ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಮೊಳವಾಡ ಹಾಗೂ ಕುಸನಾಳ ನೂತನ ಗ್ರಾಮ ಪಂಚಾಯತ್ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಮಂತ ಪಾಟೀಲ ಅವರು ಉದ್ಘಾಟಿಸಿದರು

0

ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಮೊಳವಾಡ ಹಾಗೂ ಕುಸನಾಳ ನೂತನ ಗ್ರಾಮ ಪಂಚಾಯತ್ ಉದ್ಘಾಟನೆಯನ್ನು ಕರ್ನಾಟಕ ಸರ್ಕಾರದ ಜವಳಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಮಂತ ಪಾಟೀಲ ಅವರು ಉದ್ಘಾಟಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಕುಸನಾಳ ಹಾಗೂ ಮೊಳವಾಡ ಗ್ರಾಮದಲ್ಲಿ ಈ ಗ್ರಾಮದಲ್ಲಿ ಪಂಚಾಯತ್ ಕಾರ್ಯಾಲಯವು ಅತ್ಯಂತ ವ್ಯವಸ್ಥಿತವಾದ ಕಟ್ಟಡ ಸುಂದರವಾಗಿದೆ ಮತ್ತು ಎಂತಹ ಒಂದು ಪಂಚಾಯತ್ ಕಾರ್ಯಾಲಯವು ನನ್ನ ಕ್ಷೇತ್ರದಲ್ಲಿ ಇದ್ದು ಈ ಪಂಚಾಯತ್ ಎಲ್ಲ ಪಿಡಿಓ .ಗ್ರಾಮ್ ಪಂಚಾಯತ್ ಅಧ್ಯಕ್ಷರು ಎಲ್ಲ ಸದ್ಯಸರಿಗೆ ಅಭಿನಂದನೆ ಸಲ್ಲಿಸಿದರು.

ಕಾಗವಾಡ ಕ್ಷೇತ್ರದಲ್ಲಿ ನೂತನ ಶಾಲಾ ಕಟ್ಟಡಗಳ ನಿರ್ಮಾಣಕ್ಕಾಗಿ ಸರ್ಕಾರದಿಂದ 17 ಕೋಟಿ ಬಿಡುಗಡೆ ಮಾಡಿಕೊಂಡು ಬಂದಿರುತ್ತೇನೆ ಎಷ್ಟೂ ವರ್ಷಗಳಿಂದ ಆಗ ಬೇಕಾದ ಕೆಲಸಗಳನ್ನು ನಾನು.ಮಾಡುತ್ತಿದ್ದೇನೆ ಮತ್ತು ನನ್ನ ಕ್ಷೇತ್ರದಲ್ಲಿ ಅನೇಕ ಕಾಮಗಾರಿಗಳು ಪ್ರಗತಿ ಇದ್ದು ಇನ್ನು ಹಲವಾರು ಕೆಲಸಗಳನ್ನು ನನ್ನ ಕ್ಷೇತ್ರದಲ್ಲಿ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಗವಾಡ ತಹಸೀಲ್ದಾರರಾದ ಪ್ರಮೀಳಾ ದೇಶಪಾಂಡೆ,ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಾದ ಈರಣಗೌಡ ಎಗನಗೌಡರ, ಜೈಪಾಲ ಯರೊಂಡೋಲೆ,ಶೀತಲ ಪಾಟೀಲ, ಅಮಿತ ಪಾಟೀಲ, ಅಭಿವೃದ್ಧಿ ಅಧಿಕಾರಿಗಳಾದ ಜಿ ಕೆ ಮಿರಾಜಕರ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here