ಭಾರತ, ಚೀನಾ ಗಡಿ ಸಂಘರ್ಷ ಸಂದರ್ಭ 400 ಪಾಕ್ ಉಗ್ರರು ಒಳನುಗ್ಗಲು ಯತ್ನ! ವರದಿ

0

ಲಡಾಖ್ ನ ವಾಸ್ತವ ಗಡಿ ನಿಯಂತ್ರಣ ರೇಖೆ(ಎಲ್ ಎಸಿ) ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿದ್ದ ಈ ಸಂದರ್ಭದಲ್ಲಿ ಪಾಕಿಸ್ತಾನ ಅವಕಾಶ ಬಳಸಿಕೊಂಡು ಸುಮಾರು 400 ಉಗ್ರರನ್ನು ಜಮ್ಮು-ಕಾಶ್ಮೀರದೊಳಕ್ಕೆ ಕಳುಹಿಸಲು ಪ್ರಯತ್ನಿಸಿತ್ತು ಎಂಬ ಮಾಹಿತಿ ಬಯಲಾಗಿದೆ.

ಜೀ ನ್ಯೂಸ್ ಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಗಡಿನಿಯಂತ್ರಣ ರೇಖೆಯ ವಿವಿಧ ಲಾಂಚ್ ಪ್ಯಾಡ್ ಗಳಲ್ಲಿ ಸುಮಾರು 400 ಮಂದಿ ಉಗ್ರರು ಅಡಗಿಕೊಂಡಿದ್ದು, ಪಾಕಿಸ್ತಾನ ಸೇನೆಯ ನೆರವಿನೊಂದಿಗೆ ಭಾರತದ ಗಡಿಯೊಳಗೆ ಪ್ರವೇಶಿಸಲು ಹೊಂಚು ಹಾಕುತ್ತಿದ್ದಾರೆ ಎಂದು ವರದಿ ವಿವರಿಸಿದೆ.

ಗುಪ್ತಚರ ಏಜೆನ್ಸಿ ಮಾಹಿತಿ ನೀಡಿದ್ದು, ಗಡಿನಿಯಂತ್ರಣ ರೇಖೆ ಸಮೀಪ ಪಾಕಿಸ್ತಾನ ಸೇನೆ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸುತ್ತಿದ್ದು, ಉಗ್ರರನ್ನು ಭಾರತದೊಳಕ್ಕೆ ಕಳುಹಿಸಲು ನೆರವು ನೀಡುತ್ತಿರುವುದಾಗಿ ತಿಳಿಸಿದೆ.

ಅಲ್ಲದೇ ಭಾರತದ ಭದ್ರತಾ ಪಡೆಯ ಮೇಲೆ ದಾಳಿ ನಡೆಸಲು ಪಾಕಿಸ್ತಾನ ಸೇನೆ ಗಡಿ ಭದ್ರತಾ ಪಡೆ(ಬಿಎಟಿ)ಯನ್ನು ನಿಯೋಜಿಸಿರುವುದಾಗಿ ಹೇಳಿದೆ. ಗಡಿನಿಯಂತ್ರಣ ರೇಖೆಯ ಬಳಿ ಇರುವ ಪಾಕಿಸ್ತಾನದ ಸೇನೆಯ ಶಿಬಿರದೊಳಗೆ ಹಲವು ಉಗ್ರರು ಬೀಡುಬಿಟ್ಟಿರುವುದು ಗಮನಕ್ಕೆ ಬಂದಿರುವುದಾಗಿ ವರದಿ ವಿವರಿಸಿದೆ.
ಗುಪ್ತಚರ ಏಜೆನ್ಸಿ ವರದಿ ಪ್ರಕಾರ, ಗ್ಯುರೆಝ್, ಮಚ್ಚಾಲ್, ಕೇರನ್ ಸೆಕ್ಟರ್, ಟಾಂಗ್ಧಾರ್ ಸೆಕ್ಟರ್, ನೌಗಾಮ್ ಸೆಕ್ಟರ್ ಸಮೀಪ ಭಾರೀ ಪ್ರಮಾಣದಲ್ಲಿ ಉಗ್ರರು ಬೀಡು ಬಿಟ್ಟಿರುವುದಾಗಿ ತಿಳಿಸಿದೆ. ಉರಿ, ಫೂಂಚ್, ಬಿಂಬಾಹಾರ್ ಗಾಲಿ, ಕೃಷ್ಣ ಕಣಿವೆ, ನೌಶೇರಾ, ಅಖ್ನೂರ್ ಮತ್ತು ದ್ರಾಸ್ ಸೆಕ್ಟರ್ ಸಮೀಪ ಉಗ್ರರು ಲಾಂಚಿಂಗ್ ಪ್ಯಾಡ್ ನಲ್ಲಿ ಅಡಗಿಕೊಂಡಿರುವುದಾಗಿ ತಿಳಿಸಿದೆ.

LEAVE A REPLY

Please enter your comment!
Please enter your name here