ಬೆಳಗಾವಿ ಜಿಲ್ಲೆ ಅಥಣಿ ತಾಲೂಕು :ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ .

0

ನಮ್ಮ ಕರ್ನಾಟಕದಲ್ಲಿ ಗಡಿ ಜಿಲ್ಲೆ ಯಂದೆ ಪ್ರಸಿದ್ದಿ ಪಡೆದಿರುವ ಬೆಳಗಾವಿ ಕೆಚ್ಚೆದೆಯ ಕನ್ನಡಿಗರು ತಾಣವೇ ಸರಿ

ಇತೀಚೆಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗಡಿ ಗ್ರಾಮವಾದ ಬಳ್ಳಿಗೇರಿ ಯಲ್ಲಿ ಬಸವೇಶ್ವರ ಸಕ್ಕರೆ ಕಾರ್ಖಾನೆ ಭೂಮಿ ಪುಜೆ ಕಾರ್ಯಕ್ರಮ ನೆರವೇರಿತ್ತು ಆ ಕಾರ್ಯಕ್ರಮದ ಸ್ಟೇಜ್ ಮೇಲೆ ಮರಾಠಿ ಬ್ಯಾನರ್ ಹಾಕಲಾಗಿತ್ತು .

ಈಗ ಸಮಸ್ಯೆ ಬಂದಿರುವದು ಇಲ್ಲೇ ಆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿ ಯಾಗಿ ಅದೇ ಮತಕ್ಷೇತ್ರದ ಶಾಸಕರು,ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ್ ಅದೇ ಸ್ಟೇಜ್ ಮೇಲೆ ಭಾಷಣ ಮಾಡಿದ್ದು.ಕನ್ನಡಪರ ಸಂಘಟನೆ ಗಳ ಕೆಂಗಣ್ಣಿಗೆ ಗುರಿಯಾಗಿದೆ

ಇಂದು ಜಯಕರ್ನಾಟಕ ಸಂಘಟನೆಯ ಅಥಣಿ ತಾಲೂಕಾ ಘಟಕದ ವತಿಯಿಂದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು

ಪ್ರತಿಭಟನಾಕಾರರು ಸಚಿವ ಶ್ರೀಮಂತ ಪಾಟೀಲ ವಿರುದ್ಧ ಘೋಷಣೆ ಕೂಗಿ ಕನ್ನಡ ಭಾಷೆಗೆ ಅಪಮಾನ ಮಾಡಿರುವ ಸಚಿವರ ಅವಶ್ಯಕತೆ ನಮಗೆ ಇಲ್ಲಾ ಕೂಡಲೇ ಅವರನ್ನ ಸಚಿವ ಸ್ಥಾನದಿಂದ ಕೈ ಬಿಡಬೇಕು ಯಂದು ರಾಜ್ಯ ಪಾಲರಿಗೆ ಮನವಿ ಪತ್ರದ ಮುಕಾಂತರ ಮನವಿ ಮಾಡಿದ್ದಾರೆ

ಇಲ್ಲ ವಾದಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಉಗ್ರ ಹೋರಾಟ ಮಾಡುವದಾಗಿ ಮಾಧ್ಯಮ ಕ್ಕೆ ತಿಳಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಪ್ರಹ್ಲಾದ್ ವಾಗ್ಮೋರೆ .
ತಾಲ್ಲೂಕು ಅಧ್ಯಕ್ಷರು ಸುನೀಲ್ ನಾಯಕ್ .
ತಾಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷರು ವಿಜಯಕುಮಾರ್ ಪವಾರ್
ತಾಲ್ಲೂಕು ಯುವ ಘಟಕದ ಅಧ್ಯಕ್ಷರು ಚೌಧರಿ
ಜಾಫರ್ ಬಿರಾದಾರ್. ಆಕಾಶ್ ನಂದಗಾಂವ್.ಇನ್ನುಳಿದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು

ಪ್ರತಿಭಟನೆಆಗಸ್ಟ್ ಒಂದರಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದಲ್ಲಿ, ಮಹಾರಾಷ್ಟ್ರ ಕೃಷಿ ಸಚಿವ ವಿಶ್ವಜೀತ ಕದಮ್ ಒಡೆತನದ ಬಸವೇಶ್ವರ ಸಕ್ಕರೆ ಕಾರ್ಖಾನೆ ಭೂಮಿ ಪೂಜೆ ವೇಳೆ ಕಾಗವಾಡ ಶಾಸಕ ಹಾಗೂ ಜವಳಿ ಖಾತೆ ಸಚಿವ ಶ್ರೀಮಂತ ಪಾಟೀಲ ಮರಾಠಿಯಲ್ಲಿ ಭಾಷಣ ಮಾಡಿ ಕನ್ನಡ ಕಡೆಗಣಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.ನಾಡದ್ರೋಹಿ ಶ್ರೀಮಂತ ಪಾಟೀಲರನ್ನು ಶಾಸಕ ಮತ್ತು ಸಚಿವಸ್ಥಾನದಿಂದ ಕೈಬಿಡಬೇಕು ಹಾಗೂ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಅಥಣಿ ಉಪ ತಹಶೀಲ್ದಾರ್ ಎಮ್ ವಿ ಬಿರಾದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಮರಾಠಿ ಭಾಷಾ ಪ್ರೇಮ ಮೆರೆದು ಮಹಾರಾಷ್ಟ್ರ ಸಚೀವರನ್ನು ಓಲೈಸಲು ಮರಾಠಿ ಭಾಷಣ ಮಾಡಿದ ಶ್ರೀಮಂತ ಪಾಟೀಲ ವಿರುದ್ದ ಅಥಣಿ ಮತ್ತು ಕಾಗವಾಡ ಮತಕ್ಷೇತ್ರದಲ್ಲಿ ಕನ್ನಡಿಗರ ಆಕ್ರೋಶ ಮುಂದುವರೆದಿದೆ.ಹಲವು ಕನ್ನಡಪರ ಸಂಘಟನೆಗಳು ಶ್ರೀಮಂತ ಪಾಟೀಲ ನಡೆಯನ್ನು ಖಂಡಿಸಿ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಯಕರ್ನಾಟಕ ಸಂಘಟನೆಯಿಂದ ಸಚೀವ ಶ್ರೀಮಂತ ಪಾಟೀಲ ವಿರುದ್ದ ಪ್ರತಿಭಟನೆ ನಡೆಸಲಾಯಿತು.

LEAVE A REPLY

Please enter your comment!
Please enter your name here