ಬೆಳಗಾವಿ ಪಿರನ್ವಾಡಿ ಯಲ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲು ಅಡ್ಡಿಪಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬೆಳಗಾವಿ ಜಿಲ್ಲಾಡಳಿತದ ನಡೆ ಖಂಡಿಸಿ ಪ್ರತಿಭಟನೆ ಮಾಡುವ ಕುರಿತು.

0

ಶ್ರೀ ಬಿ ಎಸ್ ಯಡಿಯೂರಪ್ಪ
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ ವಿಧಾನಸೌಧ ಬೆಂಗಳೂರು.
ವಿಷಯ. ಬೆಳಗಾವಿ ಪಿರನ್ವಾಡಿ ಯಲ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪಿಸಲು ಅಡ್ಡಿಪಡಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬೆಳಗಾವಿ ಜಿಲ್ಲಾಡಳಿತದ ನಡೆ ಖಂಡಿಸಿ ಪ್ರತಿಭಟನೆ ಮಾಡುವ ಕುರಿತು.
ಮಾನ್ಯರೇ. ಕರ್ನಾಟಕದ ಗಂಡು ಮೆಟ್ಟಿದ ನಾಡು ವೀರರಾಣಿ ಚೆನ್ನಮ್ಮನ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರ ಜನ್ಮಭೂಮಿ ಬೆಳಗಾವಿಯ ಪಿರನ್ವಾಡಿ ವೃತ್ತದಲ್ಲಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಅನುಮತಿ ನಿರಾಕರಿಸುತ್ತಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಬೆಳಗಾವಿ ಜಿಲ್ಲಾಡಳಿತದ ನಡೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ತೀವ್ರವಾಗಿ ಖಂಡಿಸುತ್ತದೆ
ರಾಯಣ್ಣನ ತನ್ನ ಜನ್ಮಭೂಮಿಯಲ್ಲಿ ರಾಯಣ್ಣನ ಪ್ರತಿಮೆಗೆ ಅಧಿಕಾರಿಗಳು ಇಲ್ಲಸಲ್ಲದ ನೆಪ ನೀಡಿ ಅನುಮತಿ ನಿರಾಕರಿಸುವುದು ನಿಜಕ್ಕೂ ನಾಚಿಕೆಗೇಡು ಸಂಭಾಜಿ, ಶಿವಾಜಿ, ತಾನಾಜಿ ಯ ಪ್ರತಿಮೆಯ ಸ್ಥಾಪನೆ ಸಮಯದಲ್ಲಿ ತುಟಿಬಿಚ್ಚದ ಅಧಿಕಾರಿಗಳು ರಾಯಣ್ಣ ಚೆನ್ನಮ್ಮ ಅಮಟೂರ್ ಬಾಳಪ್ಪ ಸೇರಿದಂತೆ ಅನೇಕ ನಾಡ ಸೇನಾನಿಗಳ ಪ್ರತಿಮೆ ಸ್ಥಾಪನೆಗೆ ಮುಂದಾದಾಗ ಸುರಕ್ಷತೆ ಕಾನೂನು ಅನುಮತಿ ಟರಾವು ಭದ್ರತೆ ಸೇರಿದಂತೆ ಕೆಲಸಕ್ಕೆ ಬಾರದ ಕಾರಣಗಳ ನೆಪ ನೀಡಿ ತಡೆಹಿಡಿಯುವ ಕೆಲಸ ಮಾಡುತ್ತಿದ್ದಾರೆ
ಬೆಳಗಾವಿಯ ಮರಾಠಿ ಮತಗಳಿಗಾಗಿ ಅಲ್ಲಿಯ ಕೆಲ ರಾಜಕಾರಣಿಗಳು ಈ ನಿರಾಭಿಮಾನ ದ ಸಂಚಿನ ಮೋಸಕ್ಕೆ ಕನ್ನಡಿಗರು ನಿರಂತರವಾಗಿ ಒಳಗಾಗುತ್ತಲೇ ಬಂದಿರುತ್ತಾರೆ ಬೆಳಗಾವಿ ಕನ್ನಡಿಗರು ತಮ್ಮತನವನ್ನು ಅಭಿಮಾನದಿಂದ ಪ್ರವೇಶಿಸಬೇಕಾದರ,, ಪೊಲೀಸರ ಅನುಮತಿ ಕೇಳುವ ಪರಸ್ಥಿತಿ ಬೆಳಗಾವಿಯಲ್ಲಿ ನಿರ್ಮಾಣವಾಗಿದೆ ರಾಜಕಾರಣಿಗಳು ಮರಾಠಿಯ ಯಾ ಮೋಹಕ್ಕೆ ಕನ್ನಡಿಗ ತನ್ನ ಸಂಪ್ರದಾಯ ಸಂಸ್ಕೃತಿ ಅಭಿಮಾನವನ್ನು ಭಯದಿಂದ ಬಲಿ ನೀಡುವ ಪರಿಸ್ಥಿತಿಗೆ ಬಂದು ನಿಂತಿದ್ದಾನೆ ಕನ್ನಡದ ನೆಲ, ಇಲ್ಲಿ ಕನ್ನಡವೇ ಸಾರ್ವಭೌಮ ಎನ್ನುವಂಥ ಗಂಡೆದೆಯ ರಾಜಕಾರಣದ ಗಂಡನ ಅವಶ್ಯಕತೆ ಬೆಳಗಾವಿ ಜಿಲ್ಲೆಗಿದೆ
ಪಿರನ್ ವಾಡಿ ಜಂಕ್ಷನ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದವರು ಟ್ರಾಫಿಕ್ ಸಮಸ್ಯೆ ನೀಡಿ ರಾಯಣ್ಣ ಪ್ರತಿಭೆಗೆ ಸ್ಥಾಪನೆಗೆ ಅನುಮತಿ ನಿರಾಕರಿಸುತ್ತಿರುವುದು ನಿಜಕ್ಕೂ ದುರಂತ ಅದೇ ರಥದಲ್ಲಿ ಇನ್ನು ಕೆಲವರ ಪ್ರತಿಮೆಗಳಿವೆ ಈ ಪ್ರತಿಮೆಗಳಿಂದ ಟ್ರಾಫಿಕ್ ಸಮಸ್ಯೆ ಉಂಟಾಗುವುದಿಲ್ಲ ವೇ ಎನ್ನುವುದು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಪ್ರಶ್ನೆ? ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಅಧಿಕಾರಿಗಳು ನೀಡುತ್ತಿರುವ ಈ ಸುಳ್ಳು ವರದಿಗಳನ್ನೇ ನಂಬುತ್ತಿರುವ ಬೆಳಗಾವಿಯ ಜಿಲ್ಲಾಡಳಿತ ರಾಯಣ್ಣನಿಗೆ ಅವಮಾನ ಮಾಡುವ ಕೆಲಸ ಮಾಡುತ್ತಿದೆ ನಿಜಕ್ಕೂ ಈ ನಾಡಿನ ದುರಂತ ಇಂತಹ ನೀಚ ಮನಸ್ಥಿತಿಯನ್ನು ಬೆಳಗಾವಿ ಜಿಲ್ಲಾ ಆಡಳಿತ ತಕ್ಷಣ ಬದಲಿಸಿಕೊಳ್ಳಬೇಕು
ಪಿರನ್ವಾಡಿ ಜಂಕ್ಷನ್ನಲ್ಲಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಬೆಳಗಾವಿ ಜಿಲ್ಲಾಡಳಿತವೇ ಯಾವುದೇ ಸಬೂಬು ನೀಡದೆ ಸ್ಥಾಪಿಸಬೇಕು ಒಂದು ವೇಳೆ ಜಿಲ್ಲಾ ಆಡಳಿತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮಾತು ಕೇಳಿ ಅಸಡ್ಡೆತನ ತೋರಿದೆ ಆದರೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಪ್ರತಿಮೆ ಸ್ಥಾಪಿಸಿ ಕ್ರಾಂತಿವೀರ ರಾಯಣ್ಣನಿಗೆ ಗೌರವ ಸಲ್ಲಿಸುವ ಕೆಲಸ ಮಾಡಲಿದೆ ಎಂದು ಈ ಮೂಲಕ ತಿಳಿಸಲು ಇಚ್ಚಿಸುತ್ತೇವೆ ಆ ಸಮಯದಲ್ಲಿ ಏನಾದರೂ ಕಾನೂನು-ಸುವ್ಯವಸ್ಥೆ ದಕ್ಕೆಯಾದರೆ ಅದಕ್ಕೆ ಬೆಳಗಾವಿ ಜಿಲ್ಲಾಡಳಿತವೇ ನೇರವಾದ ಹೊಣೆ ಹೊರಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರ ಸುತ್ತಿದ್ದೇವೆ
ಧನ್ಯವಾದಗಳೊಂದಿಗೆ
ಇದೇ ಸಂದರ್ಭದಲ್ಲಿ
ತಾಲೂಕ ಅಧ್ಯಕ್ಷರು ಉದಯ ಚಿಕ್ಕಣ್ಣವರ್. ಮಾದೇವ ಮುರುಗೋಡ ವಿನಾಯಕ್ ಪಸಲ್ಕರ್ ದೀಪಕ್ ಬಾಳಿಕಾಯಿ ಸಾಗರ್ ಲಮಾಣಿ ಉಮೇಶ್ ಮಾದರ್ ಬಸವರಾಜ್ ಆಡಿನ ಶರೀಫ್ ನದಾಫ್ ದೇವೇಂದ್ರ. ಪಕೀರ ಹುಲಿ ಕಿರಣ್ ಸಂಪಗಾವಿ.
ಮುರುಗೋಡ ಉಪತಹಶೀಲ್ದಾರ್ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು

ಕರ್ನಾಟಕ ರಕ್ಷಣಾ ವೇದಿಕೆ ಸೌದತ್ತಿ ತಾಲೂಕ ಘಟಕ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ ಮುರುಗೋಡ ವತಿಯಿಂದ ಉಪ ತಹಸೀಲ್ದಾರ್ ಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ಮೂಲಕ ನಾಡಕಚೇರಿ ತೆರಳಿ ಮನವಿ ಸಲ್ಲಿಸಲಾಯಿತು

LEAVE A REPLY

Please enter your comment!
Please enter your name here