ಬಿಗ್ ಬಿ ಪ್ರಶಂಸೆಗೆ ಪಾತ್ರನಾದ ಕನ್ನಡ ಚಿತ್ರ ನಟ ವೈಜನಾಥ್ ಬಿರದಾರ್

0

ಚಿತ್ರದಲ್ಲಿ ಪಾತ್ರ ಯಾವುದಾದರೇನು, ಜೀವ ತುಂಬಿ ನಟಿಸುವುದಷ್ಟೇ ತನ್ನ ಕೆಲಸ ಎನ್ನುವ ಕನ್ನಡ ಚಿತ್ರ ನಟ ವೈಜನಾಥ್ ಬಿರಾದಾರ್ ಅತ್ಯುತ್ತಮ ಕಲಾವಿದನಾಗಿದ್ದಾರೆ ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರಸಂಶಿಸಿದ್ದಾರೆ.

ಭಿಕ್ಷುಕ, ಕುಡುಕ, ಬಡವ ಮೊದಲಾದ ಪಾತ್ರಗಳಿಂದ 350ಕ್ಕೂ ಹಚ್ಚು ಚಿತ್ರಗಳ ಮೂಲಕ ರಸಿಕರನ್ನು ರಂಜಿಸುವ ಈ ನಟ, ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಕಲೆಯನ್ನು ದೇವರೆಂದು ನಂಬಿರುವ ವೈಜನಾಥ್​ ಬಿರಾದರ್​ ಅವರು ಗಿರೀಶ್​​ ಕಾಸರವಳ್ಳಿ ನಿರ್ದೇಶನದ ಕನಸೆಂಬ ಕುದುರೆಯನೇರಿ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದು, ಅದಕ್ಕಾಗಿ ಸ್ಪೇನ್​ನ ಮ್ಯಾಡ್ರಿಡ್​ನಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟ ಎಂಬ ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬಿರಾದರ್​ಗೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿರುವ ವಿಚಾರ ತಿಳಿದು ಬಾಲಿವುಡ್​ ಬಿಗ್​ ಬಿ ಅಮಿತಾಭ್​ ಬಚ್ಚನ್​ ಇತ್ತೀಚೆಗಷ್ಟೆ ಕರೆ ಮಾಡಿ, ಶುಭಾಶಯ ತಿಳಿಸಿದ್ದಾರೆ. ಭಾರತೀಯನಿಗೆ ಈ ಗೌರವ ಸಿಕ್ಕಿರುವುದು ನಮಗೆ ಹೆಮ್ಮೆ ತಂದಿದೆ ಎಂದಿದ್ದಾರೆ.

LEAVE A REPLY

Please enter your comment!
Please enter your name here