ಭಾರತ್ ಸ್ಕೌಟ್ಸ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು ಸ್ಥಳಿಯ ಸಂಸ್ಥೆ ಮೂಡಿಗೆರೆ ಇವರ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿನಲ್ಲಿ ವಿವಿದ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು,

0

ಭಾರತ್ ಸ್ಕೌಟ್ಸ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಚಿಕ್ಕಮಗಳೂರು ಸ್ಥಳಿಯ ಸಂಸ್ಥೆ ಮೂಡಿಗೆರೆ ಇವರ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿನಲ್ಲಿ ವಿವಿದ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು, ಈ ಸಂದರ್ಭದಲ್ಲಿ ಕೊರೊನ ಸಂದರ್ಭದಲ್ಲಿ ಸ್ವಯಂ ಸೇವಕರಾಗಿ ಹಾಗೂ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷಾ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರುಗಳಿಗೆ ಗೌರವ ಸಮರ್ಪಿಸಲಾಯಿತು, ಹಾಗೂ ಇದೇ ವೇದಿಕೆಯಲ್ಲಿ ಈ ಸಾಲಿನಲ್ಲಿ ದೇಶಭಕ್ತಿಗೀತೆ ಗೀತಗಾಯನ ಸ್ಪರ್ಧೆಯಲ್ಲಿ ಮತ್ತು ಪೇಂಟಿಂಗ್ ಸ್ಪರ್ದೆಯಲ್ಲಿ ವಿಜೇತರಾದ ಸ್ಕೌಟ್ಸ ಮತ್ತು ಗೈಡ್ಸ್ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು, ಈ ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ ಮತ್ತು ಗೈಡ್ಸ್ ಸ್ಥಳಿಯ ಸಂಸ್ಥೆ ಮೂಡಿಗೆರೆಯ ಚೇರ್ಮನ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಯುತ ಹೇಮಂತ್ ರಾಜ್, ಗೌರವ ಅಧ್ಯಕ್ಷರಾದ ಶ್ರೀಯುತ ಮಗ್ಗಲಮಕ್ಕಿ ಗಣೇಶ್, ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಘಟಕರಾದ ನವೀನ್ ಸರ್, ಉಪಾಧ್ಯಕ್ಷರಾದ ಹಾಗೂ ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀಯುತ ಗಣೇಶಪ್ಪ ಸರ್,ಮೊಹಮ್ಮದ್ ಅಮೀದ್ ಸರ್, ಕಾರ್ಯದರ್ಶಿಗಳಾದ ಶಾಂತಕುಮಾರ್ ಸರ್
ಸಹ ಕಾರ್ಯದರ್ಶಿಗಳಾದ ದಯಾನಂದ್ ಸರ್
ಖಜಾಂಚಿಯಾದ ಜೈಪಾಲ್, ಸ್ಕೌಟ್ಸ ನ ಹಿರಿಯ ಸಲಹೆಗಾರರಾದ ವೆಂಕಟೇಶ್ ಸರ್, ಗೈಡ್ಸ್ ನ ಹಿರಿಯ ಸಲಹೆಗಾರರಾದ ಜೀತಾ ಮೇಡಮ್, ಪದಾಧಿಕಾರಿಗಳಾದ ಪ್ರಶಾಂತ್ ಕಳಸ, ಚೇತನ್ , ಬಸವರಾಜು, ಪೋರ್ಣೇಷ್, ಆತ್ಮೀಯ , ಪೂರ್ಣಿಮಾ, ಶ್ರುತಿ, ಹಾಗೂ ಸ್ಕೌಟ್ಸ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಜರಿದ್ದರು

LEAVE A REPLY

Please enter your comment!
Please enter your name here