ಬೃಹತ್‌ ಪ್ರತಿಭಟನೆ

0

ಬೃಹತ್‌ ಪ್ರತಿಭಟನೆ

ಹಾನಗಲ್ : ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನಲ್ಲಿ ಇಂದು 28/09/2020 ರಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಮಸೂದೆ ಯನ್ನು ಖಂಡಿಸಿ, ಹಾನಗಲ್ ನಲ್ಲಿ ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗಿತ್ತು. ಹಾನಗಲ್ ನ ಕುಮಾರೇಶ್ವ ಮಠದಿಂದ ಕನಕ ವೃತ್ತದ ವರೆಗೆ ಕಾಲ ನಡುಗೆಯಿಂದ ಆಗಮಿಸಿ ಇದೆ ವೇಳೆ ಮಸೂದೆ ಯನ್ನು ಕೈ ಬಿಡುವಂತೆ ಒತ್ತಾಯಿಸಿದರು ಹಾನಗಲ್ ನ ಕನಕ ವೃತ್ತದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತರು ಕಾರ್ಮಿಕ ವಿರೋಧ ನೀತಿಯನ್ನು ಖಂಡಿಸಿ ಕರ್ನಾಟಕ ಬಂದಗೆ ಕರೆ ನೀಡಿರು ಹಿನ್ನಲೆಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತಕ್ಷಣವೇ ಎ.ಪಿ.ಎಂ.ಸಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಬಿಡುವಂತೆ ಘೋಷಣೆ ಕೂಗಿದರು

ನಮ್ಮ ಭೂಮಿ ನಮ್ಮ ಹಕ್ಕು ರೈತ ಕಾರ್ಮಿಕ ವಿರೋಧಿ ನೀತಿಯನ್ನು ತಕ್ಷಣವೇ ಕೈ ಬಿಡುವಂತೆ ಆಗ್ರಹಿಸಿ ಘೋಷಣೆ ಕೂಗುತ್ತಾ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತ ಜನ ವಿರೋಧಿ ತೀವ್ರ ಖಂಡನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ. ಇದೆ ಸಂದರ್ಭದಲ್ಲಿ ಅನೇಕ ರೈತ ಮುಖಂಡರು ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ ರವರ ಮೇಲೆ ನೇರವಾಗಿ ವಾಗ್ದಾಳಿ ಮಾಡಿದರು. ರೈತರ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಮಾನ್ಯ ಮುಖ್ಯ ಮಂತ್ರಿಗಳು ಇಂದು ರೈತರ ವಿರೋಧಿಗಳಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು, ಇದೆ ಸಂದರ್ಭದಲ್ಲಿ ತಾಲ್ಲೂಕು ರೈತ ಸಂಘಟನೆಯ ಅಧ್ಯಕ್ಷರಾದ ರುದ್ರಪ್ಪ ಬಳಿಗಾರ, ಗೌರವ ಅಧ್ಯಕ್ಷರಾದ ಜಿಲಾನಸಾಬ್ ನೇಗಳೂರ, ಕಾರ್ಯ ಅಧ್ಯಕ್ಷರು ಚನ್ನಬಸಪ್ಪ ಹಾವಣಗಿ, ಪ್ರಧಾನ ಕಾರ್ಯದರ್ಶಿ ವೀರನಗೌಡ ಮಾಳಗಿ ಸಹ ಕಾರ್ಯದರ್ಶಿ ಜಗದೀಶ್ ಪಾಟೀಲ, ಹಾಗೂ ಯಲ್ಲಪ್ಪ ನಿಂಬಣ್ಣನವರ, ಮಲ್ಲನಗೌಡ ಪಾಟೀಲ ತಾಲೂಕು ರೈತ ಮುಖಂಡರು, ನಾಗರಾಜ ಮಲ್ಲಮ್ಮನವರ, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರು ರಾಮು ಯಳ್ಳುರ, ಸ್ವಾಭಿಮಾನ ಬಳಗ ಹನುಮಂತಪ್ಪ ಕೋಣನ ಕೋಪ ಅಸಂಘಟಿತ ಕಾರ್ಮಿಕರ ಸಂಘಟನೆಯ ಅಧ್ಯಕ್ಷರು ನಿಯಾದ್ ಶೇಖ್, ಜನಹಿತ ಸ್ವಾಭಿಮಾನಿ ಬಳಗ ಸೋಮಶೇಖರ್ ಕೊತಂಬರಿ, ಅಕ್ಕಿಆಲೂರಿ ಹಾಗೂ ಹಾನಗಲ್ ಮೀನುಗಾರಿಕೆ ಸಂಘದವರು ಬಂದಗೆ ಬೆಂಬಲವನ್ನು ಸೂಚಿಸಿದರು

ವರದಿಗಾರರು: ಬಿ.ಎಸ್. ಅಪ್ಪಣ್ಣ

LEAVE A REPLY

Please enter your comment!
Please enter your name here