ಭಾರತೀಯರ ವಿರುದ್ಧ ದ್ವೇಷದ ಮಾತು ಆಡಿದ್ದ ಅಮೆರಿಕ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್

0

ಅಮೆರಿಕದ ಮಾಜಿ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರು ಭಾರತೀಯರ ಬಗ್ಗೆ ಕೀಳು ಅಭಿಪ್ರಾಯ ಹೊಂದಿದ್ದರು. ನಿಕ್ಸನ್‌ ಮತ್ತು ಅವರ ಭದ್ರತಾ ಸಲಹೆಗಾರ ಹೆನ್ರಿ ಕಿಸಿಂಜರ್‌ ಅವರ ಪೂರ್ವಗ್ರಹದ ಅಭಿಪ್ರಾಯಗಳು ಭಾರತ ಮತ್ತು ದಕ್ಷಿಣ ಏಷ್ಯಾ ಕುರಿತ ನೀತಿಗಳ ಮೇಲೆ ಪ್ರಭಾವಿಸಿದ್ದವು ಎಂಬುದು ಶ್ವೇತಭವನದ ಅಧಿಕೃತ ದಾಖಲೆಗಳಿಂದ ಬೆಳಕಿಗೆ ಬಂದಿದೆ.

‘ಅಮೆರಿಕನ್ನರನ್ನು ಈಗಾಗಲೇ ಅಧಿಕಾರ ಮತ್ತು ವರ್ಣಭೇದದ ಸಮಸ್ಯೆಗಳು ಬಾಧಿಸುತ್ತಿವೆ. ಇಂಥ ಸ್ಥಿತಿಯಲ್ಲಿ ಈ ರೀತಿಯ ದಾಖಲೆಗಳು ಮಾಜಿ ಅಧ್ಯಕ್ಷ ರಿಚರ್ಡ್ ಎಂ. ನಿಕ್ಸನ್ ಮತ್ತು ಅವರ ಸಲಹೆಗಾರ ಹೆನ್ರಿ ಕಿಸಿಂಜರ್ ಅವರ ವರ್ಣಭೇದ ನಿಲುವಿನ ಕುರಿತು ಅಚ್ಚರಿಗೊಳಿಸುವಂಥ ಸಾಕ್ಷ್ಯಗಳನ್ನು ಒದಗಿಸಲಿವೆ’ ಎಂದು ಪ್ರಿನ್ಸ್ ಟಾನ್ ಪ್ರೊಫೆಸರ್ ಗ್ಯಾರಿ ಬ್ಯಾಸ್ ಅವರು ‘ನ್ಯೂಯಾರ್ಕ್ ಟೈಮ್ಸ್’ನಲ್ಲಿ ಬರೆದಿರುವ ಲೇಖನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧಿತ ಅಡಕಗಳಿರುವ ದಾಖಲೆಗಳು, ಈ ಇಬ್ಬರ ನಡುವೆ ಓವಲ್ ಕಚೇರಿಯಲ್ಲಿ ಜೂನ್ 1971ರಲ್ಲಿ ನಡೆದಿರುವ ಸಂಭಾಷಣೆಗಳನ್ನು ಒಳಗೊಂಡಿದೆ. ‘ಭಾರತೀಯ ಮಹಿಳೆಯರು ವಿಶ್ವದಲ್ಲಿಯೇ ನಿಸ್ಸಂದೇಹವಾಗಿ ಆಕರ್ಷಣೆಯೇ ಇಲ್ಲದ ಮಹಿಳೆಯರು’ ಎಂದು ದ್ವೇಷಪೂರಿತ ದನಿಯಲ್ಲಿ ಮಾತನಾಡಿರುವುದು ದಾಖಲಾಗಿದೆ ಎಂದು ತಿಳಿಸಿದ್ದಾರೆ.

ರಿಪಬ್ಲಿಕನ್‌ ಪಕ್ಷದ ರಿಚರ್ಡ್ ನಿಕ್ಸನ್ ಅವರು ಅಮೆರಿಕದ 37ನೇ ಅಧ್ಯಕ್ಷರಾಗಿದ್ದರು. 1969ರಿಂದ 1974ರವರೆಗೆ ಅಧ್ಯಕ್ಷರಾಗಿದ್ದರು.

LEAVE A REPLY

Please enter your comment!
Please enter your name here