ಬೆಂಗಳೂರಿನಲ್ಲೇ ಮುಂದಿನ ‘ಏರೋ ಇಂಡಿಯಾ 2021’ ದಿನಾಂಕ ಪ್ರಕಟ

0

ಮುಂದಿನ ‘ಏರೋ ಇಂಡಿಯಾ 2021’ ಬೆಂಗಳೂರಿನಲ್ಲೇ ನಡೆಯಲಿದ್ದು, ದಿನಾಂಕ ಕೂಡ ಪ್ರಕಟವಾಗಿದೆ.

ಏರೋ ಇಂಡಿಯಾ ಮುಂದಿನ ಆವೃತ್ತಿಯ ಸಂಬಂಧ ರಕ್ಷಣಾ ಸಚಿವಾಲಯವು ನಿರ್ಧಾರವನ್ನು ತೆಗೆದುಕೊಂಡಿದ್ದು ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಏರೋ ಇಂಡಿಯಾ ತನ್ನ ಪಾರಂಪರಿಕ ತಾಣವಾಗಿರುವ ಬೆಂಗಳೂರಿನಲ್ಲಿ 2021ರ ಫೆಬ್ರವರಿ 3ರಿಂದ 5ರನಡುವೆ ನಡೆಯಲಿದೆ ಎಂದು ಅಧಿಕೃತ ಮೂಲಗಳು ಹೇಳಿದೆ.

ಬೃಹತ್ ಕಾರ್ಯಕ್ರಮವನ್ನು ಆಯೋಜಿಸುವ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಹಲವಾರು ಆಂತರಿಕ ಸಭೆಗಳನ್ನು ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಗರಿಷ್ಠ ಮುನ್ನೆಚ್ಚರಿಕೆ ವಹಿಸುವುದರೊಡನೆ ಕಾರ್ಯಕ್ರಮವನ್ನು ಆಯೋಜಿಸುವುದಾಗಿ ನಿರ್ಧರಿಸಲಾಗಿದೆ.

ಹಲವಾರು ದೇಶಗಳ ಅಧಿಕೃತ ನಿಯೋಗಗಳಲ್ಲದೆ ಗಮನಾರ್ಹ ಸಂಖ್ಯೆಯ ಜಾಗತಿಕ ರಕ್ಷಣಾ ಉತ್ಪಾದಕ ಸಂಸ್ಥೆಗಳು ದೊಡ್ಡ ಹೂಡಿಕೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ದೇಶೀಯ ರಕ್ಷಣಾ ಉದ್ಯಮ ಮತ್ತು ಜಾಗತಿಕ ವೈಮಾನಿಕ ಸಂಸ್ಥೆಗಳ ಒತ್ತಾಸೆಯ ಮೇರೆಗೆ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ವೈಮಾನಿಕ ಪ್ರದರ್ಶನ ನಡೆಸಲು ಸಚಿವಾಲಯ ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ವಿವರಿಸಿದೆ.

1996 ರಲ್ಲಿ ಮೊದಲ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಪ್ರಾರಂಭವಾದಾಗಿನಿಂದ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

LEAVE A REPLY

Please enter your comment!
Please enter your name here