ಬ್ರಹ್ಮ ಹುಲಿರಾಯ ಇನ್ನಿಲ್ಲ | ತೆರಾಲು ಮತ್ತು ನಾಗಲಹೊಳೆ ಸಿಗುವ ಬ್ರಹ್ಮಗಿರಿಯಲ್ಲಿ ಸೆರೆಯಾದ ಬ್ರಹ್ಮ |

0

“ಬ್ರಹ್ಮ” ಹುಲಿರಾಯ ಇನ್ನಿಲ್ಲ..

ಕೊಡಗು: ದಕ್ಷಿಣ ಕೊಡಗಿನ ಅರಣ್ಯದಂಚಿನ ಗ್ರಾಮದಲ್ಲಿ ಭೀತಿ ಹುಟ್ಟಿಸಿ ಬಳಿಕ ಅರಣ್ಯ ಇಲಾಖೆ ವಶವಾಗಿ, ಮೈಸೂರಿನ ಮೃಗಾಲಯದಲ್ಲಿ ಆಶ್ರಯ ಪಡೆದಿದ್ದ ಬ್ರಹ್ಮ ಹೆಸರಿನ 20 ವರ್ಷ ಹುಲಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ.

ಮಾರ್ಚ್ 18,2008 ರಲ್ಲಿ ವಿರಾಜಪೇಟೆ ತಾಲ್ಲೂಕಿನ ತೆರಾಲು ಮತ್ತು ನಾಗಲಹೊಳೆ ಸಿಗುವ ಬ್ರಹ್ಮಗಿರಿಯಲ್ಲಿ ಸೆರೆಯಾದ ಕಾರಣ ಬ್ರಹ್ಮ ಎಂದು ನಾಮಕರಣ ಮಾಡಲಾಗಿತ್ತು.ಆರಂಭದಲ್ಲಿ ಸಾಕಷ್ಟು ರಂಪಾಟ ಮಾಡಿಕೊಂಡಿದ್ದ ಮೃಗಾಲಯದ ಹಿರಿಯ ಹುಲಿ ದಿನಕಳೆದಂತೆ ಮೃಗಾಲಯದ ಸಿಬ್ಬಂದಿಗಳು, ಕೇಜ್ ಕೀಪರ್ ಗಳಿಗೆ ಹೊಂದಿಕೊಂಡಿತ್ತು.ಕಳೆದ ಎರಡು ವರ್ಷದಿಂದ ಅನಾರೋಗ್ಯ ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ಕೊರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರದಲ್ಲಿಟ್ಟು ಆರೈಕೆ ಮಾಡಲಾಗುತ್ತಿತ್ತು.ಬ್ರಹ್ಮನ ಸಾವಿನಿಂದ ಆತನ ಪಾಲನೆ ಪೋಷಣೆ ಮಾಡುತ್ತಿದ್ದ ಸಿಬ್ಬಂದಿಗಳು ಮತ್ತು ಮೃಗಾಲಯದ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.

ದತ್ತು ಪಡೆದಿದ್ದರುಃ ಯೋಗಗುರು ಬಿ.ಕೆ.ಎಸ್ ಐಯಂಗಾರ್ ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭ ಬ್ರಹ್ಮನನ್ನು 20 ಲಕ್ಷ ಪಾವತಿಸಿ ಜೀವಿತಾವಧಿವರೆಗೂ ದತ್ತು ಪಡೆಯಲಾಗಿತ್ತು.

ಸದ್ಯಕ್ಕೆ ಮೈಸೂರು ಮೃಗಾಲಯದಲ್ಲಿ 10 ಗಂಡು 6 ಹೆಣ್ಣು ಹುಲಿಗಳಿವೆ ಎಂದು ಮೃಗಾಲಯ ಕಾರ್ಯನಿರ್ವಾಹಕ ಅಧಿಕಾರಿ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here