ಬೆಳಗಾವಿ ಲಾಕ್‍ಡೌನ್‍ಗೆ ಆಗ್ರಹಿಸಿ ಡಾ. ಅರ್ಜುನ ಬಂಡಿ ಜಿಲ್ಲಾಧಿಕಾರಿಗೆ ಮನವಿ

0

ಬೆಳಗಾವಿ ಲಾಕ್‍ಡೌನ್‍ಗೆ ಆಗ್ರಹಿಸಿ ಡಾ. ಅರ್ಜುನ ಬಂಡಿ ಜಿಲ್ಲಾಧಿಕಾರಿಗೆ ಮನವಿ.

ಕೊರೋನಾ ಸೋಂಕು ತಡೆ ಹಿನ್ನೆಲೆಯಲ್ಲಿ ಬೆಂಗಳೂರು,ಹುಬ್ಬಳ್ಳಿ ಸೇರಿ ಹಲವು ನಗರಗಳನ್ನು ಲಾಕ್‍ಡೌನ್ ಮಾಡಲಾಗಿದೆ. ಕೊರೋನಾ ವ್ಯಾಪಕವಾಗುತ್ತಿರುವುದರಿಂದ ಬೆಳಗಾವಿ ನಗರ ಸೇರಿ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಗೊಳಿಸಬೇಕು ಎಂದು ಕರ್ನಾಟಕ ಅಂಬೇಡ್ಕರ್ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಡಾ. ಅರ್ಜುನ ಬಂಡಿ ಮಾಧ್ಯಮದ ಮೂಲಕ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.

ಬುಧವಾರ ಪತ್ರಿಕೆ ಮಾಧ್ಯಮದವರೊಡನೆ ಮಾತನಾಡಿದ ಅವರು ಕೊರೋನಾ ಸೋಂಕು ಬೆಳಗಾವಿ ಜಿಲ್ಲೆಯಲ್ಲಿ ದಿನೆ ದಿನೆ ತೀವ್ರಗತಿಯಲ್ಲಿ ವ್ಯಾಪಿಸುತ್ತಿದೆ. ಮತ್ತು ಜನರು ಸಹ ಜಾಗತಿಕ ಅಂತರವನ್ನು ಕಾಯ್ದುಕೊಳ್ಳುತ್ತಿಲ್ಲ ಆದರಿಂದ ಮುಂದೆ ಆಗುವ ಅನಾಹುತವನ್ನು ತಪ್ಪಿಸಲು ಇನ್ನು 15 ದಿನಗಳಿಂದ ಒಂದು ತಿಂಗಳವರೆಗೆ ಲಾಕ್‍ಡೌನ್ ಅಗತ್ಯವಾಗಿದ್ದು, ಸರ್ಕಾರ ಲಾಕ್‍ಡೌನ್ ಘೋಷಿಸಬೇಕೆಂದು ಬೆಳಗಾವಿ ಜಿಲ್ಲೆಯ ಜನರ ಪರವಾಗಿ ಕೆಳಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here