ಭಾರತ-ಚೀನಾ ಗಡಿ ವಿಚಾರ: ಪ್ರಧಾನಿ ದೇಶದ ದಾರಿ ತಪ್ಪಿಸಿದ್ದಾರೆ ಎಂದ ರಾಹುಲ್

0

ಭಾರತ-ಚೀನಾ ಗಡಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ದಾರಿ ತಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಭಾರತ ಮೇಲೆ ಚೀನಾ ಅತಿಕ್ರಮಣ ಮಾಡಿದೆ ಎಂಬ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿ ದೇಶದ ದಾರಿ ತಪ್ಪಿಸಿರುವುದು ರಕ್ಷಣಾ ಸಚಿವರ ಹೇಳಿಕೆಯಿಂದ ಸ್ಪಷ್ಟವಾಗಿದೆ ಎಂದು ರಾಹುಲ್ ಟೀಕಿಸಿದ್ದಾರೆ.

ಭಾರತ ಎಂದಿಗೂ ದೇಶದ ಸೈನಿಕರ ಪರವಾಗಿಯೇ ನಿಂತಿದೆ. ಆದರೆ ಮೋದಿ ಯಾವತ್ತು ಚೀನಾದ ವಿರುದ್ಧ ನಿಲ್ಲುತ್ತಾರೆ. ಚೀನಾದಿಂದ ನಮ್ಮ ಭೂಭಾಗವನ್ನು ಯಾವಾಗ ವಾಪಸ್ ಪಡೆಯುತ್ತಾರೆ. ಚೀನಾದ ಹೆಸರು ಉಲ್ಲೇಖಿಸಲು ಭಯಪಡಬೇಡಿ ಎಂದು ರಾಹುಲ್ ಹೇಳಿದ್ದಾರೆ.

ರಾಹುಲ್ ಗಾಂಧಿ ನಿತ್ಯ ಒಂದಲ್ಲಾ ಒಂದು ವಿಚಾರವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿದ್ದಾರೆ.

ಉದ್ಯೋಗ ಕಳೆದುಕೊಂಡಿರುವ ವಲಸೆ ಕಾರ್ಮಿಕರು ಹಾಗೂ ಮೃತಪಟ್ಟಿರುವ ಕಾರ್ಮಿಕರ ಕುರಿತು ಮಾಹಿತಿ ಇಲ್ಲ ಎಂದು ಹೇಳಿಕೆ ನೀಡಿರುವ ಸಚಿವ ಮಾತಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ನಿಮ್ಮ ಬಳಿ ಲೆಕ್ಕವಿಲ್ಲವೆಂದರೆ ಯಾರೂ ಸತ್ತಿಲ್ಲವೆಂದು ಅರ್ಥವೇ ಎಂದು ಪ್ರಶ್ನಿಸಿದ್ದರು.

LEAVE A REPLY

Please enter your comment!
Please enter your name here