ್ ಎಂಜಿನ್ ಹೊಂದಿದ್ದು, ಇದು ಮ್ಯಾಕ್ 6 ವೇಗದಲ್ಲಿ ಪ್ರಯಾಣಿಸಲು ಸಮರ್ಥವಾಗಿದೆ ಮತ್ತು 20 ಸೆಕೆಂಡುಗಳಲ್ಲಿ 32.5 ಕಿಮೀ (20 ಮೈಲಿ) ಎತ್ತರಕ್ಕೆ ಚಲಿಸುತ್ತದೆ ಎಂದು ಸರ್ಕಾರ ತಿಳಿಸಿದೆ. ಇದು ಕಡಿಮೆ ವೆಚ್ಚದಲ್ಲಿ ಉಪಗ್ರಹಗಳನ್ನು ಉಡಾಯಿಸಲು ಮತ್ತು ದೀರ್ಘ-ಶ್ರೇಣಿಯ ಕ್ರೂಸ್ ಕ್ಷಿಪಣಿಯನ್ನು ಸಹ ಬಳಸಬಹುದು ಎನ್ನಲಾಗಿದೆ.ಹೈಪರ್ಸಾನಿಕ್ ಟೆಕ್ನಾಲಜಿ ಡೆಮೋನ್‌ಸ್ಟ್ರೇಟರ್ ವಾಹನದ ಯಶಸ್ವಿ ಹಾರಾಟ ಪರೀಕ್ಷೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ ಮತ್ತು ವಿಜ್ಞಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.ಡಿಆರ್‌ಡಿಒ ನಡೆಸಿದ ಈ ಯಶಸ್ವಿ ಪರೀಕ್ಷೆಯೊಂದಿಗೆ, ಮುಂದಿನ ಹಂತಕ್ಕೆ ಮುನ್ನಡೆಯಲು ಎಲ್ಲಾ ನಿರ್ಣಾಯಕ ತಂತ್ರಜ್ಞಾನಗಳನ್ನು ಈಗ ಸ್ಥಾಪಿಸಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here