ಬೆಂಗಳೂರು -ಮೈಸೂರು ಎಕ್ಸಪ್ರೆಸ್ ಹೆದ್ದಾರಿಗೆ ಬಂಕ್ ಮಾಲೀಕರ ಅಡ್ಡಿ ಮತ್ತಷ್ಟು ವಿಳಂಬ

0

ಸುಮಾರು 117.3 ಕಿಲೋಮೀಟರ್ ದೂರದ ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಕಾಮಗಾರಿ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ. ವಾಹನಗಳು 100 ಕಿ.ಮೀ ವೇಗದಲ್ಲಿ ಚಲಿಸಲು ಅನುಕೂಲವಾಗುವ ಕಾಮಗಾರಿ ಇದಾಗಿದೆ.

ಎಕ್ಸ್ ಪ್ರೆಸ್ ಹೆದ್ದಾರಿ ಕಾಮಗಾರಿಗಾಗಿ ಭೂ ಸ್ವಾದೀನ ಮತ್ತು ಮಾರ್ಗದಲ್ಲಿ ಟೋಲ್ ಪ್ಲಾಜಾ ನಿರ್ಮಿಸಲು ಅಡ್ಡಿ ಎದುರಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ನ ಪೆಟ್ರೋಲ್ ಬಂಕ್ ನ ಡೀಲರ್ ಮತ್ತು ಎಜೆನ್ಸಿಗಳು ಜಾಗ ಬಿಟ್ಟು ಕೊಡಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹೀಗಿರುವ ಚತುಷ್ಪಥ ಹೆದ್ದಾರಿಯಲ್ಲಿ ಎರಡು ಸರ್ವೀಸ್ ಲೇನ್ ಸೇರಿದಂತೆ ಒಟ್ಟು 10 ಲೇನ್ ರಸ್ತೆಗಳನ್ನಾಗಿ ಮಾರ್ಪಡಿಸಲು ಇ-ಟೆಂಡರ್ ನೀಡಲಾಗಿದೆ. ಕೋವಿಡ್ ರೋಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸದ್ಯ ಯೋಜನೆಯ ಅವಧಿಯನ್ನು ವಿಸ್ತರಿಸಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೊದಲ ಹಂತದ ಕಾಮಗಾರಿಯನ್ನು ನವೆಂಬರ್ 2021 ರಿಂದ ಫೆಬ್ರವರಿ 2022ರ ವರೆಗೆ ಪೂರ್ಣಗೊಳಿಸಲು ಸಮಯ ನಿಗದಿ ಮಾಡಿತ್ತು, ಸದ್ಯ ಸೆಪ್ಟಂಬರ್ 22 ರವರೆಗೆ ಅವಧಿ ವಿಸ್ತರಿಸಿದೆ. ಸುಮಾರು 8 ಸಾವಿರ ಕೋಟಿ ರೂಪಾಯಿಗಳ ವೆಚ್ಚದ ಕಾಮಗಾರಿ ಭೂ ಸ್ವಾಧೀನ ಪ್ರಕ್ರಿಯೆ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ.

ಪೆಟ್ರೋಲ್ ಪಂಪ್ ಔಟ್‌ಲೆಟ್‌ಗಳಿಗೆ ಸಂಬಂಧಿಸಿದ ವಿಚಾರವು ನಿರ್ಣಾಯಕವಾಗಿದೆ. ಏಕೆಂದರೆ ಅವುಗಳು ಎರಡು ಪ್ಲಾಜಾಗಳ ಮುಂದೆ ಇರುವುದರಿಂದ ಹೆದ್ದಾರಿ ಕಾರ್ಯಾಚರಣೆ
ಪ್ರಾರಂಭಿಸಿದಾಗ ಅಲ್ಲಿ ಆದಾಯವನ್ನು ಸಂಗ್ರಹಿಸುವ ಟೋಲ್ ಪ್ಲಾಜಾ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.

ಒಂದು ಪೆಟ್ರೋಲ್ ಬಂಕ್ ಕಣಿಮಿಣಿಕೆ ಮತ್ತೊಂದು ಮಂಡ್ಯದಲ್ಲಿದೆ. ಎರಡು ಬಂಕ್ ಗಳನ್ನು ಬೇರೆಡೆ ವರ್ಗಾಯಿಸಿ 50 ಕೋಟಿ ರು ಪರಿಹಾರ ಘೋಷಿಸಿದ್ದರೂ ಪೆಟ್ರೋಲ್ ಬಂಕ್ ಅದನ್ನು ನಿರಾಕರಿಸಿದೆ. ಹೀಗಾಗಿ ಕೆಲಸ ಆರಂಭಿಸಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಒಂದು ಅಥವಾ ಎರಡು ತಿಂಗಳಲ್ಲಿ ಅವರನ್ನು ಖಾಲಿ ಮಾಡಿಸುವ ಭರವಸೆ ಇದೆ ಎಂದಿದ್ದಾರೆ.

ಪ್ರವೇಶ ಮತ್ತು ಮುಕ್ತಾಯ ಪಾಯಿಂಟ್ ಗಳು ಬೈಪಾಸ್ ನಲ್ಲಿದ್ದು, ಬಿಡದಿ, ರಾಮನಗರ, ಚನ್ನಪಟ್ಟಣ,ಮದ್ದೂರು, ಮಂಡ್ಯಗಳಲ್ಲಿ ನಿರ್ಮಾಣವಾದರೇ ಉತ್ತಮವಾಗಿರುತ್ತದೆ, ರಾಮನಗರದಿಂದ ಎಕ್ಸ್ ಪ್ರೆಸ್ ಹೆದ್ದಾರಿಗೆ ತಲುಪಲು 7 ಕಿಮೀ ಆಗುತ್ತದೆ. ಮೊದಲ ಹಂತದಲ್ಲಿ ಶೇ.52.5 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

LEAVE A REPLY

Please enter your comment!
Please enter your name here