ಬ್ಯಾಂಕ್ ದಿವಾಳಿ ಎಬ್ಬಿಸಿದವರ ಮನೆ, ಜಮೀನು ಮುಟ್ಟುಗೋಲು!

0

ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನ ಪದಾಧಿಕಾರಿಗಳ 38.16 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ, 7.16 ಕೋಟಿ ರೂ. ಮೌಲ್ಯದ ಬ್ಯಾಂಕ್ ಬ್ಯಾಲೆನ್ಸ್, ಫಿಕ್ಸೆಡ್ ಡಿಪಾಸಿಟ್ ಸೇರಿದಂತೆ ಒಟ್ಟು 45.32 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಈ ಹಿಂದೆ ಬ್ಯಾಂಕ್‌ನ ವಿವಿಧ ಹುದ್ದೆಗಳಲ್ಲಿದ್ದ ರಾಮಕೃಷ್ಣ, ಸತ್ಯನಾರಾಯಣ, ಮಯ್ಯ, ಸಂತೋಷ್‌ಕುಮಾರ್ ಅವರಲ್ಲದೆ, ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಸಿಬ್ಬಂದಿ 2016ರಿಂದ 2019ರವರೆಗೆ ಕೋಟ್ಯಂತರ ರೂ. ಹಣವನ್ನು ಬ್ಯಾಂಕಿನಿಂದ ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿದ್ದರು ಎನ್ನಲಾಗಿದೆ. ಇವರಿಗೆ ಸೇರಿದ ಕೃಷಿ ಭೂಮಿ, ಮನೆ, ಅಪಾರ್ಟ್‌ಮೆಂಟ್ ಮತ್ತಿತರ ಆಸ್ತಿಗಳನ್ನು ಇ.ಡಿ. ಜಪ್ತಿ ಮಾಡಿದೆ.  

ಪದಾಧಿಕಾರಿಗಳು ಬ್ಯಾಂಕಿಂಗ್ ನಿಯಮಗಳನ್ನು ಗಾಳಿಗೆ ತೂರಿ ಸುಮಾರು 1,500 ಕೋಟಿ ರೂ.ನಷ್ಟು ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿದ್ದರು. ಶೇಕಡ 12ರಿಂದ 16ರಷ್ಟು ಬಡ್ಡಿ ಕೊಡುವುದಾಗಿ ಗ್ರಾಹಕರಿಗೆ ಆಸೆ ಹುಟ್ಟಿಸಿದ್ದರು. ಕೆಲವು ಮಹಿಳೆಯರು, ಸರ್ಕಾರಿ ನೌಕರರು, ಹಿರಿಯ ನಾಗರಿಕರು ಇದಕ್ಕೆ ಮರುಳಾಗಿ ದೊಡ್ಡ ಮೊತ್ತವನ್ನು ಠೇವಣಿ ಇಟ್ಟಿದ್ದರು. ಬಳಿಕ ಕೆಲವು ನಿರ್ದೇಶಕರು ಅದೇ ಹಣವನ್ನು ತಮ್ಮ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಆಸ್ತಿ ಖರೀದಿಸಿದ್ದರಲ್ಲದೆ, ಪರಿಚಿತರು-ಸ್ನೇಹಿತರಿಗೆ ಸಾಲ ರೂಪದಲ್ಲಿ ನೀಡಿದ್ದರು. ಅದು ಮರುಪಾವತಿಯಾಗದೇ ಬ್ಯಾಂಕು ಸಂಕಷ್ಟಕ್ಕೆ ಸಿಲುಕಿತ್ತು. ಬ್ಯಾಂಕಿನ ಕೆಲವು ಪದಾಧಿಕಾರಿಗಳು ಮೃತಪಟ್ಟಿದ್ದು, ಇನ್ನು ಕೆಲವರು ತಲೆಮರೆಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here