ಬೆಂಗಳೂರಲ್ಲಿ ಕೊಕೈನ್ ‘ಬಿಸಿನೆಸ್’ ಮಾಡುತ್ತಿದ್ದ ಇಬ್ಬರು ವಿದೇಶಿಯರ ಬಂಧನ

0

ಮಾದಕವಸ್ತು ಕೊಕೈನ್‍ನ್ನು ಮನೆಯಲ್ಲಿ ಸಂಗ್ರಹಿಸಿಕೊಂಡು ತನ್ನದೇ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ನೈಜೀರಿಯಾ ಮೂಲದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಸಿದ್ದಾರೆ.

ಕ್ರಿಸ್ಟೈನ್ ಓಜೋಮೆನ ಚಿಮಿರಾಯ್(20), ಒಕೊನೊವೊ ಬೆಂಜಿಮಿನ್(30) ಬಂತ ನೈಜೀರಿಯಾ ಪ್ರಜೆಗಳಾಗಿದ್ದು, ಮೂರು ಲಕ್ಷ ರೂ. ಮೌಲ್ಯದ 14.5 ಗ್ರಾಂ ಕೊಕೈನ್, ಎರಡು ಬೈಕ್, ಮೂರು ಮೊಬೈಲ್ ಮತ್ತು ಒಂದು ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.

ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಯಲಹಂಕ ಹೋಬಳಿ, ಅಗ್ರಹಾರ ಲೇಔಟ್, ತಿರುಮೇನಹಳ್ಳಿ ಮುಖ್ಯರಸ್ತೆ, ಗೋಕುಲಂ ಅಪಾರ್ಟ್‍ಮೆಂಟ್ ಎದುರು ರಸ್ತೆಯಲ್ಲಿನ ಮನೆಯೊಂದನ್ನು ಬಾಡಿಗೆ ಪಡೆದು ನೈಜರೀಯಾ ಪ್ರಜೆಗಳು ಮಾದಕವಸ್ತು ಕೊಕೈನ್‍ನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿ ದ್ದಾರೆ ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.

ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮನೆ ಮೇಲೆ ದಾಳಿ ಮಾಡಿ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಬಿಸ್ನೆಸ್ ವೀಸಾದಲ್ಲಿ ಭಾರತಕ್ಕೆ ಬಂದು ಬೆಂಗಳೂರಿನ ಸಂಪಿಗೆಹಳ್ಳಿ ವ್ಯಾಪ್ತಿಯಲ್ಲಿ ವಾಸ್ತವ್ಯಹೂಡಿ ನೈಜೀರಿಯಾದಿಂದ ಕೊಕೈನ್‍ನ್ನು ಖರೀದಿ ಮಾಡಿ ತಮ್ಮದೇ ಆದ ವ್ಯವಸ್ಥಿತ ಜಾಲವನ್ನು ಸಂಘಟಿಸಿಕೊಂಡು ಪರಿಚಿತ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಈ ಕಾರ್ಯಾಚರಣೆಯನ್ನು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪಪೊಲೀಸ್ ಆಯುಕ್ತ ಕುಲದೀಪ್‍ಕುಮಾರ್ ಜೈನ್, ಸಹಾಯಕ ಪೊಲೀಸ್ ಆಯುಕ್ತ ಗೌತಮ್ ಅವರ ಮುಂದಾಳತ್ವದಲ್ಲಿ ಇನ್‍ಸ್ಪೆಕ್ಟರ್‍ಗಳಾದ ಲಕ್ಷ್ಮಿಕಾಂತಯ್ಯ, ಹಜರೇಶ್ ಕಿಲ್ಲೇದಾರ್ ಹಾಗೂ ಸಿಬ್ಬಂದಿ ತಂಡ ಯಶಸ್ವಿಗೊಳಿಸಿದೆ.

LEAVE A REPLY

Please enter your comment!
Please enter your name here