ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಪೊಲೀಸ್ ಠಾಣೆ ಸೀಲ್‍ಡೌನ್ | ಪೊಲೀಸ್ ಠಾಣೆಯ ನೌಕರನಿಗೆ ಕೊರೊನಾ ವೈರಾಣು ದೃಢಪಟ್ಟಿರುವ ಹಿನ್ನಲೆಯಲ್ಲಿ

0

ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಪೊಲೀಸ್ ಠಾಣೆ ಸೀಲ್‍ಡೌನ್ | ಪೊಲೀಸ್ ಠಾಣೆಯ ನೌಕರನಿಗೆ ಕೊರೊನಾ ವೈರಾಣು ದೃಢಪಟ್ಟಿರುವ ಹಿನ್ನಲೆಯಲ್ಲಿ

ಬೀದರ್ ಜಿಲ್ಲೆಯ ಔರಾದ್ ಪಟ್ಟಣದ ಪೊಲೀಸ್ ಠಾಣೆ ಸೀಲ್‍ಡೌನ್…

ಬೀದರ ಜಿಲ್ಲೆಯ ಔರಾದ್ ಪಟ್ಟಣದ  ಪೊಲೀಸ್ ಠಾಣೆಯ ನೌಕರನಿಗೆ ಕೊರೊನಾ ವೈರಾಣು ದೃಢಪಟ್ಟಿರುವ ಹಿನ್ನಲೆ ಬುಧವಾರ ಪೊಲೀಸ್ ಕಛೇರಿಗೆ ಸೀಲ್‍ಡೌನ್ ಮಾಡಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿದೆ.

ಜಿಲ್ಲೆಯಲ್ಲಿ ಸತತ ಮೂರನೇ ಪೊಲೀಸ್ ಠಾಣೆ ಸೀಲ್ ಡೌನ್ ಆಗಿದೆ.

ಔರಾದ್ ಪಟ್ಟಣದಲ್ಲಿ 10 ರಿಂದ 15ರ ತನಕ ನಿತ್ಯವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿಯವರೆವಿಗೆ ಬಡಾವಣೆಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ವೈರಾಣು ಇಂದು ಠಾಣೆಯಲ್ಲಿ ಕಾಲಿಟ್ಟಿರುವುದು ನೌಕರರಲ್ಲಿ ಆತಂಕ ಉಂಟು ಮಾಡಿದೆ.
ಪೊಲೀಸ್ ಠಾಣೆಯ ಕಛೇರಿಯ ಪಿಸಿ ನೌಕರರೊಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ ಹಿನ್ನಲೆ ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಕಛೇರಿಯನ್ನು ಸೀಲ್‍ಡೌನ್ ಮಾಡಿ ರೋಗಾಣು ನಿವಾರಕ ಔಷಧಿ ಸಿಂಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಪೊಲೀಸ್ ಕಾನಿಸ್ಟೆಬಲ್ ಇಬ್ಬರಿಗೂ ಸೋಂಕು ದೃಢಪಟ್ಟಿದೆ ಈ ಹಿನ್ನಲೆ ವಿಭಾಗಕ್ಕೆ ಸೀಲ್‍ಡೌನ್ ಮಾಡಿದ್ದಾರೆ. ಇದರಿಂದಾಗಿ ಪೊಲೀಸ್ ಇಲಾಖೆಯ ಕಾರ್ಯ ವಿಳಂಬಆಗುವ ಸಾಧ್ಯತೆ ಇದೆ.
ಪೊಲೀಸ್ ಠಾಣೆಯ ಪಿಎಸ್ಐ ಜಗದೀಶ್ ನಾಯ್ಕ್ ರವರು ಕಛೇರಿಯ ಎಲ್ಲಾ ಸಿಬ್ಬಂದಿಗಳಿಗೂ ಕೊರೊನಾ ಸೋಂಕು ಹರಡದಂತೆ ಸಾಮಾಜಿಕ ಅಂತರ ಕಾಪಾಡಿ, ಪ್ರತಿಯೊಬ್ಬರು ಮಾಸ್ಕ್ ಧರಿಸುವುದು. ಕಛೇರಿಗೆ ಬರುವ ಮುನ್ನವೇ ಸ್ಯಾನಿಟೈಸರ್ ಹಾಕಿಕೊಂಡು ಕರ್ತವ್ಯಕ್ಕೆ ಹಾಜರಾಗುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ಧಾರೆ.
ಠಾಣೆಯಲ್ಲಿ ಬರುವ ಸಾರ್ವಜನಿಕರು ಸಹ ಕೊರೊನಾ ಹರಡದಂತೆ ಸಾಮಾಜಿಕ ಅಂತರದಲ್ಲಿ ನಿಯಮವನ್ನು ಪಾಲಿಸಬೇಕೆಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here