ಬೆಂಗಳೂರು ನಗರ ಪೊಲೀಸ್ ಆಯುಕ್ತಕ ಶ್ರೀ ಭಾಸ್ಕರ್ ರಾವ್.ರವರಿಗೆ ಗೌರವ ವಂದನೆ ಸಲ್ಲಿಸಿದ ಹೈ ಕೋರ್ಟ್ ವಕೀಲ ಮೋಹನ್ ಕುಮಾರ್ ದಾನಪ್ಪ!

0

ಅಧಿಕಾರ ಶಾಶ್ವತ ಅಲ್ಲ, ಅಧಿಕಾರದ ಅವಧಿಯಲ್ಲಿ ಸಲ್ಲಿಸಿದ ಸೇವೆ ಜನಪರ ಕೆಲಸಗಳು ಎಂದಿಗೂ ಶಾಶ್ವತವಾಗಿ ಉಳಿಯುವಂಥದ್ದು, ಕಳೆದ ವರ್ಷ ಆಗಸ್ಟ್ 2 ರಂದು ಬೆಂಗಳೂರು ನಗರ ಆಯುಕ್ತರಾಗಿ ನೇಮಕಗೊಂಡು ಇಂದಿಗೆ ಒಂದು ವರ್ಷ, ಒಂದು ವರ್ಷ ಪೂರ್ತಿಯಾಗುವ ಒಂದು ದಿನದ ಮುಂಚೆ ವರ್ಗಾವಣೆಗೊಂಡ ನಾಡು ಮೆಚ್ಚಿದ, ಕೆಳ ಸಿಬ್ಬಂದಿಗಳ ಆರಾಧ್ಯ ದೈವ, ಸಮ ದರ್ಜೆಯ ಅಧಿಕಾರಿಗಳ ಆಪ್ತಮಿತ್ರ, ಅಧಿಕಾರದಲ್ಲಿ ದಕ್ಷತೆ, ಆಡಳಿತದಲ್ಲಿ ಪ್ರಾಮಾಣಿಕತೆ, ಇಲಾಖೆಗೆ ಸರ್ಕಾರಕ್ಕೆ ನಿಷ್ಠೆಯ ಅಧಿಕಾರಿ, ಕಳೆದ ಒಂದು ವರ್ಷದ ಅವಧಿಯಲ್ಲಿ ಬೆಂಗಳೂರು ಮಹಾ ನಗರದ ಒಂದೂವರೆ ಕೋಟಿ ಜನಸಂಖ್ಯೆಯ ರಕ್ಷಣೆಯ ಹೊಣೆಹೊತ್ತು ಅನೇಕ ಸವಾಲಿನ ಕೆಲಸಗಳು ಡಿಕೆ ಶಿವಕುಮಾರ್ ಅವರ ಬಂಧನ ವಿರುದ್ಧ ಬೆಂಗಳೂರಿನಲ್ಲಿ ಹಮ್ಮಿಕೊಂಡ ಪ್ರತಿಭಟನೆ, ರಾಜ್ಯಾದ್ಯಂತ ಸದ್ದು ಮಾಡಿದ ಐ ಎಂ ಎ ಹಗರಣ, ಅಯೋಧ್ಯೆ ತೀರ್ಪು, ಸಿ ಎ ಎ ವಿರೋಧಿಸಿ ನಡೆದ ಪ್ರತಿಭಟನೆ ಇಂಥಹ ಅನೇಕ ಪ್ರತಿಭಟನೆಗಳ ನಡುವೆ ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಸುರಕ್ಷಾ ಆಪ್ ಪರಿಚಯಿಸಿದರು, ಅಕ್ರಮ ಬಾಂಗ್ಲಾ ವಲಸಿಗರನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದದ್ದು ಸೈಬರ್ ಕ್ರೈಂ ಬಗ್ಗೆ ಜಾಗೃತಿ ಮೂಡಿಸಿದ್ದರೊಂದಿಗೆ ಸೈಬರ್ ಕ್ರೈಂ ವಿರುದ್ಧ ಕೈಗೊಂಡ ಕ್ರಮಗಳು ಇಂತಹ ನೂರಾರು ಕಾರ್ಯಕ್ರಮಗಳು, ಪ್ರತಿಭಟನೆಗಳ ನಡುವೆ ರಾಜ್ಯಕ್ಕೆ ಬೆಂಗಳೂರಿಗೆ ಆವರಿಸಿಕೊಂಡ ಮಹಾಮಾರಿ ಕೊರೋನಾ ವೈರಸ್ ನಿಯಂತ್ರಣಕ್ಕಾಗಿ ಲಾಕ್ ಡೌನ್ ಏರಿದ ಸಂಧರ್ಭದಲ್ಲಿ ಬೆಂಗಳೂರಿನ ಜನರ ಹಾಗೂ ಸಿಬ್ಬಂದಿಗಳ ರಕ್ಷಣೆಗೆ ಕೈಗೊಂಡ ಕಾರ್ಯಗಳು ನಿಭಾಯಿಸಿದ ರೀತಿ, ಸುಳ್ಳು ಆರೋಪ ಬಂದಾಗ ಯೋಚಿಸಿದೆ ರಾಜೀನಾಮೆಗೆ ಮುಂದಾಗಿದ್ದು ರಾಜ್ಯದ ಮತ್ತು ಬೆಂಗಳೂರಿನ ಜನತೆಯ ಹೃದಯದಲ್ಲಿ ಹಚ್ಚ ಹಸಿರಾಗಿ ಉಳಿದ ರಾಜ್ಯದ ಹೆಮ್ಮೆಯ ಅಧಿಕಾರಿ ಗೌರವಾನ್ವಿತ ಸನ್ಮಾನ್ಯ ಶ್ರೀ ಭಾಸ್ಕರ್ ರಾವ್. ಐಪಿಎಸ್ ರವರು, ಸರ್ಕಾರದ ಆದೇಶದಂತೆ ಆಗಸ್ಟ್ 1.2020 ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ನಿರ್ಗಮಿಸಿ ರಾಜ್ಯದ ಆಂತರಿಕ ಭದ್ರತೆಯ ಜವಾಬ್ದಾರಿ ಹೊತ್ತಿರುವ ಇವರಿಗೆ ಬೆಂಗಳೂರಿನ ಮತ್ತು ರಾಜ್ಯದ ಜನತೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಹೃದಯ ಪೂರ್ವಕ ಗೌರವ ವಂದನೆಗಳು!

– ಮೋಹನ್ ಕುಮಾರ್ ದಾನಪ್ಪ
ಡಾ. ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಹಾಗೂ ಹೈ ಕೋರ್ಟ್ ವಕೀಲರು, ಬೆಂಗಳೂರು

LEAVE A REPLY

Please enter your comment!
Please enter your name here