ಬ್ಯಾಂಕ್​ನಲ್ಲಿ ಸಾಲ​ ಪಡೆದು ‘ಜಾಗ್ವಾರ್​’ ಸಿನಿಮಾ ನಿರ್ಮಾಣ; ಹಳೇ ದಿನಗಳ ನೆನಪಲ್ಲಿ ನಿಖಿಲ್​ ಕುಮಾರ್​

0

ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಪುತ್ರ ನಿಖಿಲ್​ ಕುಮಾರ್, 2016ರಲ್ಲಿ ‘ಜಾಗ್ವಾರ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಕನ್ನಡದ ಜತೆಗೆ ತೆಲುಗಿನಲ್ಲಿಯೂ ಸಿದ್ಧವಾಗಿದ್ದ ಆ ಸಿನಿಮಾ ಅಷ್ಟೊಂದು ಸದ್ದು ಮಾಡಿರಲಿಲ್ಲ. ಆದರೆ, ನಿಖಿಲ್​ ಪದಾರ್ಪಣೆ ಸಿನಿಮಾ ಹೇಗಿರಬೇಕಿತ್ತೋ ಅದೇ ರೀತಿಯಲ್ಲಿ ಅದ್ದೂರಿಯಾಗಿಯೇ ನಿರ್ಮಾಣ ಮಾಡಿದ್ದರು ಎಚ್​.ಡಿ ಕುಮಾರಸ್ವಾಮಿ.

ಸಿನಿಮಾ ಬಿಡುಗಡೆಯಾಗಿ ನಾಲ್ಕು ವರ್ಷಗಳೇ ಕಳೆದಿವೆ. ಈಗ್ಯಾಕೆ ಆ ಸಿನಿಮಾ ಬಗ್ಗೆ ಮಾತು ಎಂಬ ಪ್ರಶ್ನೆ ಸಹಜ. ಅದಕ್ಕೂ ಇಲ್ಲಿ ಉತ್ತರವಿದೆ. ಮೊದಲ ಸಿನಿಮಾದ ಬಗ್ಗೆ ನಟ ನಿಖಿಲ್​ ಕುಮಾರ್​ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಬ್ಯಾಂಕ್​ನಲ್ಲಿ ಲೋನ್​ ಪಡೆದು ಜಾಗ್ವಾರ್ ಸಿನಿಮಾ ನಿರ್ಮಾಣ ಮಾಡಲಾಗಿತ್ತು ಎಂದು ಹೇಳಿದ್ದಾರೆ.

ಕೋಟ್ಯಂತರ ರೂಪಾಯಿ ಇದೆ. ರಾಜಕೀಯ ಹಿನ್ನೆಲೆ ಬೇರೆ ಇದೆ. ಇವರಿಗೇನು ಬೇಕಾದಷ್ಟು ಹಣ ತಂದು ಸಿನಿಮಾ ಮಾಡುತ್ತಾರೆ ಎಂದು ಎಷ್ಟೋ ಮಂದಿ ಆಡಿಕೊಂಡಿದ್ದರು. ಆದರೆ, ಅವರ್ಯಾರಿಗೂ ಗೊತ್ತಿರಲಿಲ್ಲ ನಮ್ಮ ತಂದೆ, ಜನತಾ ಸೇವಾ ಕೋ- ಆಪರೇಟಿವ್​ ಬ್ಯಾಂಕ್​ನಲ್ಲಿ ಲೋನ್​ ತೆಗೆದುಕೊಂಡು ಸಿನಿಮಾ ಮಾಡಿದ್ದಾರೆಂದು. ಸಿನಿಮಾ ಬಿಡುಗಡೆ ಆದ ಮೇಲೆ ಒಂದಷ್ಟು ನಷ್ಟವಾಯ್ತು. ಆದರೆ, ಜನ ನನ್ನನ್ನು ಒಪ್ಪಿಕೊಂಡರು ಅದೇ ನನಗೆ ಖುಷಿ ತಂದಿದೆ’ ಎಂದು ಹೇಳಿಕೊಳ್ಳುತ್ತಾರೆ ನಿಖಿಲ್​.

 ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ನಿಖಿಲ್​ ಬಿಜಿಯಾಗಿದ್ದಾರೆ. ಕನ್ನಡದ ಜತೆಗೆ ತೆಲುಗಿನಲ್ಲೂ ತೊಡಗಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here