ಬಿಜೆಪಿ ಮಂಡಲ ಮೋರ್ಚಾ ವತಿಯಿಂದ ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಕೇಂದ್ರ ರಾಜ್ಯ ರೈಲ್ವೆ ಸಚಿವರಾದ ಸುರೇಶ್ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು,

0

ಬೆಳಗಾವಿ ಜಿಲ್ಲೆ ಅಥಣಿ ತಾಲೂಕು
ಬಿಜೆಪಿ ಮಂಡಲ ಮೋರ್ಚಾ ವತಿಯಿಂದ ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಕೇಂದ್ರ ರಾಜ್ಯ ರೈಲ್ವೆ ಸಚಿವರಾದ ಸುರೇಶ್ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು,
ಇದೇ ಸಂದರ್ಭದಲ್ಲಿ ಮಾತನಾಡಿದ ಪುಟ್ಟು ಹಿರೇಮಠ್ ಲೋಕ ಸಭಾ ಸದಸ್ಯರು ಹಾಗೂ ಕೇಂದ್ರ ಮಂತ್ರಿ ಸುರೇಶ ಅಂಗಡಿ ಅವರ ಅಗಲಿಕೆಯಿಂದ ಬಿಜೆಪಿ ಪಕ್ಷಕ್ಕೆ ಅμÉ್ಟ ಅಲ್ಲ ರಾಷ್ಟ್ರಕ್ಕೂ ಕೂಡಾ ಒಬ್ಬ ಧೀಮಂತ ನಾಯಕನ ಅಕಾಲಿಕ ನಿಧನದಿಂದ ತುಂಬಲಾರದ ನಷ್ಟವಾಗಿದೆ. ಹಿಂದಿನ ಕೇಂದ್ರ ಮಂತ್ರಿ ಅನಂತಕುಮಾರ್ ಅವರ ನಿಧನದಿಂದ ತೆರವಾದ ಸ್ಥಾನ ತುಂಬಿದಂತ ನಾಯಕ ನಮ್ಮ ಸುರೇಶ್ ಅಂಗಡಿ ಅವರು. ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಬೇರುಮಟ್ಟದಲ್ಲಿ ಬೆಳೆಸಲು ಸಾಕಷ್ಟು ಶ್ರಮಿಸಿದ್ದರು ಅವರ ಅಗಲಿಕೆ ಪಕ್ಷಕ್ಕೆ ಹಾಗು ರಾಜ್ಯಕ್ಕೆ ಆಘಾತ ಉಂಟುಮಾಡಿದೆ.

ಇದೆ ಸಂದರ್ಭದಲ್ಲಿ ಮೌನಾಚರಣೆ ಮಾಡುವ ಮೂಲಕ ಅಗಲಿದ ದಿಮಂತ ನಾಯಕ ಸುರೇಶ್ ಅಂಗಡಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಅಥಣಿ ಬಿಜೆಪಿ ಯುವ ಮೋರ್ಚಾ ಮಂಡಲದ ಉಪಾಧ್ಯಕ್ಷ ಶಿವಪ್ರಸನ್ (ಪುಟ್ಟು) ಹಿರೇಮಠ್, ಮಲ್ಲೇಶ್ ಹುದ್ದಾರ್ ವಿನಯ ಹೊನಕಾಂಬಳೆ, ಜೈದೇವ್ ಯಲ್ಲಟ್ಟಿ, ಸಿದ್ದು ಮಳಿ, ಅನಿಲ ಮೋರೆ, ಕುಮಾರ್ ಪಾಟೀಲ್, ಆನಂದ ಮಾದಗುಡಿ, ಪ್ರಶಾಂತ್ ತೊಡಕರ್, ಅಶೋಕ್ ಗೌರಗೊಂಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು

ಅಥಣಿ ಬಿಜೆಪಿ ಮಂಡಲ ಮೋರ್ಚಾ ವತಿಯಿಂದ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಕೇಂದ್ರ ರಾಜ್ಯ ರೈಲ್ವೆ ಸಚಿವರಾದ ಸುರೇಶ್ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಚಿಕ್ಕೋಡಿ ಪಟ್ಟಣದ ಬಾಬು ಜಗಜೀವನ ರಾವ್ ಸಭಾಭವನದಲ್ಲಿ ಚಿಕ್ಕೋಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ರಾಜೇಶ ನೆರ್ಲಿಯವರ ನೇತೃತ್ವದಲ್ಲಿ ಅಕಾಲಿಕವಾಗಿ ನಿಧನರಾದ ಕೇಂದ್ರ ಸಚಿವರಾದ ಸುರೇಶ ಅಂಗಡಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷ ಕಾಲ ಮೌನಾಚರಣೆ ಮಾಡಲಾಯಿತು. ನಂತರ ಸುರೇಶ ಅಂಗಡಿಯವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು.

ಚಿಕ್ಕೋಡಿ ಬಿಜೆಪಿ ಡಾ.ರಾಜೇಶ್ ನೆರ್ಲಿ ಮಾತನಾಡಿ ಸುರೇಶ್ ಅಂಗಡಿಯವರು ಬಿಜೆಪಿ ಪಕ್ಷಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಹಾಗೂ ಪಕ್ಷ ಸಂಘಟನೆಯಲ್ಲಿ ಅವರ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಹಾಗೂ ಬೆಳಗಾವಿ ಜಿಲ್ಲೆಯ ಹಿರಿಯ ರಾಜಕಾರಣಿ ಹಾಗೂ ಬಿಜೆಪಿಯ ಕೊಂಡಿಯೊಂದು ಕಳಚಿ ಬಿದ್ದಿದೆ.
ದೇಶ ಕಂಡ ಒಬ್ಬ ಮಹಾನ ರಾಜಕೀಯ ವ್ಯಕ್ತಿಯನ್ನು ನಾವು ಇವತ್ತು ಕಳೆದುಕೊಂಡಿದೆವೆ.ಇವತ್ತು ಸುರೇಶ ಅಂಗಡಿಯವರ ಅಕಾಲಿಕ ನಿಧನದಿಂದ ಚಿಕ್ಕೋಡಿ ಜಿಲ್ಲಾ ಬಿಜೆಪಿ ಕಾರ್ಯಕರ್ತರಿಗೆ ತುಂಬಲಾರದ ನಷ್ಟವಾಗಿದೆ. ಈ ಹಿನ್ನಲೆಯಲ್ಲಿ ಇವತ್ತು ಸುರೇಶ ಅಂಗಡಿಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಬಿಜೆಪಿ ಕಾರ್ಯಕರ್ತರು ಸಾಮೂಹಿಕವಾಗಿ ಸಂತಾಪವನ್ನು ಸೂಚಿಸಿದ್ದೇವೆ ಎಂದು ಡಾಕ್ಟರ್ ಹೇಳಿದರು.
: ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ದುಂಡಪ್ಪ ಬೆಂಡವಾಡೆ, ಸತೀಶ್ ಅಪ್ಪಾಜಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಸುರೇಶ್ ಚನ್ನಬಸಪ್ಪ ಅಂಗಡಿ (೦೧ಜೂನ್೧೯೫೫ – ೨೩ಸೆಪ್ಟೆಂಬರ್೨೦೨೦) ಒಬ್ಬ ಭಾರತೀಯ ರಾಜಕಾರಣಿ. ಕರ್ನಾಟಕದ ಬೆಳಗಾವಿ ಕ್ಷೇತ್ರದಿಂದ ಸಂಸದರಾಗಿ ಭಾರತೀಯ ಜನತಾ ಪಕ್ಷದಿಂದ[೧] ನಾಲ್ಕು ಬಾರಿ ಆಯ್ಕೆಯಾಗಿದ್ದವರು. ಮೇ ೨೦೧೯ರಿಂದ ಸೆಪ್ಟೆಂಬರ್೨೦೨೦ರಲ್ಲಿ ಅವರ ಮರಣದವರೆಗೂ ಭಾರತದ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದರು.

ಸುರೇಶ್ ಅವರು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪಾ ಗ್ರಾಮದವರು. ಸೋಮವ್ವ ಮತ್ತು ಚೆನ್ನಬಸಪ್ಪ ಅಂಗಡಿ ದಂಪತಿಗೆಗ ಜನಿಸಿದರು. ಬೆಳಗಾವಿಯ ಎಸ್.ಎಸ್.ಎಸ್.ಸಮಿತಿ ಕಾಲೇಜ್ ಆಫ್ ಕಾಮರ್ಸ್ ನಿಂದ ಪದವಿಯನ್ನು ಪಡೆದರು. ನಂತರ ಬೆಳಗಾವಿಯ ಪ್ರತಿಷ್ಠಿತ ರಾಜ ಲಖಮ್ ಗೌಡ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು. ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುವ ಮೊದಲು ಅವರು ತಮ್ಮದೇ ಆದ ಖಾಸಗಿ ವ್ಯವಹಾರವನ್ನು ನಡೆಸುತ್ತಿದ್ದರು. ವಾಸವದತ್ತ ಸಿಮೆಂಟ್ [ಪ್ರಸ್ತುತ ಬಿರ್ಲಾ ಶಕ್ತಿ ಸಿಮೆಂಟ್] ಅನ್ನು ಯಶಸ್ವಿಯಾಗಿ ಚಾಲನೆಗೆ ತಂದು ಬೆಳಗಾವಿಯಲ್ಲೇ ಪ್ರಥಮ ಸ್ಥಾನಕ್ಕೆ ಇವರು ತಂದರು.[೨] ಅವರಿಗೆ ಮದುವೆಯಾಗಿ ೨ ಹೆಣ್ಣು ಮಕ್ಕಳಿದ್ದಾರೆ.

ರಾಜಕೀಯ ಜೀವನ ಸಂಪಾದಿಸಿ
ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಅವರು ೧೯೯೬ರಲ್ಲಿ ಪಕ್ಷದ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದರು. ಅವರು ೧೯೯೯ರವರೆಗೆ ಆ ಕಚೇರಿಯಲ್ಲಿ ಮುಂದುವರೆದರು. ೨೦೦೧ರಲ್ಲಿ ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಯಿತು ಮತ್ತು ಅವರು ಆ ಹುದ್ದೆಯಲ್ಲಿ ಮುಂದುವರೆದರು. ೨೦೦೪ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎದುರಾಳಿಯನ್ನು ದೊಡ್ಡ ಅಂತರದಿಂದ ಸೋಲಿಸಿ ೧೪ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು. ೨೦೦೯ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಎರಡನೇ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅವರು ೨೦೧೪ರಲ್ಲಿ ಸತತ ಮೂರನೇ ಬಾರಿಗೆ ಆಯ್ಕೆಯಾದ ಇವರು, ೨೦೧೯ರಲ್ಲಿ ೪ನೇ ಬಾರಿಗೆ ಸಂಸತ್ ಪ್ರವೇಶಿಸಿದರು.[೩] ಮೇ ೨೦೧೯ರಲ್ಲಿ ಅಂಗಡಿಯವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.[೪]

ನಿಧನ ಸಂಪಾದಿಸಿ
ಅಂಗಡಿಯವರು ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಿಸದೇ ೨೩ಸೆಪ್ಟೆಂಬರ್ ೨೦೨೦ ರಂದು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.[೫] ಅವರಿಗೆ ೬೫ ವರ್ಷ ವಯಸ್ಸಾಗಿತ್ತು.

ಅಟಲ್‌ ಬಿಹಾರಿ ವಾಜಪೇಯಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತುಕೊಟ್ಟಂತೆ ಪ್ರಧಾನಿ ನರೇಂದ್ರ ಮೋದಿ ರೈಲು ವ್ಯವಸ್ಥೆ ಬಲಪಡಿಸಲು ಆದ್ಯತೆ ನೀಡಿದ್ದಾರೆ. ಇದರಿಂದಾಗಿ ಬರುವ ದಿನಗಳಲ್ಲಿ ದೇಶದ ರೈಲು ವ್ಯವಸ್ಥೆ ಡಿಸೆಲ್‌ನಿಂದ ಮುಕ್ತವಾಗಿ ವಿದ್ಯುತ್ ಮತ್ತು ಸೋಲಾರ್ ಎನರ್ಜಿಯಿಂದ ಓಡಲಿವೆ. ಇದರಿಂದ ಪರಿಸರ ಮತ್ತು ಡಿಸೆಲ್‌ಗೆ ವೆಚ್ಚವಾಗುತ್ತಿರುವ ಅಪಾರ ಹಣ ಉಳಿಯುತ್ತದೆ ಎಂದು ಹೇಳುತ್ತಿದ್ದಾರೆ.

ಸುರೇಶ ಅಂಗಡಿ ಅವರಿಗೆ ದೇಶದ ಈಶಾನ್ಯ ರಾಜ್ಯಗಳಲ್ಲಿ ರೈಲು ವ್ಯವಸ್ಥೆ ಬಲಪಡಿಸುವ ಕನಸು ಇದೆ. ಅರುಣಾಚಲದಲ್ಲಿ ತವಾಂಗ್‌ವರೆಗೆ ಹಳಿ ವಿಸ್ತರಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. ಇದರಿಂದ ಚೀನಾ ಗಡಿಯಲ್ಲಿ ದೇಶಿಯ ಸಾರಿಗೆ ವ್ಯವಸ್ಥೆ ಬಲಿಷ್ಠಗೊಳ್ಳುತ್ತದೆ. ಅಟಲ್‌ ಬಿಹಾರಿ ವಾಜಪೇಯಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತುಕೊಟ್ಟಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರೈಲು ವ್ಯವಸ್ಥೆ ಬಲಪಡಿಸಲು ಆದ್ಯತೆ ನೀಡಿದ್ದಾರೆ.

ಇದರಿಂದಾಗಿ ಬರುವ ದಿನಗಳಲ್ಲಿ ದೇಶದ ರೈಲು ವ್ಯವಸ್ಥೆ ಡಿಸೆಲ್‌ನಿಂದ ಮುಕ್ತವಾಗಿ ವಿದ್ಯುತ್ ಮತ್ತು ಸೋಲಾರ್ ಎನರ್ಜಿಯಿಂದ ಓಡಲಿವೆ. ಇದರಿಂದ ಪರಿಸರ ಮತ್ತು ಡಿಸೆಲ್‌ಗೆ ವೆಚ್ಚವಾಗುತ್ತಿರುವ ಅಪಾರ ಹಣ ಉಳಿಯುತ್ತದೆ ಎಂದು ಹೇಳುತ್ತಿದ್ದಾರೆ.
ಅಜ್ಜ, ಅಜ್ಜಿ, ಅಪ್ಪ, ಅಮ್ಮನ ಅಕ್ಕರೆಯಲ್ಲಿ ಬೆಳೆದಿರುವ ಸುರೇಶ ಅಂಗಡಿ, ಅದೇ ಪ್ರೀತಿ, ಅಂತಃಕರಣವನ್ನು ಜನರಿಗೂ ನೀಡುತ್ತಿದ್ದಾರೆ. ಯಾವುದೇ ಹೊತ್ತಿನಲ್ಲಿ ಹೋದರೂ ಜನರ ಸಮಸ್ಯೆಯನ್ನು ಸಮಾಧಾನದಿಂದ ಆಲಿಸುತ್ತಾರೆ. ಇದು ಅವರ ಜನಪ್ರಿಯತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ‘‘ನಾನು ಜನರಿಂದಲೇ ಮೇಲೆ ಬಂದಿದ್ದೇನೆ. ಯಾವಾಗಲೂ ಜನರಿಗಾಗಿ ದುಡಿಯುತ್ತೇನೆ’’ ಎಂದು ಹೇಳಿ ತಮ್ಮ ವಿನಯದ ನಡತೆ ತೋರುತ್ತಾರೆ.

ಬಾಗಲಕೋಟ-ಕುಡಚಿ ಮಾರ್ಗದ ಕಡೆಗೂ ಗಮನ ಹರಿಸಿದ್ದು, ಹುಬ್ಬಳ್ಳಿ-ಅಂಕೋಲಾ ಮಾರ್ಗ ನಿರ್ಮಾಣದಲ್ಲಿದ್ದ ತೊಡಕುಗಳನ್ನು ನಿವಾರಿಸಿದ್ದಾರೆ. ಪರಿಸರ ಇಲಾಖೆ ಸಮಸ್ಯೆಯನ್ನು ಮುಖ್ಯಮಂತ್ರಿಗಳು ಬಗೆಹರಿಸಿದ್ದಾರೆ. ಕೇಂದ್ರದಿಂದಲೂ ಇಂಥದ್ದೇ ಕ್ಲಿಯರೆನ್ಸ್ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಇದಲ್ಲದೆ ನನೆಗುದಿಯಲ್ಲಿದ್ದ ರಾಜ್ಯದ ಅನೇಕ ರೈಲು ಯೋಜನೆಗಳಿಗೆ ಮಂಜೂರಾತಿ, ಕಾಮಗಾರಿಗಳ ತ್ವರಿತತೆಗೆ ಒತ್ತು ಕೊಟ್ಟಿದ್ದಾರೆ.

ಸುರೇಶ ಅಂಗಡಿ ಅವರ ಕ್ರಿಯಾಶೀಲತೆ ಕಂಡು ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲರಿಗೂ ಉನ್ನತ ಶಿಕ್ಷಣ ಸುರೇಶ ಅಂಗಡಿ ಅವರಿಗೆ ಬಡಜನರ ಶಿಕ್ಷಣದ ಕುರಿತು ವಿಶೇಷ ಕಾಳಜಿ ಇದೆ. ಇದರಿಂದಾಗಿ ಅವರು ಜನ್ಮಸ್ಥಳ ಕೆ.ಕೆ. ಕೊಪ್ಪ ಗ್ರಾಮಕ್ಕೆ ಸರಕಾರಿ ಪದವಿ ಕಾಲೇಜು ಮತ್ತು ಇತರೆ ಶಿಕ್ಷಣ ವ್ಯವಸ್ಥೆಯನ್ನು ತಂದರು. ಜತೆಗೆ ನಗರದ ಹೊರವಲಯದಲ್ಲಿರುವ ಸಾವಗಾಂವದಲ್ಲಿರುವ ತಮ್ಮ ಜಮೀನದಲ್ಲಿ ಅತ್ಯಾಧುನಿಕ ಅನುಕೂಲಗಳು ಇರುವಂತೆ ಎಂಜಿನಿಯರಿಂಗ್, ವಿಜ್ಞಾನ, ವಾಣಿಜ್ಯ, ಸಿಬಿಎಸ್ಸಿ ಸೇರಿ ನರ್ಸರಿಯಿಂದ ಸ್ನಾತಕೋತ್ತರವರೆಗಿನ ಕೋರ್ಸ್ಗಳನ್ನು ತೆರೆದು ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಮಾಡಿದ್ದಾರೆ.

ಸುರೇಶ ಅಂಗಡಿ ಅವರ ಹೆಸರು ಕೇಳಿದರೆ ಜನರ ಮನದಲ್ಲಿ ಅಭಿವೃದಿಯ ಹರಿಕಾರನ ಕಲ್ಪನೆ ಮೂಡುತ್ತದೆ. ಅವರ ಪರಿಶ್ರಮದಿಂದಾಗಿ ಇಂದು ಬೆಳಗಾವಿ ಬೆಳಗುತ್ತಿದೆ. ಅಂಗಡಿ ಅವರ ಕಾಳಜಿಯಿಂದಾಗಿ ಬೆಳಗಾವಿ ಸುವರ್ಣ ವಿಧಾನಸೌಧ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಪಡೆದು ರಾಜ್ಯದ 2ನೇ ರಾಜಧಾನಿ ಪಟ್ಟಕ್ಕೇರಿತು. ನಗರದಲ್ಲಿ ಸಾವಿರಾರು ಕೋಟಿ ರೂ.ಗಳ ವೆಚ್ಚದ ಸ್ಮಾರ್ಟ್ ಸಿಟಿ ಕೆಲಸಗಳು ನಡೆದಿವೆ. ಎಲ್ಲರ ಕೋರಿಕೆಯಂತೆ ಅಂಬೇಡ್ಕರ್ ಭವನ ನಿರ್ಮಿಸಲಾಗಿದೆ. ವಿಮಾನ ನಿಲ್ದಾಣ ವಿಸ್ತರಣೆಯಾಗಿದೆ. 25 ಕೋಟಿ ರೂ. ಗಳ ವೆಚ್ಚದಲ್ಲಿ ನಗರದ ರೈಲ್ವೆ ನಿಲ್ದಾಣ ಆಧುನೀಕರಣಗೊಳ್ಳುತ್ತಿದೆ. ರೈಲ್ವೆ ಮೇಲ್ಸೇತುವೆಗಳು ಆಗುತ್ತಿವೆ. ಘಟಪ್ರಭಾ ರೈಲು ನಿಲ್ದಾಣ 10 ಕೋಟಿ ರೂ. ಗಳಲ್ಲಿ ವಿಸ್ತರಣೆಗೊಂಡಿದೆ. ರಸ್ತೆ ಒಳಗೊಂಡು ಇಂಥ ಅನೇಕ ಯೋಜನೆಗಳು ಜಾರಿಯಲ್ಲಿವೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಜಾಗದ ಸಮಸ್ಯೆಯಿಂದಾಗಿ ಅದು ನಿರೀಕ್ಷಿತ ಅಭಿವೃದ್ಧಿ ಕಾಣಲು ಸಾಧ್ಯವಾಗಿಲ್ಲ. ಇದಕ್ಕೆ ಪರ್ಯಾಯ ಜಾಗ ಕೊಡಿಸುವ ಪ್ರಯತ್ನದಲ್ಲಿದ್ದ ಅವರಿಗೆ ಈಗ ಹಿರೇಬಾಗೇವಾಡಿ ಪ್ರದೇಶದ ಬೆಂಡಿಗೇರಿ ಬಳಿ ಜಿಲ್ಲಾಧಿಕಾರಿಗಳು ಮತ್ತು ಅಲ್ಲಿನ ರೈತರು 200 ಎಕರೆ ಜಮೀನು ಕೊಡುವುದಾಗಿ ತಿಳಿಸಿದ್ದಾರೆ. ಇದನ್ನೂ ಕೂಡ ಸಚಿವರು ಕುಲಪತಿ, ಅಧಿಕಾರಿ, ತಜ್ಞರು ಮತ್ತು ರೈತರೊಂದಿಗೆ ಪರಿಶೀಲಿಸಿದ್ದು, ಸರಕಾರ ಮಟ್ಟದಲ್ಲಿ ಅಂತಿಮಗೊಳಿಸಲು ಒತ್ತುಕೊಟ್ಟಿದ್ದಾರೆ. ಸದಾ ಜನ ಮತ್ತು ಅಭಿವೃದ್ಧಿ ಪರ ಚಿಂತಕರಾಗಿರುವ ಸುರೇಶ ಅಂಗಡಿ, ತಮ್ಮ ಕಾರ್ಯಗಳಿಂದಾಗಿಯೇ ಸಂಸತ್‌ಗೆ ನಾಲ್ಕು ಬಾರಿ ಆಯ್ಕೆಯಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಮಹಾಪೂರವನ್ನೇ ಹರಿಸಿದ್ದಾರೆ. ಸಂಸತ್‌ನಲ್ಲಿ ರಾಜ್ಯದ ಪರ ಧ್ವನಿಯೆತ್ತಿ ನಾಡಿನ ಹಿತವನ್ನೂ ಕಾಪಾಡಿದ್ದಾರೆ. ದೇಶದ ವಿಷಯ ಬಂದಾಗ ಅನೇಕ ಉಪಯುಕ್ತ ಸಲಹೆಗಳನ್ನು ನೀಡಿ, ಪ್ರಧಾನಿ ನರೇಂದ್ರ ಮೋದಿಯವರ ಮನಗೆದ್ದು, ರೈಲ್ವೆ ರಾಜ್ಯ ಸಚಿವರಾಗಿ ಇಲಾಖೆಯಲ್ಲಿ ಭಾರಿ ಬದಲಾವಣೆ, ಸುಧಾರಣೆ ಮತ್ತು ಅಭಿವೃದ್ಧಿ ಕೆಲಸಗಳನ್ನು ನಡೆಸಿ ಗಮನ ಸೆಳೆದಿದ್ದಾರೆ.
ಸುರೇಶ ಅಂಗಡಿ ಅವರಿಗೆ ಬಡಜನರ ಶಿಕ್ಷಣದ ಕುರಿತು ವಿಶೇಷ ಕಾಳಜಿ ಇದೆ. ಇದರಿಂದಾಗಿ ಅವರು ಜನ್ಮಸ್ಥಳ ಕೆ.ಕೆ. ಕೊಪ್ಪ ಗ್ರಾಮಕ್ಕೆ ಸರಕಾರಿ ಪದವಿ ಕಾಲೇಜು ಮತ್ತು ಇತರೆ ಶಿಕ್ಷಣ ವ್ಯವಸ್ಥೆಯನ್ನು ತಂದರು. ಜತೆಗೆ ನಗರದ ಹೊರವಲಯದಲ್ಲಿರುವ ಸಾವಗಾಂವದಲ್ಲಿರುವ ತಮ್ಮ ಜಮೀನದಲ್ಲಿ ಅತ್ಯಾಧುನಿಕ ಅನುಕೂಲಗಳು ಇರುವಂತೆ ಎಂಜಿನಿಯರಿಂಗ್, ವಿಜ್ಞಾನ, ವಾಣಿಜ್ಯ, ಸಿಬಿಎಸ್ಸಿ ಸೇರಿ ನರ್ಸರಿಯಿಂದ ಸ್ನಾತಕೋತ್ತರವರೆಗಿನ ಕೋರ್ಸ್ ಗಳನ್ನು ತೆರೆದು ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಮಾಡಿದ್ದಾರೆ. ಅಜ್ಜ, ಅಜ್ಜಿ, ಅಪ್ಪ, ಅಮ್ಮನ ಅಕ್ಕರೆಯಲ್ಲಿ ಬೆಳೆದಿರುವ ಸುರೇಶ ಅಂಗಡಿ, ಅದೇ ಪ್ರೀತಿ, ಅಂತಃಕರಣವನ್ನು ಜನರಿಗೂ ನೀಡುತ್ತಿದ್ದಾರೆ. ಯಾವುದೇ ಹೊತ್ತಿನಲ್ಲಿ ಹೋದರೂ ಜನರ ಸಮಸ್ಯೆಯನ್ನು ಸಮಾಧಾನದಿಂದ ಆಲಿಸುತ್ತಾರೆ. ಇದು ಅವರ ಜನಪ್ರಿಯತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ‘‘ನಾನು ಜನರಿಂದಲೇ ಮೇಲೆ ಬಂದಿದ್ದೇನೆ. ಯಾವಾಗಲೂ ಜನರಿಗಾಗಿ ದುಡಿಯುತ್ತೇನೆ’’ ಎಂದು ಹೇಳಿ ತಮ್ಮ ವಿನಯದ ನಡತೆ ತೋರುತ್ತಾರೆ.

​ಸುರೇಶ್‌ ಅಂಗಡಿ ವೈಯಕ್ತಿಕ ವಿವರ

ಹೆಸರು : ಸುರೇಶ ಅಂಗಡಿ

ತಂದೆ : ಚನ್ನಬಸಪ್ಪ ಅಂಗಡಿ

ತಾಯಿ : ಸೋಮವ್ವ

ಜನ್ಮದಿನ : 1 ಜೂನ್, 1955

ಹುಟ್ಟಿದ ಸ್ಥಳ : ಕೆ.ಕೆ. ಕೊಪ್ಪ, ಬೆಳಗಾವಿ ತಾಲೂಕು

ಪತ್ನಿ : ಮಂಗಲಾ,

ಮಕ್ಕಳು : ಇಬ್ಬರು ಪುತ್ರಿಯರು (ಸೂರ್ತಿ ಮತ್ತು ಶ್ರದ್ಧಾ)

ಶಿಕ್ಷಣ : ಬಿಕಾಂ – ಎಲ್‌ಎಲ್‌ಬಿ (ಸ್ಪೆಶಲ್).

ವಿಳಾಸ : ‘ಸ್ಫೂರ್ತಿ’, ಸಂಪಿಗೆ ರಸ್ತೆ, ವಿಶ್ವೇಶ್ವರಯ್ಯ ನಗರ, ಬೆಳಗಾವಿ

​ಕಾರ್ಯಸಾಧನೆ

1996-99ರವರೆಗೆ ಬಿಜೆಪಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ.

2000-2004 ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಕಾರ್ಯಕಾರಿ ಸದಸ್ಯ.

2001-2004: ಬಿಜೆಪಿ ಬೆಳಗಾವಿ ಜಿಲ್ಲಾ ಅಧ್ಯಕ್ಷ.

ಸಂಸತ್ ಪ್ರವೇಶ

2004ರಲ್ಲಿ (ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶ) ಸಂಸತ್ ಸ್ಥಾಯಿ ಸಮಿತಿ ಸದಸ್ಯ.

2009ರ ಚುನಾವಣೆಯಲ್ಲಿ 15ನೇ ಸಂಸತ್‌ಗೆ 1.15 ಲಕ್ಷ ಮತಗಳ ಅಂತರದಿಂದ ಮರು ಆಯ್ಕೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸದಸ್ಯ ಸಮಿತಿ, ಸಂಸತ್ ಸದಸ್ಯರ ಪಿಂಚಣಿ, ವೇತನ ಮತ್ತು ಭತ್ತೆಗಳ ಕುರಿತು ಸದಸ್ಯ ಜಂಟಿ ಸಮಿತಿ, ಕೇಂದ್ರ ನೇರ ತೆರಿಗೆಗಳ ಸದಸ್ಯರ ಸಲಹಾ ಸಮಿತಿ ಸದಸ್ಯ.

​ರೈಲ್ವೆ ಖಾತೆ ಸಚಿವರಾಗಿ ಅಧಿಕಾರ ಸ್ವೀಕಾರ
2014ರಲ್ಲಿ 75,860 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವಿನೊಂದಿಗೆ ಲೋಕಸಭೆ ಪ್ರವೇಶ.

ಲೋಕಸಭೆ ಸದನ ಸಮಿತಿ ಅಧ್ಯಕ್ಷ. ರಕ್ಷಣಾ ಸ್ಥಾಯಿ ಸಮಿತಿ ಸದಸ್ಯ, ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದ ಸಮಾಲೋಚನಾ ಸಮಿತಿ ಸದಸ್ಯ. ಹೊಸದಿಲ್ಲಿಯ ಅರ್ಜಿಗಳ ಸದಸ್ಯ ಸಮಿತಿಯ ಸದಸ್ಯ, ಭಾರತೀಯ ವಿಜ್ಞಾನ ಸಂಸ್ಥೆಯ

ಸದಸ್ಯ.

2019ರಲ್ಲಿ 17ನೇ ಸಂಸತ್‌ಗೆ 3.63 ಲಕ್ಷ ಮತಗಳ ಅಂತರದಿಂದ 4ನೇ ಬಾರಿಗೆ ಸತತ್‌ಗೆ ಆಯ್ಕೆ.

ರೈಲು ಸೇವೆ ಮತ್ತು ಯೋಜನೆಗಳಲ್ಲಿ ಗಣನೀಯ ಸುಧಾರಣೆಗೆ ಕ್ರಮ.

ಆಸಕ್ತಿ: ಬಿಜಿನೆಸ್, ಕೈಗಾರಿಕೆ ಮತ್ತು ಕೃಷಿ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ, ಕುಡಿಯುವ ನೀರು, ಮೂಲ ಸೌಕರ್ಯ, ಬಡ ಮಕ್ಕಳ ಶಿಕ್ಷಣ.

ಚಟುವಟಿಕೆ: ಗಾಲ್ಫ್‌. (ಬೆಳಗಾವಿ ಗಾಲ್ ಕೋರ್ಸ್ ಸದಸ್ಯ)

2009ರಿಂದ ಸುರೇಶ ಅಂಗಡಿ ಎಜುಕೇಶನ್ ಫೌಂಡೇಶನ್‌ನ ಚೇರಮನ್
ಹೆಸರು : ಸುರೇಶ ಅಂಗಡಿ

ತಂದೆ : ಚನ್ನಬಸಪ್ಪ ಅಂಗಡಿ

ತಾಯಿ : ಸೋಮವ್ವ

ಜನ್ಮದಿನ : 1 ಜೂನ್, 1955

ಹುಟ್ಟಿದ ಸ್ಥಳ : ಕೆ.ಕೆ. ಕೊಪ್ಪ, ಬೆಳಗಾವಿ ತಾಲೂಕು

ಪತ್ನಿ : ಮಂಗಲಾ,

ಮಕ್ಕಳು : ಇಬ್ಬರು ಪುತ್ರಿಯರು (ಸೂರ್ತಿ ಮತ್ತು ಶ್ರದ್ಧಾ)

ಶಿಕ್ಷಣ : ಬಿಕಾಂ – ಎಲ್‌ಎಲ್‌ಬಿ (ಸ್ಪೆಶಲ್).

ವಿಳಾಸ : ‘ಸ್ಫೂರ್ತಿ’, ಸಂಪಿಗೆ ರಸ್ತೆ, ವಿಶ್ವೇಶ್ವರಯ್ಯ ನಗರ, ಬೆಳಗಾವಿ

1996-99ರವರೆಗೆ ಬಿಜೆಪಿ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ.

2000-2004 ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಕಾರ್ಯಕಾರಿ ಸದಸ್ಯ.

2001-2004: ಬಿಜೆಪಿ ಬೆಳಗಾವಿ ಜಿಲ್ಲಾ ಅಧ್ಯಕ್ಷ.

ಸಂಸತ್ ಪ್ರವೇಶ

2004ರಲ್ಲಿ (ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಂಸತ್ ಪ್ರವೇಶ) ಸಂಸತ್ ಸ್ಥಾಯಿ ಸಮಿತಿ ಸದಸ್ಯ.

2009ರ ಚುನಾವಣೆಯಲ್ಲಿ 15ನೇ ಸಂಸತ್‌ಗೆ 1.15 ಲಕ್ಷ ಮತಗಳ ಅಂತರದಿಂದ ಮರು ಆಯ್ಕೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸದಸ್ಯ ಸಮಿತಿ, ಸಂಸತ್ ಸದಸ್ಯರ ಪಿಂಚಣಿ, ವೇತನ ಮತ್ತು ಭತ್ತೆಗಳ ಕುರಿತು ಸದಸ್ಯ ಜಂಟಿ ಸಮಿತಿ, ಕೇಂದ್ರ ನೇರ ತೆರಿಗೆಗಳ ಸದಸ್ಯರ ಸಲಹಾ ಸಮಿತಿ ಸದಸ್ಯ.

​ರೈಲ್ವೆ ಖಾತೆ ಸಚಿವರಾಗಿ ಅಧಿಕಾರ ಸ್ವೀಕಾರ

2014ರಲ್ಲಿ 75,860 ಮತಗಳ ಅಂತರದಿಂದ ಹ್ಯಾಟ್ರಿಕ್ ಗೆಲುವಿನೊಂದಿಗೆ ಲೋಕಸಭೆ ಪ್ರವೇಶ.

ಲೋಕಸಭೆ ಸದನ ಸಮಿತಿ ಅಧ್ಯಕ್ಷ. ರಕ್ಷಣಾ ಸ್ಥಾಯಿ ಸಮಿತಿ ಸದಸ್ಯ, ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದ ಸಮಾಲೋಚನಾ ಸಮಿತಿ ಸದಸ್ಯ. ಹೊಸದಿಲ್ಲಿಯ ಅರ್ಜಿಗಳ ಸದಸ್ಯ ಸಮಿತಿಯ ಸದಸ್ಯ, ಭಾರತೀಯ ವಿಜ್ಞಾನ ಸಂಸ್ಥೆಯ

ಸದಸ್ಯ.

2019ರಲ್ಲಿ 17ನೇ ಸಂಸತ್‌ಗೆ 3.63 ಲಕ್ಷ ಮತಗಳ ಅಂತರದಿಂದ 4ನೇ ಬಾರಿಗೆ ಸತತ್‌ಗೆ ಆಯ್ಕೆ.

ರೈಲು ಸೇವೆ ಮತ್ತು ಯೋಜನೆಗಳಲ್ಲಿ ಗಣನೀಯ ಸುಧಾರಣೆಗೆ ಕ್ರಮ.

ಆಸಕ್ತಿ: ಬಿಜಿನೆಸ್, ಕೈಗಾರಿಕೆ ಮತ್ತು ಕೃಷಿ ಅಭಿವೃದ್ಧಿ, ಗ್ರಾಮೀಣ ಅಭಿವೃದ್ಧಿ, ಕುಡಿಯುವ ನೀರು, ಮೂಲ ಸೌಕರ್ಯ, ಬಡ ಮಕ್ಕಳ ಶಿಕ್ಷಣ.

ಚಟುವಟಿಕೆ: ಗಾಲ್ಫ್‌. (ಬೆಳಗಾವಿ ಗಾಲ್ ಕೋರ್ಸ್ ಸದಸ್ಯ)

2009ರಿಂದ ಸುರೇಶ ಅಂಗಡಿ ಎಜುಕೇಶನ್ ಫೌಂಡೇಶನ್‌ನ ಚೇರಮನ್

ವಿಜಯ ಕರ್ನಾಟಕದಿಂದ ಕ್ಷಣ ಕ್ಷಣದ ಸುದ್ದಿಗಳನ್ನು ತಿಳಿಯಿರಿ
Like

Follow
Telegram
ಡೌನ್‌ಲೋಡ್‌

Subscribe to Notifications
ಅಂಗಡಿ ನಿಧನದಿಂದ ರಾಜ್ಯದ ಅಭಿವೃದ್ಧಿ ಮಾರ್ಗವೊಂದು ಕಡಿತಗೊಂಡಿದೆ: ಎಚ್ಡಿಕೆ
ಮುಂದಿನ ಲೇಖನ

LEAVE A REPLY

Please enter your comment!
Please enter your name here