ಬೆಂಗಳೂರಲ್ಲಿ ಫೈರಿಂಗ್, ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಯತ್ನ..!

0

ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮೇಲೆ ಗುಂಡು ಹಾರಿಸಿ, ಲಾಂಗ್‍ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಘಟನೆ ರಾತ್ರಿ ಕೆ.ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಿನ್ನಸಂದ್ರದ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಬಾಬು ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು, ಪ್ರಾಣಾ ಪಾಯದಿಂದ ಪಾರಾಗಿದ್ದಾರೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಈ ಸಂಜೆಗೆ ತಿಳಿಸಿದ್ದಾರೆ.

ದುಷ್ಕರ್ಮಿಗಳು ಗುಂಡು ಹಾರಿಸಿದ್ದರಿಂದ ಬಾಬು ಅವರ ಕೈಗೆ ಹಾಗೂ ಲಾಂಗ್‍ನಿಂದ ಹಲ್ಲೆ ಮಾಡಿರುವುದರಿಂದ ಅವರ ತಲೆಗೆ ಗಾಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಕೆ.ಆರ್.ಪುರದ ದರ್ಗಾ ಸಮೀಪ ಬಾಬು ಅವರ ರಿಯಲ್ ಎಸ್ಟೇಟ್ ಕಛೇರಿಯಿದೆ. ಅದರ ಎದುರುಗಡೆ ಸಮೋಸ ಅಂಗಡಿ ಇತ್ತು. ಪ್ರತಿ ದಿನ ಸಂಜೆ ವೇಳೆ ಬೈಕ್‍ನಲ್ಲಿ ಹುಡುಗರು ಬಂದು ಗಾಡಿಗಳನ್ನು ಅಡಾದಿಡ್ಡಿ ನಿಲ್ಲಿಸಿ ಸಮೋಸ ತಿನ್ನುತ್ತಿದ್ದರು. ಇದರಿಂದ ಬಾಬು ಅವರಿಗೆ ತಮ್ಮ ಕಾರು ನಿಲ್ಲಿಸಲು ತೊಂದರೆ ಯಾಗುತ್ತಿತ್ತು.

ಪ್ರತಿದಿನ ಇದೇ ರೀತಿ ಗಾಡಿಗಳು ನಿಲ್ಲುತ್ತಿದ್ದರಿಂದ ಬಾಬು ಅವರು, ಏಕೆ ಹೀಗೆ ಅಡ್ಡಾದಿಡ್ಡಿ ಗಾಡಿ ನಿಲ್ಲಿಸುತ್ತೀರಾ..ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಜೋರಾಗಿ ಹೇಳಿದ್ದಾರೆ. ಆಗ ಹುಡುಗರಿಗೂ ಇವರಿಗೂ ಮಾತಿನ ಚಕಮಕಿ ನಡೆದು ಪೊಲೀಸ್ ಠಾಣೆಗೆ ಹೋಗಿದ್ದರು.

ಪೊಲೀಸರು ಇಬ್ಬರಿಗೂ ಬುದ್ದಿ ಹೇಳಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದಾದ ನಂತರ ಸಮೋಸಾ ಅಂಗಡಿ ಕಟ್ಟಡದ ಮಾಲೀಕರು ಸಮೋಸಾ ಅಂಗಡಿಯನ್ನೆ ತೆರವು ಮಾಡಿಸಿದ್ದರು.

ನಿನ್ನೆ ರಾತ್ರಿ ಸುಮಾರು 9.30ರ ಸಮಯದಲ್ಲಿ ಬಾಬು ಅವರು ತಮ್ಮ ಸ್ನೇಹಿತನೊಂದಿಗೆ ಕಛೇರಿಯಲ್ಲಿ ಮಾತನಾಡುತ್ತಾ ಕುಳಿತಿದ್ದರು, ಆ ಸಂದರ್ಭದಲ್ಲಿ ಬೈಕ್‍ನಲ್ಲಿ ಬಂದ ಹೆಲ್ಮೆಟ್ ಧರಿಸಿದ್ದ ಇಬ್ಬರು, ಸಿನಿಮೀಯ ರೀತಿಯಲ್ಲಿ ಅವರ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ. ಒಂದು ಗುಂಡು ಮಿಸ್ಸಾಗಿದೆ. ಮತ್ತೊಂದು ಗುಂಡು ಬಾಬು ಅವರ ಕೈಗೆ ತಾಗಿದೆ.

ತಕ್ಷಣ ಬಾಬು ಅವರ ಸ್ನೇಹಿತ ಹೊರಗಡೆ ಓಡಿದ್ದಾರೆ, ಬಾಬು ಸಹ ಓಡಲು ಮುಂದಾದಾಗ ಆರೋಪಿಗಳು ಲಾಂಗ್‍ನಿಂದ ಹಲ್ಲೆ ಮಾಡಿ ಬಂದಿದ್ದ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಹಲ್ಲೆಯಿಂದ ಅವರ ಅವರ ತಲೆಗೆ ಗಾಯವಾಗಿದೆ. ಕೂಗಾಟ ಕೇಳಿ ಬಂದ ಸ್ಥಳೀಯರು ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ.

ಕೆಆರ್ ಪುರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ,ಬಾಬು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಸ್ತೆಯಲ್ಲಿರುವ ಸಿಸಿ ಟಿವಿಗಳ ಪುಟೇಜ್‍ಗಳನ್ನು ಪಡೆದಿರುವ ಕೆಆರ್‍ಪುರ ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಆರೋಪಿಗಳ ಸುಳಿವು ಸಿಕ್ಕಿದ್ದು, ಶೀಘ್ರವೇ ಬಂಸುವುದಾಗಿ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here