ಬೆಳೆಸಾಲ ಮನ್ನಾ ಮಾಡುವ ಮತ್ತು ಪ್ರತಿ ಹೆಕ್ಟೇರ್ ಗೆ 35000 ರೂಪಾಯಿಗಳ ಬೆಳೆ ಪರಿಹಾರ ಕೊಡುವ ಕುರಿತು.

0

ಹಿರೆಕೇರೂರು
ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ
ವಿಧಾನಸೌಧ
ಬೆಂಗಳೂರು.

ಸನ್ಮಾನ್ಯ ಶ್ರೀ ಬಿ.ಸಿ.ಪಾಟೀಲರು, ಕೃಷಿ ಮಂತ್ರಿಗಳು, ಕರ್ನಾಟಕ ಸರ್ಕಾರ ಇವರ ಮುಖಾಂತರ.

ವಿಷಯ : ಬೆಳೆಸಾಲ ಮನ್ನಾ ಮಾಡುವ ಮತ್ತು ಪ್ರತಿ ಹೆಕ್ಟೇರ್ ಗೆ 35000 ರೂಪಾಯಿಗಳ ಬೆಳೆ ಪರಿಹಾರ ಕೊಡುವ ಕುರಿತು.

ಮಾನ್ಯರೆ..
ನಾನು ಶ್ರೀ ವಿರೇಶ ಸೊಬರದಮಠ ಸ್ವಾಮೀಜಿ ರಾಜ್ಯಾಧ್ಯಕ್ಷರು ರೈತಸೇನಾ ಕರ್ನಾಟಕ. ನರಗುಂದ ಮಹದಾಯಿ ಹೋರಾಟದ ರೈತರ ವೇದಿಕೆಯಿಂದ ರಾಜ್ಯದ ಸಮಸ್ತ ರೈತರ ಪರವಾಗಿ ಕಳಕಳಿಯ ಮನವಿ ಏನೆಂದರೆ .
ಮಾನ್ಯ ಮುಖ್ಯಮಂತ್ರಿಗಳು ರೈತರ ಹಿತಚಿಂತಕರಾಗಿದ್ದು , ತಾವುಗಳು ರೈತ ಹೋರಾಟದಲ್ಲಿ ಮತ್ತು ಸತ್ಯಾಗ್ರಹದಲ್ಲಿ ನಿರಂತರ ಹೋರಾಟ ಮಾಡುತ್ತ ಅಧಿಕಾರದ ಗದ್ದುಗೆಯನ್ನು ಏರಿದ್ದು ನಮಗೆ ಸಂತೋಷದ ಸಂಗತಿ .
ತಾವುಗಳು ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ ರೈತರ ಉಸಿರಾದ ಹಸಿರು ಶಾಲು ಧರಿಸಿಕೊಂಡು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು ನಮ್ಮ ರಾಜ್ಯದ ರೈತರಿಗೂ ಮತ್ತು ನಮಗೂ ಹೆಮ್ಮೆಯ ಸಂಗತಿ.
ಆದರೆ ರಾಜ್ಯದಲ್ಲಿ ರೈತರ ಪರಸ್ಥಿತಿ ಬಹಳ ಚಿಂತಾಜನಕವಾಗಿದೆ .
ಕೊವಿಡ್ 19 ಬಂದಾಗಿನಿಂದ ರೈತನು ತನ್ನ ಕುಟುಂಬ ನಿರ್ವಹಣೆ ಮಾಡುವದು ತುಂಬಾ ದುಸ್ತರವಾಗಿದೆ.
ಮೇಲಿಂದ ಮೇಲೆ ಅತೀವೃಷ್ಟಿಯಿಂದ ರೈತ ಕೈಸುಟ್ಟುಕೊಂಡಿದ್ದಾನೆ .
ಜಮೀನಿನಲ್ಲಿ ಬೆಳೆದ ಬೆಳೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ .
ಆದರೆ ಬೆಳೆವಿಮಾ, ಬೆಳೆ ಪರಿಹಾರ ನೀಡುವಲ್ಲಿ ಸರಕಾರದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.
2019-20 ರ ಸಾಲಿನ ಅತೀವೃಷ್ಟಿಯಿಂದ ಹಾನಿಯಾದ ಬೆಳೆಗಳು ಅತ್ಯಂತ ಕನಿಷ್ಟ ಇಳುವರಿ ಬರದ ರೀತಿಯಲ್ಲಿ ಇರುವದರಿಂದ ರೈತರು ಸಾಲಗಳನ್ನು ಮಾಡಿ ಬೀಜ,ಗೊಬ್ಬರ ತೆಗೆದುಕೊಂಡು ಬಿತ್ತನೆ ಮಾಡಿದ್ದು ಇದರ ಮಧ್ಯ ಕೊರೋನಾ ರೋಗ ರಾಷ್ಟ್ರಾದ್ಯಂತ ಗ್ರಾಮೀಣ ಪ್ರದೇಶ ಸೇರಿದಂತೆ ಹೆಮ್ಮಾರಿಯಾಗಿ ಎಲ್ಲರನ್ನೂ ಆರ್ಥಿಕವಾಗಿ ಕಾಡುತ್ತಿರುವದು ಬಹಳ ದುಖಃಕರ ಸಂಗತಿ .
ಆದ್ದರಿಂದ ಪ್ರತಿ ರೈತರ ಖಾತೆಗಳಿಗೆ ತಲಾ 2 ಲಕ್ಷದಂತೆ ಸಾಲಮನ್ನಾ ಮಾಡಬೇಕು ಮಳೆಯಾಗಿ ಪ್ರವಾಹದಿಂದ ರಾಜ್ಯದ ನೊಂದ ರೈತರಿಗೆ ಪ್ರತಿ ಹೆಕ್ಟೇರ್ ಗೆ 35000 ರೂಪಾಯಿಗಳ ಪರಿಹಾರವನ್ನು ಘೋಷಣೆ ಮಾಡಬೇಕು.
ಈ ಭಾಗದ ಜ್ವಲಂತ ಸಮಸ್ಯೆ ಮಲಪ್ರಭಾ ನದಿಗಳ‌ ಪಕ್ಕ ಪಕ್ಕದಲ್ಲಿ ಇರುವಂತಹ ಗ್ರಾಮಗಳ ಸ್ಥಳಾಂತರ ಕಾರ್ಯವನ್ನು 2008 ರಲ್ಲಿ ಅತೀ ಪ್ರವಾಹದಿಂದ ನೆರೆಹಾವಳಿ ಉಂಟಾದಾಗ ಕೆಲವು ಗ್ರಾಮಗಳ ಸ್ಥಳಾಂತರ
ಮಾಡಿರುತ್ತೀರಿ.
ಉಳಿದ ಗ್ರಾಮಗಳ ಸ್ಥಳಾಂತರ ಪ್ರಕ್ರೀಯೆಯನ್ನು ಕೈಬಿಟ್ಟಿದ್ದು ಈಗ ಆ ಗ್ರಾಮಗಳು ಗಂಡಾಂತರ ಎದುರಿಸುವಂತಾಗಿದೆ ಇದರ ಜೊತೆಗೆ ಮಲಪ್ರಭಾ ನದಿಯ ಹೂಳು ಎತ್ತುವ ಕಾರ್ಯ ಅತೀ ಜರೂರ ಆಗಬೇಕಾಗಿದೆ .
ಮಲಪ್ರಭಾ ನದಿಯ ಹೂಳೆತ್ತುವ ಮತ್ತು ಒತ್ತುವರಿ ತೆರವುಗೊಳಿಸುವ ಕಾರ್ಯ ಆಗಬೇಕೆಂದು ರೈತಸೇನಾ ಕರ್ನಾಟಕ‌ ಸಂಘಟನೆಯ ವತಿಯಿಂದ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತಂದರೂ ಯಾರೂ ಸ್ಪಂದಿಸಿಲ್ಲ
ಅಧಿಕಾರಿಗಳು ಸರಕಾರದ ಗಮನಕ್ಕೆ ತಂದು ಮಲಪ್ರಭಾ ನದಿಯ ಹೂಳು ಎತ್ತುವ ಕಾರ್ಯ ಕೈಗೊಂಡಿದ್ದರೆ ಮಲಪ್ರಭಾ ನದಿಯು ಶಾಂತವಾಗಿ ಸುಗಮವಾಗಿ ಹರಿಯುತ್ತಿತ್ತು ಎಂದು ವೈಜ್ಞಾನಿಕ ಸಮೀಕ್ಷೆ ಇರುತ್ತದೆ
ಕಾರಣ ಮಾನ್ಯ ಮುಖ್ಯಮಂತ್ರಿಗಳು ಮೇಲ್ಕಾಣಿಸಿದ ರೈತರ ಬೇಡಿಕೆಗಳನ್ನು ಈಡೇರಿಸುತ್ತೀರೆಂದು ಭಾವಿಸಿರುತ್ತೇವೆ.
ಧನ್ಯವಾದಗಳೊಂದಿಗೆ

ತಮ್ಮ ವಿಶ್ವಾಸಿ
ಶ್ರೀ ವೀರೇಶ ಸೊಬರದಮಠ ಸ್ವಾಮಿಗಳು
ರಾಜ್ಯಾಧ್ಯಕ್ಷರು ರೈತಸೇನಾ ಕರ್ನಾಟಕ
ಮತ್ತು ಉಪಸ್ಥಿತರಿದ್ದ ರೈತಸೇನಾ ಕರ್ನಾಟಕದ ರಾಜ್ಯ ಸಮೀತಿ ನರಗುಂದ ಮಹಾದಾಯಿ ಹೋರಾಟ ವೇದಿಕೆಯ
ಅಂದಾನಗೌಡ ಪಾಟೀಲ
ಗೌರವಾಧ್ಯಕ್ಷರು.
ವೀರಬಸಪ್ಪ ಹೂಗಾರ
ನರಗುಂದ ವೇದಿಕೆಯ ಅಧ್ಯಕ್ಷರು.
ಫಕೀರಪ್ಪ ಜೋಗಣ್ಣವರ
ರಾಜ್ಯ ಪ್ರಧಾನ ಕಾರ್ಯದರ್ಶಿ.
ಮಲ್ಲಣ್ಣ ಅಲೇಕಾರ
ರಾಜ್ಯ ಸಮೀತಿ ಸದಸ್ಯರು.
ಗುರು ರಾಯನಗೌಡರ
ರಾಜ್ಯ ವಕ್ತಾರರು.
ಸಿದ್ಧಲಿಂಗೇಶ(ವರುಣ) ಪಾಟೀಲ
ಹಾವೇರಿ ಜಿಲ್ಲಾ ಅಧ್ಯಕ್ಷರು.
ಕಿರಣ ಎಮ್ ಪಾಟೀಲ
ರಾಜ್ಯ ಸಮೀತಿ ಸದಸ್ಯರು.
ಪ್ರಶಾಂತ ದುಂಡಿಗೌಡರ
ಹಾವೇರಿ ಜಿಲ್ಲಾ ಉಪಾಧ್ಯಕ್ಷರು.
ಹನಮಂತ ಮಡಿವಾಳರ
ಪ್ರಧಾನ ಕಾರ್ಯದರ್ಶಿ ರಾಮದುರ್ಗ.

 

LEAVE A REPLY

Please enter your comment!
Please enter your name here