ಬೆಳಗಾವಿ ವರ್ಷವೊಂದರ ನೂರಾರು ಸಾಧನೆಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳಿಂದ ವರದಿ ವಾಚನ | बेळगावी वर्षातील शेकडो कामगिरीबद्दल माननीय मुख्यमंत्र्यांकडून अहवाल सादर

0

ಬೆಳಗಾವಿ
“ವರ್ಷವೊಂದರ ನೂರಾರು ಸಾಧನೆಗಳ ಕುರಿತು ಮಾನ್ಯ ಮುಖ್ಯಮಂತ್ರಿಗಳಿಂದ ವರದಿ ವಾಚನ”

ಪ್ರಜಾಸೇವೆಯೇ ದೇವರ ಸೇವೆಯೆಂದು ಭಾವಿಸಿ, ವಹಿಸಿಕೊಂಡಿರುವ ಆಡಳಿತದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಿರುವ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪ ಜಿ ನೇತೃತ್ವದ ರಾಜ್ಯ ಸರ್ಕಾರವು ಒಂದು ವರ್ಷದ ಆಡಳಿತಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಈ ಹಿನ್ನೆಲೆಯಲ್ಲಿ, ಮಾನ್ಯ ಮುಖ್ಯಮಂತ್ರಿಗಳು, ರಾಜ್ಯದ ಎಲ್ಲಾ ಸಚಿವರು, ಶಾಸಕರು ಹಾಗೂ ಅಧಿಕಾರಿಗಳನ್ನುದ್ದೇಶಿಸಿ ವಿಡಿಯೋ ಸಂವಾದದ ಮೂಲಕ ಮಾತನಾಡಿದರು ಹಾಗೂ ರಾಜ್ಯ ಸರ್ಕಾರ ಒಂದು ವರ್ಷ ಅವಧಿ ಪೂರ್ಣಗೊಳಿಸಿರುವ ಕುರಿತು ವರದಿ ವಾಚಿಸಿದರು. ಬೆಳಗಾವಿಯ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಈ ಮಹತ್ತರ ಕಾರ್ಯಕ್ರಮವನ್ನು ವೀಕ್ಷಿಸಿದರು.

ನಂತರ, ಬಿಜೆಪಿ ಸರ್ಕಾರವು ಒಂದು ವರ್ಷದಲ್ಲಿ ಕೈಗೊಂಡ ಸಮಗ್ರ ಜನಪರ ಕಾರ್ಯಕ್ರಮಗಳ ಕುರಿತು ಇರುವ ವಿಶೇಷವಾದ “ಪುಟಕ್ಕಿಟ್ಟ ಚಿನ್ನ” ಎಂಬ ಕಿರುಹೊತ್ತಿಗೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಕೇಂದ್ರ ರೇಲ್ವೆ ಸಚಿವರಾದ ಶ್ರೀ ಸುರೇಶ ಅಂಗಡಿ ಜಿ, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಜಿ, ವಿಧಾನಸಭೆಯ ಉಪ ಸಭಾಧ್ಯಕ್ಷರಾದ ಶ್ರೀ ಆನಂದ ಮಾಮನಿ ಜಿ, ರಾಜ್ಯಸಭೆ ಸದಸ್ಯರಾದ ಶ್ರೀ ಈರಣ್ಣ ಕಡಾಡಿ ಜಿ, ವಿಧಾನಪರಿಷತ್ತಿನ ಮುಖ್ಯ ಸಚೇತಕರಾದ ಶ್ರೀ ಮಹಾಂತೇಶ ಕವಟಗಿಮಠ ಜಿ, ಶಾಸಕರಾದ ದುರ್ಯೋಧನ ಐಹೊಳೆ ಜಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಮಹೇಶ್ ಕುಮಠಳ್ಳಿ ಜಿ, ತಾಂಡ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಪಿ.ರಾಜೀವ್ ಜಿ, ಜಿಲ್ಲಾಧಿಕಾರಿಗಳಾದ ಶ್ರೀ ಎಂ.ಜಿ.ಹಿರೇಮಠ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಆಶಾ ಐಹೊಳೆ, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ , ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.

बेळगावी
“वर्षातील शेकडो कामगिरीबद्दल माननीय मुख्यमंत्र्यांकडून अहवाल सादर”

जनसेवा हीच ईश्वर सेवा मानून, सोपविलेल्या प्रशासनाची जबाबदारी विश्वासूपणे निभावत असलेले माननीय श्री.बी.एस. येडियुरप्पा जी, यांच्या नेतृत्वाखालील राज्य सरकारने एक वर्षाचा कार्यकाळ यशस्वीरित्या पूर्ण केला आहे,

या पार्श्वभूमीवर, माननीय मुख्यमंत्र्यांनी व्हिडिओ संभाषणातून राज्यातील सर्व मंत्री, आमदार आणि अधिकाऱ्यांना संबोधित केले आणि राज्य सरकारला एक वर्ष पूर्ण झाल्याबद्दल अहवाल सादर केले. बेळगावमधील जिल्हापंचायत सभागृहात चिक्कोडी लोकसभेचे खासदार माननीय श्री अण्णासाहेब जोल्ले जी यांनी हा महान कार्यक्रम पाहणी केली.

त्यानंतर भाजपा सरकारने जनतेसाठी एका वर्षात हाती घेतलेल्या कार्यक्रमाबाबत असलेल्या खास “पुट्टकिट्ट चिन्न” या पुस्तकाचे अनावरण केले.

यावेळी केंद्रीय रेल्वे राज्यमंत्री श्री सुरेश अंगडी जी, जिल्हा पालकमंत्री श्री रमेश जारकीहोळी जी, विधानसभेचे उपसभापती श्री आनंद मामनी जी, राज्यसभा सदस्य श्री ईरण्णा कडाडी जी, विधानपरिषदेचे मुख्य कार्यकारी श्री महांतेश कवटगीमठ जी, आमदार दुर्योधन ऐहोळे जी, झोपडपट्टी विकास मंडळाचे अध्यक्ष श्री महेश कुमठळ्ळी जी, तांडा विकास महामंडळाचे अध्यक्ष श्री पी. राजीव जी, जिल्हाधिकारी श्री डॉ राजेंद्र के.व्ही, जिल्हा पंचायत अध्यक्ष श्रीमती आशा ऐहोळे, जिल्हा पोलिस प्रमुख श्री लक्ष्मण निंबरगी, अधिकारी, स्थानिक नेते व आदी उपस्थित होते.

LEAVE A REPLY

Please enter your comment!
Please enter your name here