ಬೈಪಾಸ್ ರಸ್ತೆಯಲ್ಲಿ ಬಸ್ಸುಗಳಿಗೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

0

ಹರಿಹರ :ತಾಲ್ಲೂಕಿನ ಎಬಿವಿಪಿ ಮುಖಂಡರಿಂದ ಬೈಪಾಸ್ ರಸ್ತೆಗೆ ಹೊಂದಿಕೊಂಡಿರುವ ಗ್ರಾಮಾಂತರ ಪ್ರದೇಶಗಳಿಗೆ ಬಸ್ಸಿನ ಮಾರ್ಗ (ರೂಟ್) ಕ್ಕೆ ಒತ್ತಾ ಯಿಸಿ ಸಿ.ಪಿ.ಐ.ಸಮಕ್ಷಮದಲ್ಲಿ ಕೆಎಸ್ ಆರ್ ಟಿಸಿ ಡಿಪೋ ಮ್ಯಾನೇಜರ್ ಗೆ ನೂರಾರು ವಿದ್ಯಾರ್ಥಿಗಳು ಹಾಗೂ ಮುಖಂಡರು ಮನವಿ ಅರ್ಪಿಸಿದರು.
ನೂತನ ಸೇತುವೆ ಸಂಚಾರಕ್ಕೆ ಪ್ರಾರಂಭವಾದಾಗಿ ನಿಂದ ಈ ಸಮಸ್ಯೆ ಉದ್ಭವವಾಗಿದ್ದು ಎಲ್ಲಾ ಬಸ್ಸು ಗಳು ಈ ಮೂಲಕವೇ ಸಂಚರಿಸುವುದರಿಂದ ಗ್ರಾಮೀಣ ಪ್ರದೇಶಗಳಾದ ಹಿರೇಬಿದರಿ-ಐರಣಿ-ನದಿ ಹರಳಳ್ಳಿ-ಹುಲಿಕಟ್ಟೆ-ವಡೆ ರಾಯನಹಳ್ಳಿ- ಹರಗನ ಹಳ್ಳಿ- ಕುಮಾರಪಟ್ಟಣಂ- ಹಲಸುಬಾಳು-ಹರಗನಹಳ್ಳಿ- ಹನಗವಾಡಿ ಕ್ರಾಸ್ ಮುಂತಾದ ಕಡೆಯಿಂದ ಶಾಲಾ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತುಂಬಾ ತೊಂದರೆಯಾಗಿದೆ.
ಸಿಪಿಐ ಈರಪ್ಪ.ಎಸ್.ಗುರುನಾಥ್ ಅವರ ಕರೆಯ ಮೇರೆಗೆ ಅವರ ಕಚೇರಿಗೆ ಆಗಮಿಸಿದ ಡಿಪೋ ಮ್ಯಾನೇಜರ್ ಮರಳುಸಿದ್ದಪ್ಪ ಅವರು ವಿದ್ಯಾರ್ಥಿಗಳಿಂದ ಮನವಿಯನ್ನು ಸ್ವೀಕರಿಸಿದರು. ಸಾಧ್ಯವಾದಷ್ಟು ಬೇಗನೆ ನಿಮ್ಮ ಬೇಡಿಕೆಯನ್ನು ಪರಿಗಣಿಸಿ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಒಂದೇ ಸಮಯಕ್ಕೆ 50 ರಿಂದ 60 ವಿದ್ಯಾರ್ಥಿ ಗಳು ನಿಯಮಿತವಾಗಿ ಹೋಗಿ ಬರುವುದಾದರೆ ಒಂದು ವಿಶೇಷ ಮಾರ್ಗ(ರೂಟ್ )ವನ್ನು ಮಾಡಿ ಕೊಡಲಾಗುವುದು. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಓಡಾಡಬೇಕು ಎಂದು ಹೇಳಿದ ಅವರು ವಿದ್ಯಾರ್ಥಿಗಳು ಬರೀ ಪ್ರತಿಭಟನೆಗಳಿಗೆ ಮೀಸಲಾಗದೇ ಒಳ್ಳೆಯ ವಿದ್ಯಾಭ್ಯಾಸ ಪಡೆದು ಉನ್ನತ ಉದ್ಯೋಗವನ್ನು ಅಲಂಕಾರಿಸಿರಿ ಎಂದು ಸಲಹೆ ನೀಡಿದರು.
ಸಿಪಿಐ ರವರು ಸಹ ಡಿಪೋ ಮ್ಯಾನೇಜರ್ ಅವರಿಗೆ ನ್ಯಾಯಯುತವಾದ ವಿದ್ಯಾರ್ಥಿಗಳ ಈ ಬೇಡಿಕೆಯನ್ನು ಆದಷ್ಟು ಬೇಗನೆ ನೆರವೇರಿಸಿ ಎಂದು ಒತ್ತಾಯಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಟ್ರಾಫಿಕ್ ಇನ್ಸ್ಪೆಕ್ಟರ್ ಸತೀಶ್, ತಾಲ್ಲೂಕು ಸಂಚಾ ಲಕ ಕುಮಾರ್ ಕೆರೂರ್, ಮುಖಂಡ ವಿದ್ಯಾಧರ, ಕಾರ್ಯಕರ್ತರಾದ ಪ್ರವೀಣ್, ಸಿದ್ದೇಶ್, ರಾಜು, ಗಣೇಶ್ ಅಲ್ಲದೆ ಅನೇಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here