ಬಿ ಜೆ ಪಿ ಬಾಣಾವರ ಹೋಬಳಿ ಪಧಾಧಿಕಾರಿಗಳ ಆಯ್ಕೆ,ಗ್ರಾಮ ಮಟ್ಟದಿಂದ ಸಂಘಟಿಸಲು ಕರೆ: ಸಂತೋಷ್

0

ಅರಸೀಕೆರೆ : ತಾಲ್ಲೂಕಿನ ಬಾಣಾವರ ಹೋಬಳಿಯ ಗವಿಮಠದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಹಾಗೂ ಬಾಣಾವರ ಹೋಬಳಿ ಪಧಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಸಂತೋಷ್ ರವರು ಭಾಗವಹಿಸಿ ತಾಲ್ಲೂಕಿನಲ್ಲಿ ಗ್ರಾಮ ಮಟ್ಟದಿಂದ ಪಕ್ಷವನ್ನು ಸಂಘಟಿಸಿ ಈ ಬಾರಿ ಕ್ಷೇತ್ರದಲ್ಲಿ ಬಿ ಜೆ ಪಿ ಶಾಸಕರನ್ನ ಆಯ್ಕೆ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮವಹಿಸಬೇಕಾಗಿದೆ ಎಂದರು
ಈ ಸಮಯದಲ್ಲಿ ಬಾಣಾವರ ಹೋಬಳಿ ಪಧಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಅಧ್ಯಕ್ಷರಾಗಿ ಪಂಡಿತ್ ಬಸವರಾಜು ಪ್ರಧಾನ ಕಾರ್ಯದರ್ಶಿ ಕುರುವಂಕ ಸುನಿಲ್,ರನ್ನು ಆಯ್ಕೆ ಮಾಡಲಾಯಿತು,ಈ ಸಮಯದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ವಿಕ್ರಂ,ತಾಲ್ಲೂಕ್ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಕುರುವಂಕ ರೇಣುಕಪ್ಪ,,ಈ ಪಿ ಎಂ ಸಿ ನಾಮ ನಿರ್ದೇಶಕ ಕೊಳಗುಂದ ಪ್ರಸಾದ್,ಜಿಲ್ಲಾ ಕಾರ್ಯದರ್ಶಿ ಬೆಳಗುಂಬ ಲೋಕೇಶ್ ,ಮಹಿಳಾ ಉಪಾಧ್ಯಕ್ಷ ಅನು ಕುಮಾರ್ ಹಾಜರಿದ್ದರು

ವರದಿ ಷಡಕ್ಷರಿ ನರಸೀಪುರ

LEAVE A REPLY

Please enter your comment!
Please enter your name here