ಬೆಂಗಳೂರಿನ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಗಲಭೆಗೆ ಕಾರಣರಾದವರನ್ನು ಬಂಧಿಸಬೇಕು. ಇಲ್ಲವಾದರೆ, ಬಿಜೆಪಿಯವರ ಮನೆಗೆ ಬೆಂಕಿ ಬೀಳುತ್ತದೆ ಎಂದು ಶ್ರೀರಾಮನ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಕಾಂಗ್ರೆಸ್ ನವರು ಮುಸ್ಲಿಂರನ್ನು ತಲೆಯ ಮೇಲೆ ಕೂಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೈಬರ್ ಕ್ರೈಂಗೆ ದೂರನ್ನು ಕೊಡಬಹುದಿತ್ತು. ಶಾಸಕರ ಮನೆ ಹಾಗೂ ಠಾಣೆಯನ್ನು ಸುಡುತ್ತಾರಲ್ಲ, ಅವರಿಗೆ ದೇಶದ ಸಂವಿಧಾನ ಬೇಕಾಗಿಲ್ಲ. ಇದು ತಾಲಿಬಾನಾ ಅಥವಾ ಪಾಕಿಸ್ತಾನನಾ ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಮುಂದೆ ನಿಮ್ಮ ಮನೆಗೆ ಕೂಡಾ ಬೆಂಕಿ ಬೀಳುತ್ತದೆ ಎಂದು ಎಚ್ಚರಿಸಿದ್ದಾರೆ. ಇದರ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡ ಇದೆ. ಈ ಹಿಂದೆ ನಮ್ಮ ದೇವರನ್ನು ಅವಹೇಳನ ಮಾಡಿದ್ದಾರೆ. ನಾವು ಅದನ್ನೇ ಮಾಡಬಹುದಲ್ಲ. ಸರ್ಕಾರ ಇವರನ್ನು ಒದ್ದು ಒಳಗೆ ಹಾಕಬೇಕು. ಹೊರಗೆ ಬರದಂತೆ ಮಾಡಬೇಕು ಎಂದು ಹೇಳಿದ್ದಾರೆ.

0

ಬೆಂಗಳೂರಿನ ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಗಲಭೆಗೆ ಕಾರಣರಾದವರನ್ನು ಬಂಧಿಸಬೇಕು. ಇಲ್ಲವಾದರೆ, ಬಿಜೆಪಿಯವರ ಮನೆಗೆ ಬೆಂಕಿ ಬೀಳುತ್ತದೆ ಎಂದು ಶ್ರೀರಾಮನ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ನಗರದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಕಾಂಗ್ರೆಸ್ ನವರು ಮುಸ್ಲಿಂರನ್ನು ತಲೆಯ ಮೇಲೆ ಕೂಡಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೈಬರ್ ಕ್ರೈಂಗೆ ದೂರನ್ನು ಕೊಡಬಹುದಿತ್ತು. ಶಾಸಕರ ಮನೆ ಹಾಗೂ ಠಾಣೆಯನ್ನು ಸುಡುತ್ತಾರಲ್ಲ, ಅವರಿಗೆ ದೇಶದ ಸಂವಿಧಾನ ಬೇಕಾಗಿಲ್ಲ. ಇದು ತಾಲಿಬಾನಾ ಅಥವಾ ಪಾಕಿಸ್ತಾನನಾ ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ ಮುಂದೆ ನಿಮ್ಮ ಮನೆಗೆ ಕೂಡಾ ಬೆಂಕಿ ಬೀಳುತ್ತದೆ ಎಂದು ಎಚ್ಚರಿಸಿದ್ದಾರೆ.

ಇದರ ಹಿಂದೆ ದೊಡ್ಡ ವ್ಯಕ್ತಿಗಳ ಕೈವಾಡ ಇದೆ. ಈ ಹಿಂದೆ ನಮ್ಮ ದೇವರನ್ನು ಅವಹೇಳನ ಮಾಡಿದ್ದಾರೆ. ನಾವು ಅದನ್ನೇ ಮಾಡಬಹುದಲ್ಲ. ಸರ್ಕಾರ ಇವರನ್ನು ಒದ್ದು ಒಳಗೆ ಹಾಕಬೇಕು. ಹೊರಗೆ ಬರದಂತೆ ಮಾಡಬೇಕು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here