ಭಾರತದಲ್ಲಿ ಕೋವಿಡ್‌ ಲಸಿಕೆ ಪ್ರಯೋಗ ನಿಲ್ಲಿಸಿದ ಸೆರಂ ಇನ್‌ಸ್ಟಿಟ್ಯೂಟ್‌

0

ಆಸ್ಟ್ರಾಜೆನೆಕಾ ಆಕ್ಸ್‌ಫರ್ಡ್ ಕೋವಿಡ್-19 ಲಸಿಕೆಯನ್ನು ಭಾರತದಲ್ಲಿ ಪ್ರಯೋಗಿಸುವುದನ್ನು ನಿಲ್ಲಿಸುತ್ತಿರುವುದಾಗಿ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ (ಎಸ್‌ಐಐ) ಗುರುವಾರ ಹೇಳಿದೆ.

ವಾರದ ಆರಂಭದಲ್ಲಿ ಬ್ರಿಟನ್‌ನಲ್ಲಿ ಕೋವಿಡ್‌ ಲಸಿಕೆ ಪ್ರಯೋಗದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ‘ಖಚಿತವಾಗಿ ವಿವರಿಸಲಾಗದ’ ರೀತಿ ಅಸ್ವಸ್ಥರಾಗಿದ್ದರು. ಅನಂತರ ಆಸ್ಟ್ರಾಜೆನೆಕಾ ಲಸಿಕೆ ಪ್ರಯೋಗವನ್ನು ನಿಲ್ಲಿಸಿತು.

ಆದರೆ, ಭಾರತದಲ್ಲಿ ನಡೆಸಲಾಗುತ್ತಿರುವ ಲಸಿಕೆ ಪ್ರಯೋಗದಲ್ಲಿ ಯಾವುದೇ ತೊಂದರೆ ಕಾಣಿಸಿಕೊಳ್ಳದ ಕಾರಣ ಸೆರಂ ಇನ್‌ಸ್ಟಿಟ್ಯೂಟ್‌ ಪ್ರಯೋಗ ಮುಂದುವರಿಸುವುದಾಗಿ ಬುಧವಾರ ಹೇಳಿತ್ತು.

ಆಸ್ಟ್ರಾಜೆನೆಕಾ ಇತರೆ ರಾಷ್ಟ್ರಗಳಲ್ಲಿ ಆಕ್ಸ್‌ಫರ್ಡ್ ಲಸಿಕೆ ಕ್ಲಿನಿಕಲ್ ಟ್ರಯಲ್‌ಗಳನ್ನು ನಿಲ್ಲಿಸಿರುವ ಕುರಿತು ಮಾಹಿತಿ ನೀಡದಿರುವ ಬಗ್ಗೆ ಕೇಂದ್ರ ಔಷಧ ನಿಯಂತ್ರಕ ಡಿಸಿಜಿಐ ಸೆರಂ ಇನ್‌ಸ್ಟಿಟ್ಯೂಟ್‌ಗೆ ಶೋಕಾಸ್‌ ನೊಟೀಸ್‌ ನೀಡಿದೆ. ಅದರ ಬೆನ್ನಲ್ಲೇ ಸೆರಂ ಇನ್‌ಸ್ಟಿಟ್ಯೂಟ್‌ ‘ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ ಹಾಗೂ ಆಸ್ಟ್ರಾಜೆನೆಕಾ ಪ್ರಯೋಗ ಪುನರಾರಂಭಿಸುವವರೆಗೂ ಭಾರತದಲ್ಲಿಯೂ ಕ್ಲಿನಿಕಲ್‌ ಟ್ರಯಲ್‌ ನಿಲ್ಲಿಸುತ್ತೇವೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here